ಸಂಕೇಶ್ವರ

ಅಬಕಾರಿ ಇಲಾಖೆ ವತಿಯಿಂದ ಮಾದಕ ವಸ್ತುಗಳ ಕುರಿತು ಒಂದು ದಿನದ ಕಾರ್ಯಾಗಾರ

ಅಬಕಾರಿ ಇಲಾಖೆ ವತಿಯಿಂದ ಮಾದಕ ವಸ್ತುಗಳ ಕುರಿತು ಒಂದು ದಿನದ ಕಾರ್ಯಾಗಾರ

ಲೋಕದರ್ಶನ ವರದಿ 

ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದಲ್ಲಿ ಅಬಕಾರಿ ಇಲಾಖೆ ವತಿಯಿಂದ ಮಾದಕ ವಸ್ತುಗಳ ಕುರಿತು ಒಂದು ದಿನದ ಕಾರ್ಯಾಗಾರ ಜರುಗಿತು. 

ಅಬಕಾರಿ ನಿರಿಕ್ಷಕರ ಕಾರ್ಯಾಲಯ ಹುಕ್ಕೇರಿ ಇವರು ಆಯೋಜಿಸಿದ ಕಾರ್ಯಾಗಾರವನ್ನು  ಎಸ್ ಡಿ ವಿ ಎಸ್ ಸಂಸ್ಥೆಯ ಪದವಿ ಪೂರ್ವ  ಮಹಾವಿದ್ಯಾಲಯದ ಸಭಾ ಭವನದಲ್ಲಿ ಚಿಕ್ಕೋಡಿ ಜಿಲ್ಲೆ ಅಬಕಾರಿ ಡಿಎಸ್ಪಿ ಅನಿಲಕುಮಾರ ನಂದೇಶ್ವರ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು. 

 ವೇದಿಕೆ ಮೇಲೆ ಎಸ್ ಡಿ ವಿ ಎಸ್ ಆಡಳಿತಾಧಿಕಾರಿ ಡಾ, ಬಿ ಎ ಪೂಜಾರ, ಪ್ರಕಾರ ಪ್ರಾಚಾರ್ಯ ಪಿಎಸ್‌ಸ್ ಮುನ್ನೋಳಿ,  ಸರ್ವಮಂಗಲಾ ಯರಗಟ್ಟಿ, ಅಬಕಾರಿ ಸಿಪಿಆಯ್‌ಗಳಾದ ವಿಜಯಕುಮಾರ ಮೇಳವಂಕಿ, ಪ್ರವೀಣ ರಂಗಸೂರೆ ಉಪಸ್ಥಿತರಿದ್ದರು. 

ಸಂಪನ್ಮೂಲ ವ್ಯಕ್ತಿಗಳಾದ ಸಹರಾ ಡ್ರಗ್ಸ್‌ ಡಿ ಎಡಿಕ್ಸನ ಸಂಸ್ಥೆಯ ಎಮ್ ಡಿ ಯೂನೂಸ್ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಡಿ ಎಸ್ಪಿ ಅನಿಲಕುಮಾರ ನಂದೇಶ್ವರ ಇತ್ತೀಚಿಗೆ ಮಾದಕ ವಸ್ತುಗಳಿಗೆ ವಿದ್ಯಾರ್ಥಿಗಳು ಬಲಿ ಯಾಗುವ ಪ್ರಕರಣಗಳು ಹೆಚ್ಚುತ್ತಿರುವದರಿಂದ ಮಕ್ಕಳಿಗೆ ಜಾಗ್ರತಿ ಮೂಡಿಸುವ ಉದ್ದೇಶದಿಂದ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೋಳ್ಳಲಾಗುತ್ತಿದೆ ಎಂದರು. 

ಆಡಳಿತಾಧಿಕಾರಿ ಡಾ, ಬಿ ಎ ಪೂಜಾರ ಮಾತನಾಡಿ ಯುವಕರು ಮಾದಕ ವ್ಯಸನಿಗಳಾಗಿ ತಮ್ಮ ಆರೋಗ್ಯ ಹಾಳು ಮಾಡಿಕೋಳ್ಳುತ್ತಿದ್ದಾರೆ, ಇಂದು ಅಬಕಾರಿ ಇಲಾಖೆ ವತಿಯಿಂದ ನಮ್ಮ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಾಗಾರ ದಿಂದ ತಿಳುವಳಿಕೆ ಮೂಡಿಸಲಾಗಿದೆ ಎಂದರು. 

ಪ್ರಾಚಾರ್ಯೆ ಸರ್ವಮಂಗಳಾ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಗ್ರಾಮಿಣ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವದರಿಂದ ಡ್ರಗ್ಸ್‌ ಬಗ್ಗೆ ತಿಳುವಳಿಕೆ ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೋಳ್ಳಲಾಗಿತ್ತು ಎಂದರು. 

ಅಬಕಾರಿ ನಿರಿಕ್ಷಕರಾದ ಪಿ ಡಿ ಗಾರಡೆ, ಕೆ ವಾಯ್ ಪೂಜೇರಿ ಮತ್ತು ಎಸ್‌ಡಿವಿಎಸ್ ಸಂಘದ ಪ್ರಾದ್ಯಾಪಕರು, ವಿದ್ಯಾರ್ಥಿಗಳು ಅಬಕಾರಿ ಇಲಾಖೆ ಸಿಬ್ಬಂದಿಗಳು, ಉಪಸ್ಥಿತರಿದ್ದರು. 


ಸುದ್ದಿ ಓದಿ