ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು: ಸೊಳ್ಳೆ ಕಾಟದಿಂದ ಹೈರಾಣದ ಪಟ್ಟಣದ ನಿವಾಸಿಗಳು
ಯರಗಟ್ಟಿ: ಪಟ್ಟಣದ ಮಧ್ಯ ಭಾಗದಲ್ಲಿ ಚರಂಡಿ ತುಂಬಿ ದುರ್ನಾತ ಬೀರುತ್ತಿದೆ.
ಪಟ್ಟಣ ಪಂಚಾಯತಿ ಅಧಿಕಾರಿಗಳು ಜಾಣ ಕುರುಡುತನದಿಂದ ಕಣ್ಣುಮುಚ್ಚಿ ಕುಳಿತಿದ್ದಾರೆ.
ಗೋಕಾಕ ರೋಡ್, ಬಾಗಲಕೋಟೆ ರೋಡ್, ಸವದತ್ತಿ ರೋಡ್, ಬೆಳಗಾವಿ ರೋಡನ ನಾಲ್ಕು ಚರಂಡಿಗಳು ಕಸದಿಂದ ತುಂಬಿ ದುರ್ನಾತ ಬೀರುತ್ತಿದೆ. ಪಟ್ಟಣ ಪಂಚಾಯತ ಅಧಿಕಾರಿಗಳಿಗೆ ಹಲವಾರುಬಾರಿ ಮನವಿ ಮಾಡಿದರು ಸ್ವಚ್ಛತೆ ಆಗಿಲ್ಲ ಇದರಿಂದ ಸೊಳ್ಳೆಗಳು ಹೆಚ್ಚಾಗಿದೆ.
ಪಟ್ಟಣದಲ್ಲಿ ರೋಗ ಲಕ್ಷಣಗಳು ಹೆಚ್ಚುತ್ತಿದೆ ಆದರೂ ಕ್ಯಾರೇ ಎನ್ನದ ಅಧಿಕಾರಿಗಳ ವಿರುದ್ಧ ಪಟ್ಟಣದ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.
** ಪಟ್ಟಣದ ನಾಲ್ಕು ರಸ್ತೆಗಳ ಚರಂಡಿ ಕಸದಿಂದ ತುಂಬಿ ದುವರ್ಾಸನೆ ಬೀರುತ್ತಿದೆ ಅಲ್ಲದೆ ಪಟ್ಟಣದಲ್ಲಿ ಸೊಳ್ಳೆ ಕಾಟ ಹೆಚ್ಚಾಗಿದೆ ಮತ್ತು ಗೋಕಾಕ ರಸ್ತೆಯ ಕೆವಿಜಿಬಿ ಬ್ಯಾಂಕ್ ಮುಂಬಾಗದಲ್ಲಿ ಚರಂಡಿ ನೀರು ರಸ್ತೆ ಮೇಲೆ ಬಂದು ದುವರ್ಾಸನೆ ಬೀರುತ್ತಿದೆ ಹಾಗೂ ಮೂರು ದಿನದಲ್ಲಿ ಪಟ್ಟಣದಲ್ಲಿ ಗ್ರಾಮದೇವಿ ಜಾತ್ರೆ ಇದೆ ಇದೇ ಮಾರ್ಗವಾಗಿ ದೇವಿ ಮೆರವಣಿಗೆ ಬರುವುದು ಆದರಿಂದ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸ್ವಚ್ಛತೆ ಮಾಡಬೇಕು.
- ಸೋಮು ರೈನಾಪೂರ. ರೈತ ಸಂಘ ಜಿಲ್ಲಾಧ್ಯಕ್ಷರು