ಶಿಗ್ಗಾವ್

ಸಿ ಬಿ ಎಲಿಗರ ಸೇವಾ ಸಂಸ್ಥೆ ವತಿಯಿಂದ ವರದಾ ನದಿಗೆ ಬಾಗಿನ ಅರ್ಪಣೆ

ಸಿ ಬಿ ಎಲಿಗರ ಸೇವಾ ಸಂಸ್ಥೆ ವತಿಯಿಂದ ವರದಾ ನದಿಗೆ ಬಾಗಿನ ಅರ್ಪಣೆ

ಶಿಗಾವಿ 18:  ತಾಲೂಕಿನ ಗಂಗೇಬಾವಿಯ  ಸಿ ಬಿ ಎಲಿಗಾರ ಸೇವಾ ಸಂಸ್ಥೆ ವತಿಯಿಂದ ನಾಡಿನ ರೈತರಿಗೆ ಒಳಿತಾಗಲೆಂದು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನಿರ್ಮಾಣವಾಗಲೆಂದು ಹಾಗೂ ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ವರದಾ ನದಿಗೆ ವಿಶೇಷ ಪೂಜೆ ಸಲ್ಲಿಸಿ ಬಂಕಾಪುರದ ಅರಳಲೇ ಮಠದ ರೇವಣ ಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಿ ಬಿ ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಎಲ್ಲಿಗಾರ ಅವರು ದಂಪತಿ ಪರಿವಾರ ಸಮೇತ ಬಾಗಿನ ಅರ್ಪಿಸಿದರು.  

ಈ ಸಂದರ್ಭದಲ್ಲಿ ಧರ್ಮಪತ್ನಿ ಸುನಿತಾ ಎಲಿಗಾರ, ಆದ್ಯ ಎಲಿಗಾರ, ನಿರ್ದೇಶಕ ಬಸವರಾಜ ಕುರುಗೋಡಿ, ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ