ಯರಗಟ್ಟಿ

ಸೊಪ್ಪಡ್ಲ ಗ್ರಾಪಂನಲ್ಲಿ ಅಕ್ರಮ ವ್ಯವಹಾರದ ವಾಸನೆ : ದಲಿತ ಮುಖಂಡರಿದ ತಾ.ಪಂ. ಇಓಗೆ ಮನವಿ

ಸೊಪ್ಪಡ್ಲ ಗ್ರಾಪಂನಲ್ಲಿ ಅಕ್ರಮ ವ್ಯವಹಾರದ ವಾಸನೆ : ದಲಿತ ಮುಖಂಡರಿದ ತಾ.ಪಂ. ಇಓಗೆ ಮನವಿ

ಯರಗಟ್ಟಿ 11: ತಾಲೂಕಿನ ಸೊಪ್ಪಡ್ಲ ಗ್ರಾಮ ಪಂಚಾಯತನಲ್ಲಿ 2021-22 ಸಾಲಿನಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಎಸ್‌ಸಿ ಎಸ್‌ಟಿ ಸಮುದಾಯದ ಹೆಸರಿನಲ್ಲಿ ಹಣವನ್ನು ದುರ್ಬಳಕೆ ಮಾಡಲಾಗಿದೆ. ಇದಕ್ಕೆ ಕಾರಣರಾದ ಅಧಿಕಾರಿಯನ್ನು ಶೀಘ್ರ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿ ಡಿಎಸ್‌ಎಸ್ ಕಾರ್ಯಕರ್ತರು ತಸೀಲ್ದಾರ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿ ಮನವಿ ಸಲ್ಲಿಸಿದರು. 

15ನೇ ಹಣಕಾಸು ಯೋಜನೆ ಅಡಿಯಲ್ಲಿ ಕ್ರಿಯಾ ಯೋಜನೆ ಇಲ್ಲದೇ 214575 ರೂ.ಗಳನ್ನುತೆಗೆಯಲಾಗಿದೆ. ಇದರಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ 84960 ರೂ.ಗಳಲ್ಲಿ ಶವ ಸಾಗಿಸುವ ವಾಹನ ಖರೀದಿ ಮಾಡಲಾಗಿದೆ ಎಂದು ಬೋಗಸ್ ಬಿಲ್ ಹಚ್ಚಿದ್ದಾರೆ. ಈ ಅವಧಿಯಲ್ಲಿ ಇದ್ದ ಪಿಡಿಒ ಸಂಗಮೇಶ ನರಗುಂದ ಅವರು ಕರ್ತವ್ಯ ಲೋಪವೆಸಗಿ ಭ್ರಷ್ಟಾಚಾರ ಮಾಡಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಜರುಗಿಸಿ ಅಮಾನತ್ತು ಮಾಡಬೇಕು ಹಾಗೂ ಇದಕ್ಕೆ ಸಹಕರಿಸಿ ಗ್ರಾಪಂ ಅಧಕ್ಷರಾಗಿದ್ದ ಸುವರ್ಣಾ ಹೊಸಮಠ ಅವರನ್ನು ಸದಸ್ಯತ್ವ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಮನವಿ ಸ್ವೀಕರಿಸಿದ ತಾಪಂ ಇಒ ಯಶವಂತಕುಮಾರ ಈ ವಿಷಯವಾಗಿ ಸೂಕ್ತ ತನಿಖೆ ಮಾಡಲಾಗುವುದು ಎಂದು ಬರವಸೆ ನೀಡಿದರು. 

ಪ್ರಕಾಶ ತಳವಾರ, ಸುನೀತಾ ಕೊಣ್ಣುರ, ರಂಗಪ್ಪ ಹರಿಜನ, ರಮೇಶ ಗಿಡ್ಡವಗೋಳ, ಸೋಮು ರೈನಾಪೂರ, ಕಾಮಾಕ್ಷಿ ಬಾಜನ್ನವರ, ರೇಷ್ಮಾ ಅಂಗಡಿ, ಪ್ರವೀಣ ತಳವಾರ, ಪುಂಡಲೀಕ ಚನ್ನಮೆತ್ರಿ, ಉದಯ ಮಾಡಮಗೇರಿ, ಲಲಿತಾ ಹುಣಶಿಕಟ್ಟಿ ಇತರರು ಇದ್ದರು. 


ಸುದ್ದಿ ಓದಿ