ಕೃಷ್ಣಾ ನದಿಯಲ್ಲಿ ಹರಿಯುತ್ತಿರುವ ನೀರಿನ ಮಟ್ಟ ವೀಕ್ಷಣೆ
ಜಮಖಂಡಿ 06: ಕೃಷ್ಣಾ ನದಿ ನೀರಿನಲ್ಲಿ ಪ್ರಾಣಹಾನಿಯಾದ ಕುಟುಂಬದವರಿಗೆ ಸರಕಾರದಿಂದ ತಲಾ 5 ಲಕ್ಷ ರೂಗಳ ಪರಿಹಾರ ನೀಡಿದ್ದೆವೆಂದು ಜಿಲ್ಲಾ ಉಸ್ತುವಾರಿ, ಅಬಕಾರಿ ಸಚಿವ ಆರ್,ಬಿ,ತಿಮ್ಮಾಪೂರ ಹೇಳಿದರು.
ತಾಲೂಕಿನ ಪ್ರವಾಹ ಪೀಡಿತ ಆಲಗೂರ, ಕಡಕೋಳ ಗ್ರಾಮಗಳಿಗೆ ಹಾಗೂ ಚಿಕ್ಕಪಡಸಲಗಿಯ ಶ್ರಮಬಿಂದು ಸಾಗರಕ್ಕೆ ಭೆಟ್ಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಜಾನುವಾರು ಇದ್ದವರಿಗೆ ಮೇವು ನೀಡಿ, ಜಾನುವಾರು ಇಲ್ಲದವರಿಗೆ ನಿಡಬೇಡಿ, ಸರಿಯಾಗಿ ವ್ಯವಸ್ಥೆ ಮಾಡಿ ಎಂದು ಜಿಲ್ಲಾಧಿಕಾರಿ ಅವರಿಗೆ ಕೆ,ಎಂ,ಜಾನಕಿ ಅವರಿಗೆ ಸೂಚನೆ ನೀಡಲಾಗಿದೆ. ಸರಕಾರದಲ್ಲಿ ಹಣಕಾಸಿನ ತೊಂದರೆ ಇಲ್ಲ, ಸಮಸ್ಯೆಗಳು ಉಂಟಾಗದಂತೆ ತೀವ್ರ ಕಟ್ಟೆಚ್ಚರ ವಹಿಸಿ, ರೈತರಿಗೆ, ಜಾನುವಾರುಗಳಿಗೆ ಮೇವು ಕೊರತೆ ಆಗದಂತೆ ನಿಗಾ ವಹಿಸಲಾಗುತ್ತದೆ. ಪರಿಸ್ಥಿತಿ ಅವಲೋಕನ ಮಾಡಲಾಗಿದೆ. ನಾವು ಬರುವವರೆಗೂ ಕಾಯಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಹ ನಿಬಾಯಿಸಲು ಅಧಿಕಾರಿಗಳು ಸಮರ್ಕವಾಗಿ ಕಾರ್ಯನಿರ್ವಹಿಸುತಿದ್ದಾರೆ, ಹಾನಿಗಿಡಾಗ ಮನೆಗಳಿಗೆ ಪರಿಹಾರ, ಜಾನುವಾರುಗಳಿಗೆ ಮೇವು ನೀಡುವ ಕಾರ್ಯ ಸರ್ಕಾರ ಮಾಡುತ್ತಿದೆ, ಪ್ರವಾಹ ಇಳಿದ ತಕ್ಷಣ ಎಷ್ಟು ಪ್ರದೇಶದಲ್ಲಿ ಬೆಳೆ ಸೇರಿದಂತೆ ಏನೆನು ಹಾನಿಯಾಗಿ ಎಂದು ಸಮೀಕ್ಷೆ ನಡೆಸಲಾಗುವುದು, ಪ್ರತಿಯೊಂದು ತಾಲೂಕಿನಲ್ಲಿ ಒಂದೊಂದು ಕೋಟಿ ರೂಗಳನ್ನು ತೆಗೆದಿಟ್ಟಿದ್ದಿವೆ. ಮೇವು ಸೇರಿದಂತೆ ಪ್ರವಾಹ ನಿಬಾಯಿಸುವುದಕ್ಕೆ ಸರ್ಕಾರ ಸಮರ್ಕವಾಗಿ ಕಾರ್ಯ ಮಾಡುತ್ತಿದೆ.ಮಹಾರಾಷ್ಟ್ರದಿಂದ ಎಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅಷ್ಟೆ ಪ್ರಮಾಣದಲ್ಲಿ ನೀರನ್ನು ಹೊರ ಹರಿ ಬೀಡುತ್ತಿರುವದರಿಂದ ಸಮಸ್ಯೆ ಉಂಟಾಗುವದಿಲ್ಲ ಎಂದರು.
ಬಿಜೆಪಿ ವಿರುದ್ದ ವ್ಯಂಗವಾಡಿದ ಸಚಿವ :
ಬಿಜೆಪಿ ಪಾದಯಾತ್ರೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಬಿಜೆಪಿಯವರಿಗೆ ಮಾಡುವದಕ್ಕೆ ಬೇರೆ ಕೆಲಸ ಇಲ್ಲ, ಸುಮ್ಮನೆ ಕ್ರಿಯೇಟ್ ಮಾಡುತಿದ್ದಾರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ನೀಚ ಕೆಲಸಕ್ಕೆ ಕೇಂದ್ರ ಸರ್ಕಾರದವರು ಇಳಿದಿದ್ದಾರೆ, ಜನ ಇವರಿಗೆ ಛೀಮಾರಿ ಹಾಕುತಿದ್ದಾರೆ, ಕೇಂದ್ರ ಸರ್ಕಾರದವರು ರಾಜ್ಯಪಾಲರನ್ನು ತಮ್ಮ ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದಾರೆ, ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದರು ಆಗುವುದಿಲ್ಲ, ಸಿದ್ದರಾಮಯ್ಯ ಸಜ್ಜನ ಅವ್ಯವಹಾರದಲ್ಲಿ ತೊಡಗಲಾರದಂತ ವ್ಯಕ್ತಿ. ಬಿಜೆಪಿಯವರು ಸುಳ್ಳನ್ನೆ ಹಬ್ಬಿಸುತ್ತಿದ್ದಾರೆ. ಜನರೆ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ವಾಲ್ಮಿಕ ಹಗರಣ :
ವಾಲ್ಮಿಕ ಹಗರಣದಲ್ಲಿ ಮುಖ್ಯಮಂತ್ರಿಗಳ ಪಾತ್ರ ಏನಿದೆ, ಬ್ಯಾಂಕಿನಲ್ಲಿ ಅವ್ಯವಹಾರ ಆದ್ರೆ ಪ್ರಧಾನ ಮಂತ್ರಿಗಳು ರಾಜೀನಾಮೆ ಕೊಡ್ತಾರಾ, ಹಾಗಾದರೆ ಅವರು ಬ್ಯಾಂಕಿನಲ್ಲಾದ ಹಗರಣಕ್ಕೆ ಅವರು ರಾಜೀನಾಮೆ ನೀಡಿದರೆ ನಮ್ಮ ಮುಖ್ಯಮಂತ್ರಿಗಳು ರಾಜೀನಾಮೆ ಕೊಡ್ತಾರೆ ಎಂದರು.
ಪಾದಯಾತ್ರೆ :
ಪಾದಯಾತ್ರೆ ಮಾಡಲು ಬಿಜೆಪಿಯ ಅರ್ದ ಜನರಿಗೆ ಇಷ್ಟವಿಲ್ಲ, ಕುಮಾರಸ್ವಾಮಿ, ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ ಅವರಿಗೂ ಇವರ ಮಾಡುತ್ತಿರುವುದು ತಪ್ಪು ಅನ್ನುವುದು ಗೊತ್ತಿದೆ, ಬಿಜೆಪಿಯಲ್ಲಿ ಯಾವುದು ಸರಿ ಇಲ್ಲ, ಅವರಿಗೆ ತಕ್ಕ ಉತ್ತರ, ತಕ್ಕ ಪಾಠ ನಮ್ಮ ಸರ್ಕಾರ ಮಾಡುತ್ತದೆ ಎಂದರು.
ನದಿಯ ಪ್ರವಾಹದದಲ್ಲಿ ಸಾವನಪ್ಪಿದ ಆಲಗೂರ ಗ್ರಾಮದ ಸಿದ್ದಪ್ಪ ಅಡಹಳ್ಳಿ ಅವರ ಕುಟುಂಬದ ಸದಸ್ಯರಿಗೆ ಹಾಗೂ ಕಡಕೋಳ ಗ್ರಾಮದ ಸಮೃದ್ಧಿ ತಿಪ್ಪಣ್ಣನವರ ಅವರ ಕುಟುಂಬದ ಸದಸ್ಯರಿಗೆ ಸಚಿವ ಆರ್.ಬಿ.ತಿಮ್ಮಾಪೂರ, ಮಾಜಿ ಶಾಸಕ ಆನಂದ ನ್ಯಾಮಗೌಡ ಸಾಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಸಿಇಓ ಶಶಿಧರ ಕುರೇರ, ಎಸಿ ಶ್ವೇತಾ ಬೀಡಿಕರ, ತಹಸೀಲ್ದಾರ ಸದಾಶಿವ ಮಕ್ಕೋಜಿ ಸೇರಿದಂತೆ ಅಧಿಕಾರಿಗಳು ಹಾಗೂ ಕಾಂಗ್ರೇಸ್ ಮುಖಂಡರು ಇದ್ದರು.
ಶಾಸಕನ ಗುಂಡಾವರ್ತನೆ :
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ, ಪತ್ರಕರ್ತರ ಮೇಲೆ ಗುಂಡಾವರ್ತನೆ ಮೆರೆದ ಶಾಸಕ ಜಗದೀಶ ಗುಡಗುಂಟಿ ಅವರಿಗೆ ರಾಜಕೀಯ ಅನುಭವದ ಕೊರತೆಯಿದೆ. ಅವರು ರಾಜಕೀಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದು ಸಚಿವ ಆರ್,ಬಿ,ತಿಮ್ಮಾಪೂರ ವ್ಯಂಗವಾಡಿದರು.
ಗ್ರಾಮಸ್ಥರ ಮನವಿ ಪತ್ರ ಸಲ್ಲಿಕೆ:
ಪ್ರತಿವರ್ಷ ಮಳೆಗಾಲದಾಗ ನಾವು ಸಂತ್ರಸ್ಥರಾಗ್ತಾ ಇದ್ದಿವಿ ನಮ್ಮಗ 524ರ ಪರಿಹಾರ ಕೊಡಿಸಿ. ನಾವು ಇಲ್ಲಿಂದ ಜಾಗಾ ಖಾಲಿ ಮಾಡ್ತಿವಿ ಶಾಸ್ವತ ಪರಿಹಾರ ಕಲ್ಪಿಸಿ ಎಂದು ಆಲಗೂರ ಗ್ರಾಮದ ಪ್ರಮುಖರು ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರಿಗೆ ಮನವಿ ಪತ್ರ ಸಲಿಸಿದರು.
ಇದದ್ದ ಬಿದ್ದ ಬೆಳಿ ನೀರಾ್ಪಲ ಆಗಿ ಹಾನಿ ಅನಿಭವಿಸುವುದು ನಿರಂತರ ನಡಿದೈತ್ರಿ, ಸರ್ಕಾರ ನಮ್ಮ ಮ್ಯಾಗ ಕಣ್ಣ ತೆರೆದ ನೋಡಿ ನಮಗ ಶಾಸ್ವತ ಪರಿಹಾರ ಕೊಡಿಸ್ರಿ ಎಂದು ತಮ್ಮ ಅಳಲನ್ನು ತೊಡಿಕೊಂಡರು.