ಮಳೆಯಿಂದ ಹಾಳಾದ ಬೆಳೆಗಳ ವೀಕ್ಷಣೆ
ತಾಳಿಕೋಟೆ 18: ಮಳೆಯಿಂದ ಹಾಳಾದ ಬೆಳೆಗಳಿಗೆ ರಾಜ್ಯ ಸರಕಾರದಿಂದ ಶೀಘ್ರದಲ್ಲಿಯೇ ಪರಿಹಾರ ಧನವನ್ನು ನೀಡಲಾಗುವದು ಎಂದು ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಹೇಳಿದರು.
ಅವರು ತಾಲೂಕಿನ ಹೂವಿನಹಳ್ಳಿ, ಗೋಟಖಂಡ್ಕಿ, ಭಂಟನೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳೆ ಹಾನಿ ಪರೀಶೀಲನೆ ನಡೆಸಿ ಮಾತನಾಡಿದರು.
ರಾಜ್ಯದಲ್ಲಿ ಕಂಡು ಕೇಳಿರಿಯದಂತ ಮಳೆ ಆಗಿದೆ. ಇದರಿಂದ ಸಾಕಷ್ಟು ಬೆಳೆ ಹಾಳಾಗಿದ್ದು ರಾಜ್ಯ ಸರಕಾರ ಕೇಂದ್ರದ ನೀಯಮವನ್ನು ಮೀರಿ ಹೆಚ್ಚುವರಿಯಾಗಿ ಪರಿಹಾರವನ್ನು ನೀಡಲಾಗುತ್ತಿದೆ. ಈಗಾಗಲೇ ಅಧಿಕಾರಿಗಳು ಬೆಳೆ ಸಮೀಕ್ಷೆ ನಡೆಸುತ್ತಿದ್ದಾರೆ. ನಿಖರವಾದ ಮಾಹಿತಿಯನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಳೆಯಿಂದ ಹಾನಿಗೊಳಗಾದ ಮನೆಗಳಿಗೂ ಸಹ ಸರಕಾರದ ನಿಯಮದಂತೆ ಪರಿಹಾರವನ್ನು ನೀಡಲಾಗುತ್ತಿದೆ ಎಂದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಸಮೀಕ್ಷೆ ನಡೆಸುವ ಕುರಿತು ಸೂಕ್ತ ಸಲಹೆಗಳನ್ನು ನೀಡಿದರು. ಶೆಳ್ಳಗಿ ಗ್ರಾಮದಲ್ಲಿ ಬಾರಿ ಮಳೆಯಿಂದಾಗಿ ಹಳ್ಳದಲ್ಲಿ ಕುರಿಗಳು ಕೊಚ್ಚಿಕೊಂಡು ಹೋಗಿದ್ದರಿಂದ ಅವರಿಗೆ ಸರಕಾರದಿಂದ ಪರಿಹಾರವನ್ನು ನೀಡಲಾಯಿತು. ಇದಲ್ಲದೇ ಶಾಸಕರು ಸಹ 10 ಸಾವಿರ ರೂಗಳನ್ನು ನೀಡಿ ಮಾನವೀಯತೆ ಮರೆದರು.
ಬೆಳೆ ವಿಮೆಯ ಪರಿಹಾರ ಕೌಂಟರ್ ಆರಂಭಿಸಲು ಸೂಚನೆ : ಬೆಳೆ ವಿಮೆ ತುಂಬಿದ ರೈತರು ಬೆಳೆ ಹಾಳಾದ ಬಗ್ಗೆ ಅರ್ಜಿ ಸಲ್ಲಿಸಲು ಮುದ್ದೇಬಿಹಾಳಕ್ಕೆ ಹೋದರೆ ಅರ್ಜಿ ಸಲ್ಲಿಸುವ ಅವಧಿ ಮುಗಿದಿದೆ ಎಮದು ಹೇಳಿ ಮರಳಿ ಕಳಿಸುತ್ತಾರೆ ಎಂದು ರೈತರು ಅಳಲನ್ನು ತೋಡಿಸಕೊಂಡರು. ತಕ್ಷಣೆ ಸ್ಪಂದಿಸಿದ ಶಾಸಕರು, ತಿರ್ವವಾಗಿ ಮೆಳೆಯಿಂದಾಗಿ ತೊಗರಿ ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿವೆ. ಬೆಳೆ ವಿಮೆಯನ್ನು ತುಂಬಿದ ರೈತರು ಅರ್ಜಿ ಸಲ್ಲಿಸುತ್ತಾರೆ. ಹಾಳಾದ ಬೆಳೆ ವಿಮೆ ಕಂಪನಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಬೇಕು ಹಾಗೂ ತಾಳಿಕೋಟೆ ಪಟ್ಟಣದಲ್ಲಿಯೇ ಅರ್ಜಿಯನ್ನು ಸ್ವೀಕರಿಸುವಂತೆ ಸೂಚನೆ ನೀಡಿದರು. ಅವದು ಮುಗಿದರು ಸಹಿತ ಶನಿವಾರ ಮತ್ತು ಸೋಮವಾರ ಅರ್ಜಿಯನ್ನು ಸ್ವೀಕರಿಸುವದಾಗಿ ಒಪ್ಪಿಕೊಂಡರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಹೇಶಕುಮಾರ ಮಾಲಗತ್ತಿ, ತಹಶೀಲ್ದಾರ ಶ್ರೀಧರ ಗೋಟೂರ, ಕೃಷಿ ಅದಿಕಾರಿ ಮಹೇಸ ಜೋಶಿ, ಮುಖಂಡರುಗಳಾದ ಸಂಗನಗೌಡ ಹೆಗರೆಡ್ಡಿ, ರಾಜುಸಾಹುಕಾರ ಇಬ್ರಾಹಿಂಪೂರ, ಸೋಮನಗೌಡ ಹಾದಿಮನಿ, ಶಾಂತಗೌಡ ಹೊಸಹಳ್ಳಿ, ಪ್ರಭುಗೌಡ ಬಿರಾದಾರ, ಶಂಕ್ರಗೌಡ ದೇಸಾಯಿ, ಶಿವನಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ನಾನಾಗೌಡ ಬಿರಾದಾರ ಸೇರಿದಂತೆ ಇತರರು ಇದ್ದರು.