ಯರಗಟ್ಟಿ

ಪೌಷ್ಟಿಕ ಆಹಾರ ಶಿಬಿರ

ಪೌಷ್ಟಿಕ ಆಹಾರ ಶಿಬಿರ

ಯರಗಟ್ಟಿ 17: ಪಟ್ಟಣದ 10ಅಂಗನವಾಡಿ ಕೇಂದ್ರದಲ್ಲಿ ಬಾಲ ವಿಕಾಸ ಸಮಿತಿ ಆಶ್ರಯದಲ್ಲಿ ಪೌಷ್ಟಿಕ ಆಹಾರ ಶಿಬಿರ ಜರುಗಿತು. 

ಶಿಬಿರ ಕಾರ್ಯಕ್ರಮವನ್ನುಕರವೇ ತಾಲೂಕಾಧ್ಯಕ್ಷ ಡಿ.ಕೆ. ರಫೀಕ್ ಶಿಬಿರ ಉದ್ಘಾಟಿಸಿ ಮಾತನಾಡಿ, "ಮಕ್ಕಳ ಸದೃಢ ಬೆಳವಣಿಗೆಗೆ ಪೌಷ್ಟಿಕ ಆಹಾರ ಅಗತ್ಯ'', ಎಂದರು .ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಐ. ಆರ್‌.ಗಂಜಿ ಮಾತನಾಡಿ, ''ಪಾಲಕರು ಮಕ್ಕಳನ್ನು ಅಂಗನವಾಡಿಗೆ ತಪ್ಪದೇ ಕಳುಹಿಸಬೇಕು'', ನೀಡಿದರು. ಎಂದು ಸಲಹೆ ನೀಡಿದರು.  

ಅಂಗನವಾಡಿ ಮೇಲ್ವಿಚಾರಕಿ ಎಂ. ಎಸ್‌. ಮುಗಳಿಹಾಳ, ಎಸ್‌. ಬಿ. ಬೆಂಡಿಗೇರಿ, ಎನ್‌. ಎಂ. ಹಾರೂಗೊಪ್ಪ, ಎಸ್‌. ಎಂ. ಖಿಲಾರಿ, ರೇಖಾ ಗಿರೆವ್ವಗೋಳ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮುಂತಾದವರಿದ್ದರು. 


ಸುದ್ದಿ ಓದಿ