ನರ್ಸಿಂಗ್ ವಿದ್ಯಾರ್ಥಿಗಳ ಜೀವನ ರಕ್ತದಾನ ಕೇಂದ್ರಕ್ಕೆ ಅಧ್ಯಯನ ಭೇಟಿ
ಜಮಖಂಡಿ 18: ನಗರದ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜೀವನ ರಕ್ತದಾನ ಕೇಂದ್ರದ ಅಧ್ಯಯನಕ್ಕೆ ಭೇಟಿ ನೀಡಿದರು.
ಜೀವನ ರಕ್ತ ಕೇಂದ್ರದ ತಾಂತ್ರಿಕ ರಾಜಶೇಖರಯ್ಯಾ ಅವರು ರಕ್ತದಾನ ಕುರಿತು ಅರ್ಹತೆ. ರಕ್ತ ಘಟಕಗಳ ವಿಂಘಡನೆ, ಸಂಗ್ರಹ, ಭದ್ರತಾ ಕ್ರಮಗಳ ಬಗ್ಗೆ ಹಾಗೂ ರಕ್ತ ಕೇಂದ್ರಕ್ಕೆ ಸಂಬಂಧಪಟ್ಟಂತೆ ಮಾಹಿತಿಯನ್ನು ನರ್ಸಿಂಗ್ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಲ್ಯಾಬ್ ತಾಂತ್ರಿಕರು ಮುಬೀನಾ ಜೋಗಿಮಡ್ಡಿಯವರು ರಕ್ತದ ಗುಣನಿರ್ಣಯ. ರಕ್ತದ ಸುರಕ್ಷತೆ. ಸಾಗಾಣೆಗೆ, ರಕ್ತದ ಹೊಂದಾಣಿಕೆಯ ದೃಢಿಕರಣಗಳ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿಯನ್ನು ನೀಡಿದರು.
ಪ್ರಾಚಾರ್ಯ ಡಾ.ವೀರಭದ್ರಾ್ಪ ಮೆಂಡಗುಡ್ಲಿ ಮಾರ್ಗದರ್ಶನದಲ್ಲಿ ಅಧ್ಯಯನದ ಭೇಟಿಯನ್ನು ಆಯೋಜಿಸಲಾಗಿತ್ತು. ಸಹಾಯಕ ಪ್ರಾಧ್ಯಾಪಕಿ ಶಿವಲೀಲಾ ಸಾರವಾಡ, ಯುಜಿ ನರ್ಸಿಂಗ್ಟ್ಯೂಟರ್ ಸಮರಿನ್ ಅವಟಿ ಸೇರಿದಂತೆ ನರ್ಸಿಂಗ್ ವಿದ್ಯಾರ್ಥಿಗಳು ಇದ್ದರು.ಪೋಟೋ : ಜಮಖಂಡಿ ಬಿ.ಎಲ್.ಡಿ.ಶಿಕ್ಷಣ ಸಂಸ್ಥೆ ನರ್ಸಿಂಗ್ ವಿದ್ಯಾರ್ಥಿಗಳು ಜೀವನ ರಕ್ತದಾನ ಕೇಂದ್ರದ ಅಧ್ಯಯನಕ್ಕೆ ಭೇಟಿ ನೀಡಿದರು.