ಹಳೆ ಹೊನ್ನತ್ತಿ ಗ್ರಾಮದಲ್ಲಿ ನೂಲಿಯ ಚಂದಯ್ಯ ಜಯಂತ್ಯೋತ್ಸವ
ರಾಣೆಬೆನ್ನೂರು 29: ಕಲೆ ಮತ್ತು ಕಲಾವಿದರು ಈ ದೇಶದ ಸಂಸ್ಕೃತಿಯ ಹರಿಕಾರರು. ಕಲಾವಿದರು, ಕೋವಿಡ್ ಪರಿಣಾಮದಿಂದಾಗಿ ಹಲವು ವರ್ಷಗಳಿಂದ ಯಾವುದೇ ಕಾರ್ಯಕ್ರಮಗಳು ಇಲ್ಲದೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಇಲಾಖೆ ಮತ್ತು ಸಾರ್ವಜನಿಕರು ಕಲಾವಿದರ ಪೋಷಣೆಗೆ ಮುಂದಾಗಬೇಕಾದ ಅಗತ್ಯವಿದೆ ಎಂದು ನಿವೃತ್ತ ಶಿಕ್ಷಕ ಜಯಪ್ಪ ಭಜಂತ್ರಿ ಹೇಳಿದರು. ಅವರು ತಾಲೂಕಿನ ಹಳೆ ಹೊನ್ನತ್ತಿ ಗ್ರಾಮದ ಡಾ:ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಶರಣ ನೂಲಿಯ ಚಂದಯ್ಯನವರ 915 ನೇ ಜಯಂತೋತ್ಸವದ ನಿಮಿತ್ತ ಕರಿಯಮ್ಮ ದೇವಿ ಮಹಿಳಾ ಕೊರಮ ಸಮಾಜ ಸ್ವಸಹಾಯ ಸಂಘದ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ, ಕಲಾವಿದ ಬಸವರಾಜ ಬಜಂತ್ರಿ ತಂಡದವರ ಸುಗಮ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಕಲೆ ಮತ್ತು ಕಲಾವಿದರು ಅವಕಾಶಗಳಿಲ್ಲದೆ ತಮ್ಮಲ್ಲಿರುವ ಕಲೆಯನ್ನುಪ್ರದರ್ಶಿಸಲು ಸಾಧ್ಯವಾಗದೆ, ಅವಕಾಶಕ್ಕಾಗಿ ಹುಡುಕಾಡುವಂತಾಗಿದೆ ಎಂದ ಅವರು, ಕಲಾವಿದರು ಸಂತೃಪ್ತಿ ಯಾಗಿದ್ದರೆ ಸಕಲವು ಸಂತೃಪ್ತಿಯಾಗಿ ಇದ್ದಂತೆ ಎಂದರು. ಗ್ರಾಪಂ ಸದಸ್ಯ ಪುಟ್ಟಪ್ಪ ಹ.ಭಜಂತ್ರಿ ಅವರು ದೇಶಿಯ ಕಲೆ ಮತ್ತು ಸಂಸ್ಕೃತಿಯಲ್ಲಿ ಗ್ರಾಮಾಭಿವೃದ್ಧಿ ಪಾತ್ರ ಕುರಿತು ಮಾತನಾಡಿದರು.
ಕ, ಮ, ಕೊ, ಸ, ಸಂಘದ ಅಧ್ಯಕ್ಷ ರತ್ನಮ್ಮ ಬಜಂತ್ರಿ ಅವರು ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಸದಸ್ಯಮಲ್ಲಿಕಾರ್ಜುನ ಭಜಂತ್ರಿ, ಮಂಜಪ್ಪ ಹುಬ್ಬಳ್ಳಿ, ಉಪಾಧ್ಯಕ್ಷ ಫಕ್ಕೀರ್ಪ ಬಜಂತ್ರಿ, ತಿರುಕಪ್ಪ ಮಾಳಗಿ, ಫಕ್ಕಿರೇಶ್ ಬಜಂತ್ರಿ ಪವಿತ್ರಾ ಭಜಂತ್ರಿ, ಶೇಖವ್ವ ಭಜಂತ್ರಿ, ಸುನಿಲ್ ಭಜಂತ್ರಿ, ಚಂದ್ರ್ಪ ಭಜಂತ್ರಿ, ಸೇರಿದಂತೆ ಮತ್ತಿತರ ಗಣ್ಯರು ಸಮಾಜದ ಮುಖಂಡರು ಉಪಸ್ಥಿತರಿದ್ದರು. ಜಯಂತೋತ್ಸವದ ನಿಮಿತ್ತ ನಡೆದ ಶ್ರೀ ಹೊನ್ನಮ್ಮ ದೇವಿ ಕಲಾತಂಡದ ಬಸವರಾಜ ಬಜಂತ್ರಿ ಸಂಗಡಿಗರ ಸುಗಮ ಸಂಗೀತ ಕಾರ್ಯಕ್ರಮವು ಸಾರ್ವಜನಿಕ ಭಕ್ತಾದಿಗಳ ಗಮನಸೆಳೆದವು. ಸುಗಮ ಸಂಗೀತ ಕ್ಕೆ ದುರ್ಗಪ್ಪ ಕೊರವರ್, ಬಸವರಾಜ ಸಾವಕ್ಕನವರ್ ಮತ್ತು ಶ್ರೀಧರ್ ಸಾಥ್ ನೀಡಿದರು.