ಅಥಣಿ

ರಾಜಕೀಯ ಧುರೀಣ ದಿ.ಕಿರಣಕುಮಾರ ಪಾಟೀಲಗೆ ನುಡಿನಮನ

ರಾಜಕೀಯ ಧುರೀಣ ದಿ.ಕಿರಣಕುಮಾರ ಪಾಟೀಲಗೆ ನುಡಿನಮನ

ಅಥಣಿ 11: ರಾಜಕೀಯ ಧುರೀಣ ದಿ.ಕಿರಣಕುಮಾರ ಪಾಟೀಲರ ಒತ್ತಡದ ಪರಿಣಾಮವೇ ನಾನು ರಾಜಕಾರಣಕ್ಕೆ ಪಾದಾರೆ​‍್ಣ ಮಾಡಿದೆ ಎಂದು ಮಾಜಿ ಡಿಸಿಎಮ್ ಲಕ್ಷ್ಮಣ ಹೇಳಿದರು.  

ಅವರು ಸ್ಥಳೀಯ ವರ್ಧಮಾನ ಅರ್ಬನ್ ಕೋ ಆಪ್ ಸೊಸೈಟಿ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಕಿರಣಕುಮಾರ ಪಾಟೀಲ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.  

ಕಿರಣ ಪಾಟೀಲ ಹಾಗೂ ನಾನು 40 ವರ್ಷದಿಂದಲೂ ಸ್ನೇಹಿತರು. ಪ್ರಾರಂಭದಲ್ಲಿ ನನ್ನನ್ನು ಬಿಡಿಸಿಸಿ ಬ್ಯಾಂಕನ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಲು ನಾನು ಹಿಂದೇಟು ಹಾಕಿದ ಸಂದರ್ಭದಲ್ಲಿ ಕಿರಣಕುಮಾರ ಪಾಟೀಲ ನನ್ನ ಮನೆಗೆ ಆಗಮಿಸಿ ನನ್ನ ಸ್ನೇಹ ಬೇಕಾದರೆ ನೀನು ಸ್ಪರ್ಧೆ ಮಾಡಲೇಬೇಕು ಎಂದು ಒತ್ತಡ ಹಾಕಿದ ಪರಿಣಾಮ ನಾನು ಅನಿವಾರ್ಯವಾಗಿ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶ ಮಾಡಿದೆ ಎಂದ ಅವರು ಸ್ನೇಹ ಜೀವಿಯಾಗಿದ್ದ ಕಿರಣಕುಮಾರ ಪಾಟೀಲರು ಜನ ಸಾಮಾನ್ಯರ ಕೆಲಸ ಕಾರ್ಯಗಳನ್ನು ತಮ್ಮ ಸ್ವಂತದ ಕೆಲಸಗಳಂತೆ ಮಾಡುತ್ತಿದ್ದರು ಹೀಗಾಗಿಯೇ ಅವರು ಜನಾನುರಾಗಿಯಾಗಿ ಜೀವನ ನಡೆಸಿದರು ಎಂದರು.  

ಅವರ ಕಾರ್ಯಗಳು ರಾಜಕೀಯ ಮುಖಂಡರಿಗೆ ಪ್ರೇರಣೆ. ಬದಲಾದ ಸಂದರ್ಭದಲ್ಲಿ ನನ್ನ ಹಾಗೂ ಅವರ ನಡುವೆ ರಾಜಕೀಯ ವ್ಯತ್ಯಾಸಗಳಾದವು ಆದರೆ ನಮ್ಮ ಮಧ್ಯದ ಸ್ನೇಹ ಮಾತ್ರ ಮೊದಲಿನಷ್ಟೇ ಇತ್ತು ಎಂದ ಅವರು ತಮ್ಮ ಪುತ್ರಿಗೆ ಸರಕಾರಿ ವೈದ್ಯೆಯನ್ನಾಗಿ ಮಾಡಬೇಕು ಎನ್ನುವ ಕನಸು ಕಂಡಿದ್ದರು. ಈ ಸಂಬಂಧದಲ್ಲಿ ಇತ್ತೀಚಿಗೆ ತಮ್ಮ ಜೊತೆ ಚರ್ಚಿಸಿದ್ದರು. ಆದರೆ ವಿಧಿ ಬೇರೆಯಾಗಿತ್ತು ಅವರು ನಮ್ಮ ಮಧ್ಯೆ ಇಲ್ಲದಿರುವುದು ನೋವಿನ ಸಂಗತಿ ಎಂದು ಭಾವುಕರಾಗಿ ಹೇಳಿದರು.  

ಕೊಳಗೇರಿ ನಿಗಮದ ಅಧ್ಯಕ, ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಕಿರಣಕುಮಾರ ಪಾಟೀಲ ತಮ್ಮ ಇಡೀ ಜೀವಿತಾವಧಿಯಲ್ಲಿ ಮತ್ತೊಬ್ಬರ ಕೆಲಸ, ಕಾರ್ಯಗಳಿಗೆ ದಣಿವರಿಯದೇ ತಮ್ಮನ್ನು ತಾವು ಸಮರ​‍್ಿಸಿಕೊಂಡಿದ್ದರು ಎಂದರು.  

ಆರ್‌.ಎಸ್‌.ಎಸ್ ಕರ್ನಾಟಕ ಉತ್ತರ ಪ್ರಾಂತದ ಸಹ ಸಂಘಚಾಲಕ ಅರವಿಂದರಾವ ದೇಶಪಾಂಡೆ ಮಾತನಾಡಿ, ಸಹಕಾರಿ ಸಂಘಗಳನ್ನು ಪ್ರಾರಂಭಿಸುವುದು ಸುಲಭವಾದ ಕೆಲಸ ಆದರೆ ಈ ಸಹಕಾರಿ ಸಂಘಗಳನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟದ ಕೆಲಸ. ವರ್ಧಮಾನ ಕೋ ಆಪ್ ಸೊಸೈಟಿಯ ಸಂಸ್ಥಾಪನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕಿರಣಕುಮಾರ ಪಾಟೀಲ ಸಂಸ್ಥೆಗೆ ಬೆನ್ನೆಲುಬಾಗಿ ನಿಂತಿದ್ದಲ್ಲದೆ ಸಂಸ್ಥೆಗೆ ಆರ್ಥಿಕ ಬಲ ನೀಡಿದ್ದಾರೆ ಎಂದರು. 

ಸಾನಿಧ್ಯ ವಹಿಸಿ ಮಾತನಾಡಿದ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಜನಪರ ಕಾರ್ಯಗಳಿಗೆ ಆದ್ಯತೆ ನೀಡುತ್ತಿದ್ದ ಕಿರಣಕುಮಾರ ಪಾಟೀಲರು ನಮ್ಮ ಮಠದ ಏಳಿಗೆಯಲ್ಲಿಯೂ ಸಹ ತೆರೆಯ ಮರೆಯಲ್ಲಿ ನಿಂತು ಕಾರ್ಯನಿರ್ವಹಿಸಿದ್ದರು. ಅವರು ಸಾಮಾಜಿಕ ಸಾಮರಸ್ಯದ ದ್ಯೋತಕರಾಗಿದ್ದರು ಎಂದರು.  

ಮಹಾರಾಷ್ಟ್ರದ ನಾಂದಣಿ ಮಠದ ಜೀನ ಸೇನ ಭಟ್ಟಾರಕ ಸ್ವಾಮೀಜಿ, ಹೊಂಬುಜದ ಡಾ.ದೇವೆಂದ್ರಮಕಿರ್ತಿ ಭಟ್ಟಾರಕ ಸ್ವಾಮೀಜಿ, ಸಾನಿಧ್ಯವಹಿಸಿದ್ದ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಮಾತನಾಡಿ ಅವರ ಕಾರ್ಯವನ್ನು ಪ್ರಶಂಶಿಸಿದರು. 

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ವರ್ಧಮಾನ ಅರ್ಬನ್ ಕೋ ಆಪ್ ಸೊಸೈಟಿ ಅಧ್ಯಕ್ಷ ಜಿನಗೌಡ ಪಾಟೀಲ ಮಾತನಾಡಿದರು. ಬಾಬಾಸಾಹೇಬ ಪಾಟೀಲ, ಎ.ಸಿ.ಪಾಟೀಲ, ಶೀತಲ ಪಾಟೀಲ, ಅನಂತ ಬಸರಿಖೋಡಿ, ಡಿವೈಎಸ್‌ಪಿ ಗೀರೀಶ, ಸಿಪಿಐ ಶಂಕರಗೌಡ, ವರ್ಧಮಾನ ಸೊಸೈಟಿಯ ಕಾರ್ಯದರ್ಶಿ ಬಾಹುಬಲಿ ಉಪಾಧ್ಯಾಯ ಸೇರಿದಂತೆ ಸೊಸೈಟಿಯ ಆಡಳಿತ ಮಂಡಳಿ ಸದಸ್ಯರು, ಕಿರಣ ಪಾಟೀಲ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅರುಣ ಯಲಗುದ್ರಿ ವಂದಿಸಿದರು, ಮುರುಘೇಶ ಬಾನಿ ನಿರೂಪಿಸಿದರು. ಕಾರ್ಯಕ್ರಮದ ನಂತರ ಒಂದು ನಿಮಿಷ ಮೌನ ಆಚರಿಸಲಾಯಿತು. 


ಸುದ್ದಿ ಓದಿ