ಅಕ್ರಮ ಸಾರಾಯಿ ಬಂದ್ಗೆ ಸೂಚನೆ
ತಾಳಿಕೋಟೆ 03: ಗ್ರಾಮೀಣ ಭಾಗದಲ್ಲಿ ಅಕ್ರಮ ಸಾರಾಯಿ ಮಾರಾಟವನ್ನು ತಡೆಗಟ್ಟಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುದ್ದೇಬಿಹಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ಕೈಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ದೂರನ್ನು ನೀಡಲಾಗಿದೆ ಎಂದು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಅಧ್ಯಕ್ಷ, ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕಟ್ಟಡ ಹಾಗೂ ಮಿಣಜಗಿ ಗ್ರಾಮಕ್ಕೆ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಮತಕ್ಷೇತ್ರದ ಹಲವು ಗ್ರಾಮಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಅಕ್ರಮ ಸಾರಾಯಿ ಮಾರಾಟದಿಂದ ಹಲವು ಕುಟುಂಬಗಳು ನೆಮ್ಮದಿ ಹಾಳಾಗಿದೆ. ಯುವಕರು ದುಶ್ಚಟದಿಂದ ಬಲಿಯಾಗುತ್ತಿದ್ದಾರೆ. ಅಕ್ರಮ ಸಾರಾಯಿ ಮಾರಾಟ ಮಾಡುವದನ್ನು ತಡೆಯುವದು ನನ್ನ ಮೊದಲ ಕರ್ತವ್ಯವಾಗಿದೆ. ಲೈಸನ್ಸ ಇಲ್ಲದೇ ಮಾರಾಟ ಅಪರಾಧವಾಗಿದೆ. ಪರವಾನಿಗೆ ಪಡೆದುಕೊಂಡು ಸರಾಯಿ ಮಾರಾಟ ಮಾಡುವವರಿಗೆ ತೊಂದರೆ ಕೊಡುವದು ನಮ್ಮ ಉದ್ದೇಶವಲ್ಲ. ಅಕ್ರಮವಾಗಿ ಸಾರಾಯಿ ಮಾರಾಟ ನಿಲ್ಲಬೇಕು. ಯಾವ ಹಳ್ಳಿಗೂ ಹೋದರು ಸಹಿತ ಅಕ್ರಮ ಸರಾಯಿ ಬಂದ್ ಮಾಡಿಸುವಂತೆ ಮಹಿಳೆಯರು ಬೇಡಿಕೆ ಇಡುತ್ತಾರೆ. ಅದಕ್ಕೆ ನನ್ನ ಮತಕ್ಷೇತ್ರದಲ್ಲಿ ಅಕ್ರಮವಾಗಿ ಸಾರಾಯಿ ಬಂದ್ ಮಾಡಿಸುವ ಕ್ರಮ ಮುಂದಾಗಿದೆ. ಮುದ್ದೇಬಿಹಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭಕಾರಿ ಅಧಿಕಾರಿಗಳು ಅಕ್ರಮಕ್ಕೆ ಕುಮ್ಮಕ್ಕು ನೀಡುವ ಆರೋಪ ಅವರ ಮೇಲಿದೆ. ನಾನು ಕ್ರಮಕ್ಕೆ ಸೂಚಿಸಿದರೂ ಅವರು ದುರಂಹಕಾರಿಯಾಗಿ ವರ್ತಿಸುತ್ತಿದ್ದಾರೆ. ಹಿಗಾಗಿ ಅವರ ವಿರುದ್ದ ಕ್ರಮಕ್ಕೆ ಸಿಎಂಗೆ ದೂರನ್ನು ನೀಡಲಾಗಿದೆ. ಅಕ್ರಮ ಸಾರಾಯಿ ಮಾರಾಟದ ವಿರುದ್ದ ಕ್ರಮ ಕೈಕೊಳ್ಳುವಂತೆ ಈಗಾಗಲೇ ಜಿಲ್ಲಾ ಅಭಕಾರಿ ಅಧಿಕಾರಿಗೆ, ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಎರಡು ಮೂರು ದಿನದಲ್ಲಿ ಕ್ರಮ ಕೈಕೊಳ್ಳುವಂತೆ ಕೋರಲಾಗಿದೆ. ಅಕ್ರಮವಾಗಿ ಮಾರಾಟ ಮಾಡುವವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ. ಅಕ್ರಮದಲ್ಲಿ ಭಾಗಿಯಾದವರ ಯಾವ ಮುಲಾಜಿಲ್ಲದೇ ಕ್ರಮ ಕೈಕೊಳ್ಳಬೇಕು. ನಮ್ಮವರು ತಮ್ಮವರು ಎಂಬುವದಿಲ್ಲ. ಎರಡು ಮೂರು ದಿನದಲ್ಲಿ ಅಕ್ರಮ ಸರಾಯಿ ವಿರುದ್ದ ಕ್ರಮ ಕೈಕೊಳ್ಳದಿದ್ದರೆ ಜನ ಬೀದೀಗೀಳಿಯಬೇಕಾಗುತ್ತದೆ. ಮನೆ ಮನೆ ನಳಗಳ ಸಂಪರ್ಕ ಮತಕ್ಷೇತ್ರದಾಧ್ಯಂತ ನೀಡಲಾಗುತ್ತಿದೆ. ಶುದ್ದ ಕುಡಿಯುವ ನೀರಿನ ಒದಗಿಸುವ ಯೋಜನೆಯ ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ಉದ್ಯೋಗ ಸೃಷ್ಠಿಯಂತಹ ಯೋಜನೆಗಳನ್ನು ಹಾಕಿಕೊಂಡಿದ್ದು ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸಲಾಗುವದು. ಅದಕ್ಕಾಗಿ 525 ಕೋಟಿ ವೆಚ್ಚದಲ್ಲಿ ಎಥಿನಾಲ್ ಘಟಕವನ್ನು ಆರಂಭಿಸಲಾಗುವದು ಎಂದರು.
ನಂತರ ಬಳಗಾನೂರ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆಯನ್ನು ನೀಡಿ ಸಾರ್ವಜನಿಕರ ಅಹವಾಲುಗಳನ್ನು ಸ್ವಿಕರಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಬಸನಗೌಡ ವಣಕ್ಯಾಳ, ಟಿಎಚ್ಓ ಡಾ.ಸತೀಶ ತಿವಾರಿ, ಡಾ.ಶ್ರೀಶೈಲ ಹುಕ್ಕೇರಿ, ಆರ್ಡಬ್ಲುಎಸ್ದ ಎಇಇ ಜೆ.ಪಿ.ಶೆಟ್ಟಿ, ಮುಖಂಡರಾದ ಶಶಿಧರ ಬೆಣ್ಣೂರ, ಡಿ.ಕೆ.ಪಾಟೀಲ, ರಾಮನಗೌಡ ಪಾಟೀಲ, ಪಿ.ಬಿ.ಪಾಟೀಲ, ಬಾಬು ಯಾಳವಾರ, ಆರ್.ಸಿ.ಜಂಬಗಿ, ಶಿವು ನಾಯಕ, ಸಿದ್ದನಗೌಡ ಬಿರಾದಾರ(ಮುರಾಳ), ಸಂಗನಗೌಡ ಬಿರಾದಾರ, ಬಳಗಾನೂರ ಗ್ರಾಮದ ಮುಖಂಡರಾದ ಚಂದ್ರಶೇಖರ ದೇಸಾಯಿ, ರಾಮನಗೌಡ ದೊರನಳ್ಳಿ, ಸಿದ್ದನಗೌಡ ಹುಬ್ಬಳ್ಳಿ, ಶಿವನಗೌಡ ಪಾಟೀಲ, ಮಂಜುಳಾ ತಾಯಿ, ಪ್ರಭುಗೌಡ ಪಾಟೀಲ, ಶಾಂತಗೌಡ ದೋರನಹಳ್ಳಿ, ಮುತ್ತಣ್ಣ ಹುಗ್ಗಿ, ಸಂಗಮ್ಮ ದೇವರಳ್ಳಿ, ಅಮರೇಶ ಪಾಟೀಲ ಸೇರಿದಂತೆ ಇತರರು ಇದ್ದರು.