ಶಿಗ್ಗಾವ್

ಮೀಸಲಾತಿ ಕ್ಷೇತ್ರವನ್ನು ಪುನಃ ಪರೀಶೀಲಿಸಬೇಕೆಂದು ಸೂಚನೆ

ಮೀಸಲಾತಿ ಕ್ಷೇತ್ರವನ್ನು ಪುನಃ ಪರೀಶೀಲಿಸಬೇಕೆಂದು ಸೂಚನೆ

ಶಿಗ್ಗಾವಿ 05: ತಾಲೂಕಿನ ಅತ್ತೀಗೇರಿ ತಾಲೂಕಾ ಪಂಚಾಯತ ಮತಕ್ಷೇತ್ರವು ಪದೇ ಪದೇ ಒಂದೇ ಮೀಸಲಾತಿ ಬರುತ್ತಿದ್ದು ತಾಲೂಕಾ ಪಂಚಾಯತನ ಮೀಸಲಾತಿ ಕ್ಷೇತ್ರವನ್ನ ಪುನ: ಪರೀಶೀಲಿಸಿ ಅನುಸೂಚಿತ ಪಂಗಡ ಬರದೇ ಇರುವ ಕ್ಷೇತ್ರವಾದ ಹಿರೇಬೆಂಡಿಗೇರಿ ತಾಲೂಕಾ ಪಂಚಾಯತ ಕ್ಷೇತ್ರವನ್ನು ಅನುಸೂಚಿತ ಪಂಗಡ ಮತಕ್ಷೇತ್ರವೆಂದು ಅಧಿಸೂಚನೆ ಹೊರಡಿಸಬೇಕೆಂದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಗಳಿಗೆ ಆ ಭಾಗದ ಮುಖಂಡರುಗಳಾದ ಯಲ್ಲಪ್ಪ ಹಂಚನಿಮನಿ, ಶಿವಾಜಿ ತಮ್ಮಣ್ಣವರ ಹಾಗೂ ಕೋಟೆಪ್ಪ ಹಡಪದ ಇವರುಗಳು ಲಿಖಿತ ತಕರಾರು ಅರ್ಜಿ ಸಲ್ಲಿಸಿ ಮನವಿ ಮೂಲಕ ತಿಳಿಸಿದ್ದಾರೆ. 

ಕಳೆದ ಮೂರು ಅವಧಿಯಿಂದ ಎಸ್‌.ಟಿ ಮೀಸಲಾತಿಯೇ ಬರುತ್ತಿದೆ ಆದ್ದರಿಂದ ಕರಡು ಅಧಿಸೂಚನೆ ಸಂಖ್ಯೆ ರಾ.ಚು.ಆ/69/(ತಾಪಂವೀ) ಟಿಜೆಡ್ ಪಿ/2021. ದಿ.01-07-2021 ನೇದ್ದರ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಮೀಸಲಾತಿಯನ್ನ ಪುನ: ಪರೀಶಿಲಿಸುವಂತೆ ಪೂರಕ ದಾಖಲಾತಿಗಳನ್ನ ಸಲ್ಲಿಸಿ ಒತ್ತಾಯಿಸಿದ್ದಾರೆ. 


ಸುದ್ದಿ ಓದಿ