ನೋಟರಿ ವ್ಹಿ. ಜಿ. ಬಿರಾದಾರ ಪಾಟೀಲ ನೂತನ ಕಚೇರಿ ಉದ್ಘಾಟನೆ
ಯರಗಟ್ಟಿ: ಪಟ್ಟಣದ ರೆಬ್ಬನ್ನವರ ಕಾಂಪ್ಲೆಕ್ಸನಲ್ಲಿ ನೂತನವಾಗಿ ನೇಮಕಗೊಂಡ ನೋಟರಿ ಪಬ್ಲಿಕ್ ವ್ಹಿ. ಜಿ. ಬಿರಾದಾರಪಾಟೀಲ ಮತ್ತು ನ್ಯಾಯವಾದಿ ಎನ್. ಆಯ್. ನೇಗಿನಾಳ ಅವರ ನೂತನ ಕಚೇರಿಯ ಉದ್ಘಾಟನೆ ಜರುಗಿತು.ಈ ವೇಳೆ ನ್ಯಾಯವಾದಿ ಸಂಘದ ಅಧ್ಯಕ್ಷ ಎಸ್. ಆರ್. ರೆಬ್ಬನ್ನವರ, ನ್ಯಾಯವಾದಿಗಳಾದ ಸಿ. ಬಿ. ಯಡ್ಡಹಳ್ಳಿ, ನಿವೃತ್ತ ತಹಶೀಲ್ದಾರ ಬಾಬಣ್ಣಾ ತಳವಾರ, ಮಹಾಂತೇಶ ಅಡಕಿ, ಸಂಜು, ಕಲಾಲ, ಫೀರೋಜ ಖಾದ್ರಿ, ಈರಣ್ಣಾ ಹುಲ್ಲೂರ, ಶಂಕರ ಬೂಸಣ್ಣವರ ಸೇರಿದಂತೆ ಅನೇಕರು ಇದ್ದರು.