ಗಿಡ ನೆಟ್ಟರೆ ಸಾಲದು, ಪೋಷಿಸಿ ಬೆಳೆಸಿ : ಎಂ.ಕೆ.ಮುಗಳಿ
ಹಗರಿಬೊಮ್ಮನಹಳ್ಳಿ .09: ಪರಿಸರ ದಿನಾಚರಣೆಯ ಪ್ರಯುಕ್ತ ಗಿಡ ನೆಟ್ಟರೆ ಸಾಲದು, ನೆಟ್ಟ ಗಿಡವನ್ನು ಪೋಷಿಸಿ ಬೆಳೆಸಿದರೆ ಮಾತ್ರ ನೆಟ್ಟ ಗಿಡಕ್ಕೂ ಆಸರೆ ಹಾಗೂ ಆಚರಿಸಿದ ದಿನಾಚರಣೆಗೂ ಅರ್ಥ ಬರುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಮುಗಳಿ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡ ನೆಟ್ಟು ಅವರು ಮಾತನಾಡಿದರು. ಇಂದು ನಾವು ಉತ್ತಮ ಗಾಳಿ ಸೇವಿಸಿ ಆರೋಗ್ಯದಿಂದ ಇದ್ದೇವೆ ಎಂದರೆ ಅದು ಪರಿಸರ ನೀಡಿದ ಭಿಕ್ಷಯಾಗಿದೆ ಹಾಗೆಯೇ ಆ ಪರಿಸರವನ್ನು ಅಳಿವಿನಂಚಿಗೆ ತಳ್ಳದೇ ಹಾಳು ಮಾಡದೇ ನಮ್ಮ ಮುಂದಿನ ಪೀಳಿಗೆಗೆ ಉಳಿಸುವ ಕಾರ್ಯ ಪ್ರತಿಯೊಬ್ಬರೂ ಮಾಡಡಬೇಕಿದೆ.ಪರಿಸರದ ನಾಶ ಮನು ಕುಲದ ನಾಶ ಎಂಬುದರಲ್ಲಿ ಅನುಮಾನವಿಲ್ಲ. ಇಂದು ಕೇವಲ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಟ್ಟು ದಿನಾಚರಣೆ ಸಾಗಿಹಾಕುವುದಲ್ಲ ಮನುಷ್ಯನಿಗೆ ಪರಿಸರ ಪ್ರತಿ ನಿಮಿಷ ಊರುಗೋಲಾಗಿದೆ ಅದರ ಮೇಲೆ ನಾವು ದೌರ್ಜನ್ಯ ಮಾಡುತ್ತಿರುವುದು ಸಮಂಜಸವಲ್ಲ ಆದರೆ ಅದೇ ಪರಿಸರ ಮುನಿಸಿಕೊಂಡರೆ ಉಹೆಗೂ ನಿಲುಕದ ಸಮಸ್ಯೆ ಎದುರಾಗುವುದರಲ್ಲಿ ಅನುಮನವಿಲ್ಲ ಹಾಗಾಗಿ ಪರಿಸರ ಸಂರಕ್ಷಣೆ ನಮ್ಮೆಲರ ಹೊಣೆಯಾಗಿದೆ, ಗಿಡಗಳನ್ನು ನೆಟ್ಟು ಅದರ ಸಂಫೂರ್ಣ ಪೋಷಣೆ ಮಾಡುವಂತೆ ಕರೆ ನೀಡಿದರು.
ಈ ಸಂಧರ್ಭದಲ್ಲಿ ಪುರಸಭೆ ಕಂದಾಯ ಅಧಿಕಾರಿ ಮಾರೆಪ್ಪ, ಕಛೇರಿ ವ್ಯವಸ್ಥಾಪಕ ಚಂದ್ರಶೇಖರ, ಸಿಬ್ಬಂದಿಗಳಾದ ಪ್ರಭಾಕರ, ಅರೋಗ್ಯ ಸಹಾಯಕಿ ಜಯಲಕ್ಷ್ಮೀ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.