ಅಥಣಿ

ಪಕ್ಷೇತರ ಅಭ್ಯರ್ಥಿ ಸಂದೀಪ ಬುರುಡ ಬಿಜೆಪಿಗೆ ಬೆಂಬಲ

ಪಕ್ಷೇತರ ಅಭ್ಯರ್ಥಿ ಸಂದೀಪ ಬುರುಡ ಬಿಜೆಪಿಗೆ ಬೆಂಬಲ

ಲೋಕದರ್ಶನ ವರದಿ 


ಅಥಣಿ 22: ಡಿಸೆಂಬರ 27ರಂದು ಜರುಗಲಿರುವ ಅಥಣಿ ಪುರಸಭೆ ಚನಾವಣೆಯಲ್ಲಿ  

ವಾರ್ಡ 26 ರಲ್ಲಿ ಪಕ್ಷೇತರ ಅಭ್ಯರ್ಥಿ ಸಂದೀಪ ಬುರುಡ ಇವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಬಿಜೆಪಿ ಅಭ್ಯರ್ಥಿ ಬಸವರಾಜ ನಾಯಿಕ ಪರವಾಗಿ ಮತಯಾಚನೆ ಮಾಡಿ ಬಿಜೆಪಿ ಪಕ್ಷ ಸೇರೆ​‍್ಡಯಾಗಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಚಿದಾನಂದ ಸವದಿ ಹೇಳಿದರು. ವಾರ್ಡ 26 ಬಿಜೆಪಿ ಪ್ರಚಾರ ಕಾರ್ಯಾಲಯದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು. 

   ಈ ವಾರ್ಡದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ನಾಯಿಕ ಇವರ ಪ್ರಚಾರ ಭರ್ಜರಿಯಾಗಿ ಸಾಗುತ್ತಿದೆ. ಇವರ ಪರವಾಗಿ ವ್ಯಾಪಕ ಜನ ಬೆಂಬಲ ದೊರಕುತ್ತಿದೆ. ಈ ವೇಳೆ ಅನೀಲ ದೇಶಪಾಂಡೆ, ಅಣ್ಣಸಾಹೇಬ ನಾಯಿಕ, ರಾಜು ಇನಾಮದಾರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ವಾರ್ಡ 26 ಬಿಜೆಪಿ ಅಭ್ಯರ್ಥಿ ಪರ ಪಕ್ಷೇತರ ಅಭ್ಯರ್ಥಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. 


ಸುದ್ದಿ ಓದಿ