ಇಂಡಿ

ಬಾಡಿಗೆ ಹಣವೇ ನೀಡಿಲ್ಲ: ವಾಹನ ಮಾಲೀಕರು ಕಂಗಾಲ

ಬಾಡಿಗೆ ಹಣವೇ ನೀಡಿಲ್ಲ: ವಾಹನ ಮಾಲೀಕರು ಕಂಗಾಲ
ಇಂಡಿ: ತಾಲೂಕಾ ವೈದ್ಯಾಧಿಕಾರಿಗಳ ಕಚೇರಿಯ ಹೊರನೋಟ.

ಇಂಡಿ: ಕೋವಿಡ್ ಸಂದರ್ಭದಲ್ಲಿ ಮತ್ತು ತಾಲೂಕಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಗ್ರಾಮೀಣ ಭಾಗಕ್ಕೆ ಭೇಟಿ ನೀಡಲು ಟೆಂಡರ್ ಮೂಲಕ ವಾಹನಗಳನ್ನು ಪಡೆದು ವರ್ಷಗಟ್ಟಲೆ ಸುತ್ತಾಡಿದರೂ ಸಹ ವಾಹನಗಳ ಮಾಲೀಕರಿಗೆ ನೀಡಬೇಕಾದ ಬಾಡಿಗೆ ಹಣವೇ ನೀಡಿಲ್ಲ ಹೀಗಾಗಿ ವಾಹನಗಳ ಮಾಲೀಕರು ಕಂಗಾಲಾಗಿದ್ದಾರೆ. 

ಜೂನ್ 2021ರಿಂದ ಇಂಡಿ ತಾಲೂಕಾ ಆರೋಗ್ಯ ಇಲಾಖೆಯ ಆರ್‌ಬಿಎಸ್‌ಕೆ ಯೋಜನೆಯಡಿ 2 (ಕಾರ್) ವಾಹನಗಳು ಏಪ್ರಿಲ್ 30 ರವೆಗೆ ಕಾರ್ಯ ನಿರ್ವಹಸಿವೆ. ಕೋವಿಡ್ ಸಂದರ್ಭದಲ್ಲಿ ನವೆಂಬರ್ ತಿಂಗಳಿಂದ ಫೆಬ್ರವರಿ 30 ರವರೆಗೆ ಬಾಡಿಗೆ ಹಣ ಪಾವತಿಸಿಲ್ಲ. ಪ್ರತೀ ತಿಂಗಳು ಲಾಗ್‌ಬುಕ್ (ದಿನಚರಿ) ಬರೆದು ಕಳುಹಿಸಲಾಗಿದೆ. ಆದರೆ ಇದುವರೆಗೂ ಪ್ರತೀ ತಿಂಗಳು ನೀಡಬೇಕಿದ್ದ ಬಾಡಿಗೆ ಹಣ ನೀಡದೆ ಗುತ್ತಿಗೆದಾರ ರಾಘವೇಂದ್ರ ಚೌಹಾಣ, ಶರೀಫ್ ಮುಲ್ಲಾ ಸತಾಯಿಸುಯತ್ತಿದ್ದಾರೆ. ದೂರವಾಣಿ ಕರೆ ಸಹ ಸ್ವೀಕರಿಸುತ್ತಿಲ್ಲ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಮಗೆ ಸಂಬಂಧವಿಲ್ಲ ಎಂದು ಹೇಳುತ್ತಾರೆ ಎಂದು ವಾಹನಗಳ ಮಾಲೀಕರು ಆರೋಪಿಸುತ್ತಿದ್ದಾರೆ. 

ಒಟ್ಟಿನಲ್ಲಿ ಏಜನ್ಸೀ ಹಾಗೂ ಅಧಿಕಾರಿಗಳ ನಡುವೆ ವಾಹನಗಳ ಮಾಲೀಕರು ಕಂಗಾಲಾಗಿದ್ದು ಬಾಡಿಗೆ ಹಣ ಪಡೆಯಲು ಹವಣಿಸುತ್ತಿದ್ದಾರೆ. ಹತ್ತಾರು ಬಾರಿ ವಿಜಯಪುರದ ಡಿಹೆಚ್‌ಓ ಕಚೇರಿಗೆ ಅಲೆದಾಡಿದರೂ ಯಾರೂ ಸ್ಪಂದಿಸುತ್ತಿಲ್ಲವಾದ್ದರಿಂದ ಕೊನೆಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. 

ನಮಗೆ ಏಜನ್ಸಿಗಳ ಮೂಲಕ ವಾಹನ ನೀಡಿರುತ್ತಾರೆ. ನಮಗೂ ವಾಹನಗಳ ಬಾಡಿಗೆಗೂ ಸಂಭಂಧವಿಲ್ಲ. ಏಜನ್ಸಿ ಮತ್ತು ಡಿಹೆಚ್‌ಓ ಅವರಿಂದ ಮಾಹಿತಿ ಪಡೆದುಕೊಳ್ಳಿ. 

ಡಾ.ಅರ್ಚನಾ ಕುಲಕರ್ಣಿ ತಾಲ್ಲೂಕಾ ವೈದ್ಯಾಧಿಕಾರಿ ಇಂಡಿ. 

ಟೆಂಡರ್ ಪ್ರಕ್ರಿಯೆ ಮೂಲಕ ನಾವು ಏಜನ್ಸಿಯವರ ಮೂಲಕ ವಾಹನಗಳನ್ನು ಬಾಡಿಗೆ ಪಡೆದುಕೊಂಡಿರುತ್ತೇವೆ. ಏಜನ್ಸಿಯವರಿಗೆ ನಾವು ಇಲಾಖೆಯಿಂದ ಬಾಡಿಗೆ ಹಣ ಸಂದಾಯ ಮಾಡಿದ್ದೇವೆ. ವಾಹನಗಳ ಬಾಡಿಗೆ ನೀಡುವುದು ಬಿಡುವುದು ವಾಹನ ಮಾಲೀಕರು ಮತ್ತು ಏಜನ್ಸೀಯವರಿಗೆ ಸಂಬಂಧಪಟ್ಟಿದ್ದು, ನಾವು ಏನನ್ನೂ ಮಾಡಲಾಗಲ್ಲ. 

ರಾಜಶೇಖರ ಯರಗಲ್ ಡಿಹೆಚ್‌ಓ ವಿಜಯಪುರ. 

ಕಳೆದ ಒಂದು ವರ್ಷದಿಂದ ನಮ್ಮ ಬಾಡಿಗೆ ನೀಡಿಲ್ಲ. ಮುಂದಿನ  ತಿಂಗಳು ಕೊಡುತ್ತೇವೆ ಎಂದು ಹೇಳುತ್ತ ಒಂದು ವರ್ಷವಾಯಿತು. ಈಗ ಫೋನ್ ಸಹ ಸ್ವಿಚ್ ಆಫ್ ಆಗಿದೆ. ಅಧಿಕಾರಿಗಳಿಗೆ ಕೇಳಿದರೆ ಏಜನ್ಸಿಯವರಿಗೆ ಕೇಳಿ ನಮಗೆ ಸಂಭಂಧವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ. ಸ್ವತಃ ಡಿಜೈಲ್ ಹಾಕಿಸಿ, ಚಾಲಕನ ಪಗಾರ್ ಕೊಟ್ಟಿದ್ದೇವೆ ಈಗ ಬಿಲ್ ಸಹ ಜಮಾ ಮಾಡುತ್ತಿಲ್ಲ. ಅಧಿಕಾರಿಗಳು ನಮ್ಮ ಬಿಲ್ ವಸೂಲಿ ಮಾಡಿಸಿ ಕೊಡಬೇಕು. ಇಲ್ಲವಾದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೂಡುತ್ತೇವೆ. 

ಶ್ರಾವಣ ಜಾಧವ್ ವಾಹನ ಮಾಲೀಕ. 

ಸುದ್ದಿ ಓದಿ