ಇಂಡಿ

75 ವರ್ಷದ ಪುರಾತನ ಶಾಲೆಗೆ ಇಲ್ಲ ಕಾಯಕಲ್ಪ: ಯಾಮಾರಿದರೇ ಅಪಾಯ ಕಟ್ಟಿಟ್ಟ ಬುತ್ತಿ

75 ವರ್ಷದ ಪುರಾತನ ಶಾಲೆಗೆ ಇಲ್ಲ ಕಾಯಕಲ್ಪ: ಯಾಮಾರಿದರೇ ಅಪಾಯ ಕಟ್ಟಿಟ್ಟ ಬುತ್ತಿ

ಸಚೀನ ಇಂಡಿ

ಇಂಡಿ 14 : ಸರ್ಕಾರಗಳು ಶಾಲೆಗಳ ಅಭಿವೃದ್ಧಿಗೆ, ಮೂಲ ಸೌಕರ್ಯ ಕಲ್ಪಿಸಲು ಎಷ್ಟೇ ಅನುದಾನ ನೀಡಿದರೂ ಶಾಲೆಗಳಲ್ಲಿ ಅವ್ಯವಸ್ಥೆ ತಪ್ಪಿದ್ದಲ್ಲ, ಇದಕ್ಕೆ ನಿದರ್ಶನ ಎನ್ನುವಂತೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಹಳೇಯ ಕಟ್ಟಡ, ಶಾಲೆ ಮುಂಭಾಗ ವಿದ್ಯಾರ್ಥಿಗಳ ಆಟವಾಡಲು ಹೊದರೆ ಕೆಳಗೆ  ಬಿಳುವ ಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ ಸಂಗತಿ.  

ಇಂಡಿ ತಾಲೂಕಿನ ತಡವಲಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವ್ಯವಸ್ಥೆಯ ಆಗರವಾಗಿದೆ. 1948 ರಲ್ಲಿ ನಿರ್ಮಾಣವಾಗಿರುವ ಈ ಶಾಲೆ ದುಸ್ಥಿತಿಯಲ್ಲಿದ್ದರೂ ಕೂಡಾ ಸರ್ಕಾರ, ಶಿಕ್ಷಣ ಇಲಾಖೆ ಶಾಲಾ ಕೊಠಡಿಗಳಿಗೆ ಕಾಯಕಲ್ಪ ನೀಡಲು ಮುಂದಾಗದಿರುವುದು ವಿಪರ್ಯಾಸದ ಸಂಗತಿ.ಈ ಹಳೆಯ ಶಾಲೆಯ ಪಕ್ಕದಲ್ಲಿ ಏಉಖ ಹಾಗೂ ಒಕಖ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆ ಮಾಡಲಾಗುತ್ತದೆ ಈ ಎರಡು ಕಡೆ ಶಾಲೆ ನಡೆಯುತ್ತಿದ್ದು, ಈ ಶಾಲೆಗಳ ಹಾಗೂ ಹಳೆಯ ಶಾಲೆಯ ನಡುವಿನ ಅಂತರ 50 ಮೀಟರ್ ಮಾತ್ರ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಕಲಿಕೆ ನಡೆಯುತ್ತಿದೆ. ಮಕ್ಕಳು ಆಟಕ್ಕೆ ಬಿಟ್ಟಾಗ ಅಪ್ಪಿ ತಪ್ಪಿಯೂ ಆ ಕಡೆ ಹೋದರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಸರ್ಕಾರಿ ಶಾಲೆಗಳಿಗೆ ಬಡವರ ದಲಿತರ ಮಧ್ಯಮ ವರ್ಗದ ಮಕ್ಕಳೇ ಹೆಚ್ಚು ದಾಖಲಾಗುತ್ತಾರೆ.  ಸರ್ಕಾರ  ಮಾತ್ರ ಹಿಂತಾ ಹಳೆಯ ಶಾಲೆಯ ಕೊಠಡಿಗಳ ದುರಸ್ತಿ  ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿದರೆ. 

ಬಡ ಮಧ್ಯಮ ವರ್ಗ,  ದುರ್ಬಲ ವರ್ಗದವರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡಿದಂತಾಗುತ್ತದೆ ಹಾಗೂ ಈ ಕುರಿತು ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಮುಖ್ಯಗುರುಗಳು ಸಾಕಷ್ಟು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಎಸ್‌ಡಿಎಮ್‌ಸಿ ಅಧ್ಯಕ್ಷ ಬಸವರಾಜ ತಾರಾಪೂರ ಹಾಗೂ ಮುಖ್ಯಗುರುಮಾತೆ ಅನೀತಾ ರಾಠೋಡ. ಆದರೂ ಕಾದು ನೋಡಬೇಕು ಏನಾಗುತ್ತದೆ ಅಂತ ಎಂದು ಹೇಳಿದರು.

ಈ ದುಸ್ಥಿತಿ ಕಂಡು ಮಕ್ಕಳಿಗೆ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಪಾಲಕರು.ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಪುರಾತನ ಕಾಲದ ಶಾಲೆ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಇದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಆದರೆ ತೆರವುಗೊಳಿಸಲು ಸಂಬಂಧ ಪಟ್ಟ ವಿಜಯಪೂರ ಶಿಕ್ಷಣ ಉಪ ನಿರ್ದೇಶಕರಿಗೆ (ಆಆಕಋ) ಹಾಗೂ ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹೇಳಿದ್ದೇನೆ. ಆದರೂ ಇನ್ನೊಮ್ಮೆ ಹೇಳುತ್ತೇನೆ ಎಂದರು. 

ಅಬೀದ್ ಗದ್ಯಾಳ  

ಕಂದಾಯ ಉಪವಿಭಾಗಾಧಿಕಾರಿಗಳು ಇಂಡಿಕೋಟ್ : 02 ಈ ಬಗ್ಗೆ ನಾನು ಖುದ್ದಾಗಿ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮಕ್ಕೆ ಸೋಮುವಾರ ಭೇಟಿ ನೀಡಿ ಪರೀಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು. 

ಟಿ ಎಸ್ ಆಲಗೂರ  

ಕ್ಷೇತ್ರ ಶಿಕ್ಷಣಾಧಿಕಾರಿ ಇಂಡಿ

ನಾನು ಕೂಡಾ ಇದೆ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿನಿ ಹಾಗೂ ನಾನು ಈಗ ತಾನೇ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಗಿದ್ದೇನೆ ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ತೆರವು ಕಾರ್ಯಾಚರಣೆ ಮಾಡುತ್ತೇನೆ ಎಂದರು. 

ಸುನಂದಾ ವಾಲಿಕಾರ  

ಗ್ರಾಮ ಪಂಚಾಯಿತಿ ಅಧ್ಯಕ್ಷರು ತಡವಲಗಾ 


ಸುದ್ದಿ ಓದಿ