ತಾಳಿಕೋಟಿ

6 ತಿಂಗಳ ಹಿಂದೆ ಎಚ್ಚರಿಕೆ ನೀಡಿದರೂ ಕ್ರಮ ಕೈಕೊಂಡಿಲ್ಲ : ಮಾಜಿ ಸಚಿವ ಸಿ.ಎಸ್‌.ನಾಡಗೌಡ(ಅಪ್ಪಾಜಿ) ಆರೋಪ

6 ತಿಂಗಳ ಹಿಂದೆ ಎಚ್ಚರಿಕೆ ನೀಡಿದರೂ ಕ್ರಮ ಕೈಕೊಂಡಿಲ್ಲ : ಮಾಜಿ ಸಚಿವ ಸಿ.ಎಸ್‌.ನಾಡಗೌಡ(ಅಪ್ಪಾಜಿ) ಆರೋಪ

ಲೋಕದರ್ಶನ ವರದಿ 

ತಾಳಿಕೋಟೆ 31: ಡೋಣಿ ನದಿಗೆ ಭಾರಿ ಪ್ರಮಾಣದಲ್ಲಿ ಪ್ರವಾಹ ಬರುತ್ತದೆ. ಪ್ರವಾಹದಿಂದ ಸಂಚಾರ ಬಂದ್ ಆಗುತ್ತದೆ. ಸೂಕ್ತ ಕ್ರಮ ಕೈಕೊಳ್ಳುವಂತೆ 6 ತಿಂಗಳ ಹಿಂದೆಯೆ ಏಚ್ಚರಿಕೆ ನೀಡಿದರೂ ಸಹಿತ ಅಧಿಕಾರಿಗಳು ಯಾವುದೇ ಕ್ರಮ ಕೈಕೊಂಡಿಲ್ಲ. ಆಡಳಿತ ಮಾಡುವವರ ನಿರ್ಲಕ್ಷದಿಂದ ಜನತೆ ಪರದಾಟ ನಡೆಸುವಂತಾಗಿದೆ ಎಂದು ಮಾಜಿ ಸಚಿವ ಸಿ.ಎಸ್‌.ನಾಡಗೌಡ(ಅಪ್ಪಾಜಿ) ಹೇಳಿದರು. 

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡೋಣಿ ನದಿ ಶಿಥಿಲಾವಸ್ಥೆ ತಲುಪಿದ ನಂತರ ಪರ್ಯಾಯ ರಸ್ತೆ ನಿರ್ಮಾಣ ಮಾಡಬೇಡಿ. ಕೇವಲ ದುರಸ್ತಿ ಮಾಡಿ ಅದಕ್ಕೆ 20 ಲಕ್ಷ ತಗುಲುತ್ತದೆ. ಶೀಘ್ರದಲ್ಲಿಯೇ ಮೇಲ್ಸುತುವೆ ದುರಸ್ಥಿ ಮಾಡಿ, ನಂತರ ನೂತನ ಸೇತುವೆ ನಿರ್ಮಾಣ ಮಾಡಿ ಎಂದು ತಿಳಿಸಿದ್ದೆ. ಆದರೆ 1.80 ಕೋಟಿ ವೆಚ್ಚದಲ್ಲಿ ಪರ್ಯಾಯ ರಸ್ಥೆ ಮಾಡಿದರು. ಪರ್ಯಾಯ ರಸ್ತೆ ನೀರಲ್ಲಿ ಮುಳುಗಿದೆ. 2 ಕೋಟಿ ವೆಚ್ಚದಲ್ಲಿ ಹಳೆ ಸೇತುವೆ ದುರಸ್ಥಿ ಮಾಡಬಹುದಿತ್ತು. ಇಲ್ಲಿ ದುಂದು ವೆಚ್ಚ ಮಾಡಿ ಸರಕಾರದ ಬೊಕ್ಕಸ ಖಾಲಿ ಮಾಡಿದಿದ್ದಾರೆ. ಆದರೆ ದುಡ್ಡು ಖಾಲಿಯಾದರೂ ಸಹಿತ ಸಾರ್ವಜನಿಕರ ಸಂಕಟ ತಪ್ಪಿಲ್ಲ. ಆಸ್ಪತ್ರೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಜನ ರೋಶಿ ಹೋಗಿದ್ದಾರೆ. ಅಭಿವೃದ್ದಿ ಕಾರ್ಯಗಳು ಮಾಡಲು ಜನ ಹಿತವನ್ನು ಪರಿಗಣಿಸಬೇಕು. ಸ್ವಹಿತಾಸಕ್ತಿಯಿಂದ ಕಾರ್ಯನಿರ್ವಹಿಸಿದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎನ್ನುವದಕ್ಕೆ ಡೋಣಿ ನದಿ ಸೇತುವೆ ಉದಾಹರಣೆಯಾಗಿದೆ.  

ನಾವು ಮಾಡಿದ ತಪ್ಪು ಮುಚ್ಚಿಕೊಳ್ಳಲು ರಾಜಕಾರಣದಿಂದ ಸಾಧ್ಯ ಎನ್ನುವ ಜನ ಹೆಚ್ಚಾಗಿದ್ದಾರೆ. ಕಾಲ ಕೆಟ್ಟಿಲ. ನಾವು ಕೆಟ್ಟಿವೆ, ಭಾವನೆಗಳು ಕೆಟ್ಟಿವೆ, ಬುದ್ದಿ ಮಟ್ಟದಲ್ಲಿಯೂ ಸಹ ಬ್ರಷ್ಠಾಚಾರ ಅಡಗಿದೆ. ಸಾಮಾಜೀಕ ಮೌಲ್ಯಗಳು ಕುಸಿತವಾಗುತ್ತಿವೆ. ಬಿಜೆಪಿ ಸರಕಾರದಿಂದ ಯಾವುದೇ ಅಭಿವೃದ್ದಿ ಕಾರ್ಯಗಳು ಇಲ್ಲ. ಸರಕಾರದ ವಿರುದ್ದ ಬಿಜೆಪಿ ಕಾರ್ಯಕರ್ತರೇ ಆಕ್ರೋಶ ವ್ಯಕ್ತಡಿಸುತ್ತಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ, ಜಿಎಸ್‌ಟಿ ವಿರುದ್ದ ಯಾರು ಮಾತನಾಡಲ್ಲ. ಎಲ್ಲದಕ್ಕೂ ಜಿಎಸ್‌ಟಿ ಹೇರಿದರೂ ಸಹಿತ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ. ಅತಿ ಹೆಚ್ಚು ಸಾಲ ಮಾಡಿದ್ದಾರೆ. ದಾವಣೆಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸುಮಾರು 100 ಕ್ಕೂ ಅಧಿಕ ವಾಹನಗಳನ್ನು ಬುಕ್ ಮಾಡಲಾಗಿದೆ. ಇದು ಒಬ್ಬ ವ್ಯಕ್ತಿಯ ಕಾರ್ಯಕ್ರಮವಲ್ಲ. ಇದು ಕಾಂಗ್ರೇಸ್ ಪಕ್ಷದ ಕಾರ್ಯಕ್ರಮವಾಗಿದೆ ಎಂದರು. 

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಬಿ.ಎಸ್,ಪಾಟೀಲ ಯಾಳಗಿ, ಮುಖಂಡರಾದ ಆನಂದಗೌಡ ದೊಡಮನಿ, ಸಿದ್ದನಗೌಡ ಪಾಟೀಲ, ಶರಣು ದೇಶಮುಖ, ಸಂಗನಗೌಡ ಅಸ್ಕಿ, ಫಯಾಜ ಉತ್ನಾಳ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ