ಮಹಾರಾಷ್ಟ್ರದಲ್ಲಿ ರೂಪಾಂತರ ಕೊರೋನ ಸೋಂಕು ಪತ್ತೆಯಾಗಿಲ್ಲ: ರಾಜೇಶ್ ಟೊಪೆ
ಔರಂಗಾಬಾದ್, ಡಿಸೆಂಬರ್ 30: ಮಹಾರಾಷ್ಟ್ರದಲ್ಲಿ ಹೊಸ ರೂಪಾಂತರ ಸ್ವರೂಪದ ಕೊರೋನ ಸೋಂಕು ಪ್ರಕರಣ
ಈವರೆಗೆ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವ ರಾಜೇಶ್ ಟೊಪೆ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ
ಮಾತನಾಡಿದ ಸಚಿವರು, ರಾಜ್ಯದಲ್ಲಿ ಹೊಸ ಕರೋನವೈರಸ್
ತಳಿ ಪತ್ತೆಯಾಗಿಲ್ಲ ಕೆಲವು ರೋಗಿಗಳ ಆದರೂ ರಾಜ್ಯದ ಜನತೆ ಹೆಚ್ಚು ಜಾಗರೂಕರಾಗಿರಲು ಸರ್ಕಾರ ಎಲ್ಲಾ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ
ಎಂದು ಹೇಳಿದರು. ಬ್ರಿಟನ್ನಲ್ಲಿ ಕಂಡುಬಂದ ಹೊಸ ಮಾದರಿ ಸೋಂಕು ಶೇಕಡಾ 70 ರಷ್ಟು ವೇಗವಾಗಿ ಹರಡಲಿದ್ದು ಇದು ರೋಗಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದರು.
ಇದುವರೆಗೆ
ಬ್ರಿಟನ್‌ನಿಂದ 47 ಜನರು ಔ ರಂಗಾಬಾದ್‌ಗೆ ಆಗಮಿಸಿದ್ದಾರೆ. ಅವರೆಲ್ಲರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಈವರೆಗೆ ಅವುಗಳ ಪೈಕಿ
ಕೇವಲ, ಎರಡು ಪ್ರಕರಣಗಳಲ್ಲಿ ಮಾತ್ರ ಸೋಂಕು ಖಚಿತವಾಗಿದೆ
ಎಂದು ಸಚಿವರು ಹೇಳಿದರು.