ನಿಮಿಷಾಂಬಾ ದೇವಿ ಜಯಂತ್ಯೋತ್ಸವ
ತಾಳಿಕೋಟೆ07: ಪಟ್ಟಣದ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದ ಕುಲದೇವತೆ ನಿಮಿಷಾಂಬಾ ದೇವಿ 66ನೆಯ ಜಯಂತ್ಯೋತ್ಸವ ಕಾರ್ಯಕ್ರಮವು ಬುಧವಾರ ಭಕ್ತಿ, ಶ್ರದ್ಧೆ, ಸಂಭ್ರಮಗಳಿಂದ ಜರುಗಿತು.
ತನ್ನಿಮಿತ್ತ ಬೆಳಿಗ್ಗೆ ದೇವಿಮೂರ್ತಿಗೆ ಪಮಚಾಮೃತ ಅಭಿಷೇಕ ಜರುಗಿತು ನಂತರ ಉತ್ಸವಮೂರ್ತಿ ಹಾಗೂ ಕಳಸದ ಗಂಗಸ್ಥಳವನ್ನು ಭೀಮನ ಭಾವಿಯಲ್ಲಿ ನೇರವೇರಿತು. ಬೀಮನಭಾವಿಯಿಂದ ಆರಮಭವಾದ ಮೆರವಣಿಗೆ ರಾಜವಾಡೆ, ಕತ್ರಿ ಬಜಾರ, ಎಂ.ಜಿ ರಸ್ತೆಯ ಮುಖಾಂತರ ಹಾಯ್ದು ನಿಮಿಷಾಂಭಾ ದೇವಸ್ಥಾನಕ್ಕೆ ಆಗಮಿಸಿತು. ಅಲ್ಲಿ ನವಗೃಹ ಚಂಡಿಹೋಮ ಮತ್ತು, ಮದುವೆ, ಉಪನಯನ ನೆರವೇರಿಸಲಾಯಿತು. ಮಧ್ಯಾಹ್ನ ಮಹಾಪ್ರಸಾದ ಜರುಗಿತು. ಸಂಜೆ ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಸಕಲ ವಾದ್ಯವೈಭವಗಳೊಂದಿಗೆ ಹೊರಟು ರಾಜವಾಡೆಯ ಶ್ರೀಮಹಾದೇವನ ದೇವಸ್ಥಾನಕ್ಕೆ ಹೋಗಿ ಮರಳಿ ಬರಲಾಯಿತು. ರಾತ್ರಿ ಸಹಸ್ರ ದೀಪೋತ್ಸವ, ಮಹಾಮಂಗಳಾರತಿಯೊಂದಿಗೆ ಮಂಗಲವಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತಿಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಬಾಬುರಾವ ಚಿತಾಪೂರ, ಉಪಾದ್ಯಕ್ಷ ರಮೇಶ ಚವ್ಹಾಣ, ಪ್ರಕಾಶ ಉಭಾಳೆ, ಘನಶ್ಯಾಮ ಚವ್ಹಾಣ, ಗಣಪತರಾವ್ ಚವ್ಹಾಣ, ಶಂಕರ ಉಬಾಳೆ, ಸಚಿನ ಬುಸಾರೆ, ನಗರ ಬಿಜೆಪಿ ಅಧ್ಯಕ್ಷ ರಾಘು ಚವ್ಹಾಣ, ನಾಗೇಶ ಚವ್ಹಾಣ, ಬಾಬುರಾವ ಚವ್ಹಾಣ, ಪೀರಾಜಿ ಚವ್ಹಾಣ, ವಿಠ್ಠಲರಾವ್ ಚವ್ಹಾಣ, ಗಂಗಾರಾಮ ಚವ್ಹಾಣ, ಗೋವಿಂದ್ರ ಚೌದ್ರಿ, ಮಾರುತಿರಾವ ಚವ್ಹಾಣ, ತುಳಿಸಿರಾಮ ಪಿಂಪಳೆ, ಕಾಸಿನಾಥ ಚಿತಾಪೂರ, ಸಿಮಾಬಾಯಿ ಚವ್ಹಾಣ, ಅಕ್ಕುಬಾಯಿ ಚವ್ಹಾಣ, ಸುನಿತಾ ಚವ್ಹಾಣ, ಲಕ್ಷ್ಮೀಬಾಯಿ ಕಾಂಬಳೇಕರ ಸೇರಿದಂತೆ ಮೆರವಣಿಗೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು.