ನಿಡಸೋಸಿ ಮುರಾರ್ಜಿ ಕಾಲೇಜಿನ ವಿದ್ಯಾರ್ಥಿ ಅಂಕಿತ ರಾಜ್ಯಕ್ಕೆ ದ್ವಿತೀಯ, ಚಿಕ್ಕೋಡಿಗೆ ಪ್ರಥಮ

ನಿಡಸೋಸಿ ಮುರಾರ್ಜಿ ಕಾಲೇಜಿನ ವಿದ್ಯಾರ್ಥಿ ಅಂಕಿತ ರಾಜ್ಯಕ್ಕೆ ದ್ವಿತೀಯ, ಚಿಕ್ಕೋಡಿಗೆ ಪ್ರಥಮ

ಸಂಕೇಶ್ವರ : ಸಮೀಪದ ನಿಡಸೋಸಿಯ ಮೊರಾರ್ಜಿ ದೇಸಾಯಿ ವಿಜ್ಞಾನ ವಸತಿ ಕಾಲೇಜಿನ ವಿದ್ಯಾರ್ಥಿಗಳು ಪಿಯು ಪರೀಕ್ಷೆಯ ಫಲಿತಾಂಶದಲ್ಲಿ ನೂರಕೆ ನೂರರಷ್ಟು  ಅಂಕಗಳನ್ನು ಪಡೆದು ನೂರಕ್ಕೆ ನೂರರಷ್ಟು ಸಾಧನೆ ಮಾಡುವ ಮೂಲಕ ಕಾಲೇಜಿನ ಕೀರ್ತಿ ಹೆಚ್ವಿಸಿದ್ದಾರೆ. ಅಲ್ಲದೆ ಕು. ಅಂಕಿತ ಕರಾಟಗಿ ಈತ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಪಡೆದಿದ್ದಾನೆ.

     ಗುರುವಾರ ಪ್ರಕಟವಾದ ಪಿಯುಸಿ ದ್ವೀತಿಯ ವರ್ಷದ ಪರೀಕ್ಷಾ ಫಲಿತಾಂಶದಲ್ಲಿ ಕು. ಅಂಕಿತ ಕರಾಟಗಿ ಈತ ವಿಜ್ಞಾನ ವಿಭಾಗದಲ್ಲಿ 600 ಪೈಕಿ 598 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ದ್ವೀತಿಯ ರ್ಯಾಂಕ್ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾನೆ. 

  ಅದೇ ರೀತಿ ಇದೇ ಶಾಲೆಯ ಪಕೀರ್ ತ್ಯಾಪಿ 600 ಪೈಕಿ 589 ಅಂಕ, ಲಕ್ಷ್ಮಣ ಬೆಣ್ಣಿ ಈತ 600 ಪೈಕಿ 580 ಅಂಕ,  ಸಹನಾ ಮಿರ್ಜಿ, ಇವಳು 600 ಪೈಕಿ 588 ಅಂಕ,  ಮಯಾಕ್ಕ ಗಣೇಶವಾಡಿ 600 ಪೈಕಿ 587 ಅಂಕ ಪಡೆದು ಟಾಪರ್ ಆಗಿ ಹೊರಹೊಮ್ಮುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. 

    ಕಾಲೇಜಿನ ವಿದ್ಯಾರ್ಥಿಗಳಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 78 ವಿದ್ಯಾರ್ಥಿಗಳ ಪೈಕಿ 73 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಮತ್ತು 05 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿರುತ್ತಾರೆ..ಇವರ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ನಿಲಯಪಾಲಕರು ಹಾಗೂ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದ್ದಿ ಓದಿ