ಪತ್ರಿಕೆಗಳು ಪ್ರಜಾಪ್ರಭುತ್ವದ ಜೀವಾಳ: ಭೂಸನೂರ
ಸಿಂದಗಿ; ಪತ್ರಿಕೆಗಳು ಪ್ರಜಾಪ್ರಭುತ್ವದ ಜೀವಾಳು. ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಗುಪ್ತಚರ ಇಲಾಖೆಯಂತೆ ಸಮಾಜಕ್ಕೆ ಎಚ್ಚರಿಕೆ ನೀಡುವ ಕಾರ್ಯ ನಡೆಸುತ್ತಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಪಿಇಎಸ್ ಕಾಲೇಜಿನ ಸಭಾಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಮತ್ತು ಸಾಧಕರಿಗೆ ಹಾಗೂ ಪತ್ರಿಕಾ ವಿತರಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಪತ್ರಿಕೆಗಳು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಸಿಬೇಕು. ಪತ್ರಕರ್ತಋ ಕಷ್ಟ ನೋವುಗಳಲ್ಲಿ ಬಾಗಿಯಗುವುದರ ಜೊತೆಗೆ ಪತ್ರಿಕಾ ಭವನಕ್ಕೆ ಪುರಸಭೆಯಿಂದ ಜಾಗೆ ನೀಡಿದ್ದಾದರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದರು.
ಯಡ್ರಾಮಿಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ ನವಲಗುಂದ ಉಪನ್ಯಾಸ ನೀಡಿ, ಪತ್ರಿಕೋದ್ಯಮ ಇಂದು ಸವಾಲಾಗಿದೆ. ರಾಜಕಾರಣಿಗಳು ಪತ್ರಕರ್ತರನ್ನು ಖಳನಾಯಕರಂತೆ ನೋಡುತ್ತಾರೆ. ಆದರೆ, ಪತ್ರಕರ್ತರು ಖಳನಾಯಕರಲ್ಲ ಕಥಾನಾಯಕರು. ಧ್ವನಿಯಿಲ್ಲದವರಿಗೆ ಧ್ವನಿಯಾಗಿ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಆದರೆ, ಅವರ ಧ್ವನಿ ಮುಚ್ಚಿಸುವ ಕೆಲಸ ಪ್ರಜಾಪ್ರಭುತ್ವದ ಪರವಾಗಿದ್ದೇವೆ ಎಂದು ಹೇಳಿಕೊಳ್ಳುವ ಪ್ರಭುತ್ವವಾದಿಗಳಿಂದ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಕೆಲ ಹಿರಿಯ ಪತ್ರಕರ್ತರು ಸಹ ತಿರುಚುವ ಕೆಲಸ ಮಾಡುತ್ತಿದ್ದು, ಇದರಿಂದ ಮುಜುಗರವಾಗುತ್ತಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ.ಚೂರಿ ಮಾತನಾಡಿ, ಡಿವಿಜಿ ಅವರು ಹುಟ್ಟುಹಾಕಿದ ಕಾನಿಪ ಸಂಘಕ್ಕೆ ಒಳ್ಳೆಯ ಹಿನ್ನೆಲೆ ಹಾಗೂ ಅದರದೇಯಾದ ಒಂದು ಇತಿಹಾಸವಿದೆ. ಈ ಸಂಘದ ಸದಸ್ಯರಾಗುವುದೇ ಒಂದು ಗೌರವ. ಸಂಘದ ಗೌರವ ಕಾಪಾಡುವುದು ಪ್ರತಿಯೊಬ್ಬ ಸದಸ್ಯರ ಕರ್ತವ್ಯವಾಗಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಧ ಗುರುತಿನ ಕಾರ್ಡು ದುರುಪಯೋಗಪಡಿಸಿಕೊಂಡು ಸಂಘಕ್ಕೆ ಕೆಟ್ಟ ಹೆಸರು ತರುವಂಥ ಕೆಲಸವನ್ನು ಯಾವ ಸದಸ್ಯರು ಕೂಡಾ ಮಾಡಬಾರದು ಕಳಕಳಿಯ ಮನವಿ ಮಾಡಿದ ಅವರು, ಗುರುತಿನ ಕಾರ್ಡು ದುರ್ಬಳಕೆ ಮಾಡಿಕೊಳ್ಳುವುದನ್ನು ನಾನು ಸಹಿಸುವುದಿಲ್ಲ. ಸಂಘವು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಎಚ್ಚರಿಕೆ ನೀಡಿದರು.
ಚೆಕ್ ಪೋಸ್ಟ ಹಾಗೂ ಸರಕಾರಿ ಕಚೇರಿಗಳಲ್ಲಿ ಸಂಘದ ಗುರುತಿನ ಕಾರ್ಡು ತೋರಿಸಿ ಅಧಿಕಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಯಾರೋ ಕೆಲವರು ಈ ರೀತಿ ಮಾಡುವುದರಿಂದ ಇಡೀ ಪತ್ರಕರ್ತರ ಬಗ್ಗೆ ಜನರಲ್ಲಿರುವ ಗೌರವ ಭಾವನೆ ಕಡಿಮೆಯಾಗುತ್ತದೆ ಮಾತ್ರವಲ್ಲ, ಸಂಘಕ್ಕೂ ಕೆಟ್ಟ ಹೆಸರು ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಯಾವ ಸದಸ್ಯರೂ ಸಂಘದ ಗುರುತಿನ ಕಾ??9 ದುರುಪಯೋಗಪಡಿಸಿಕೊಳ್ಳಬಾರದು. ಸಂಘದ ಘನತೆಗೆ ಧಕ್ಕೆ ಉಂಟು ಮಾಡುವ ಯಾವ ಕೆಟ್ಟ ಕೆಲಸಕ್ಕೆ ಕೈಹಾಕಬಾರದು ಎಂದು ಅವರು ಕಿವಿಮಾತು ಹೇಳಿದರು.
ತ್ರಂತ್ರಜ್ಞಾನದ ಹೊಸ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ದೃಶ್ಯ ಮಾಧ್ಯಮ, ಸೋಶಿಯಲ್ ಮೀಡಿಯಾಗಳು ಎಷ್ಟೇ ವೇಗವಾಗಿ ಬೆಳೆದರೂ ಮುದ್ರಣ ಮಾಧ್ಯಮ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಪತ್ರಿಕೆ ಗಳಿಗೆ ಮುಂದೆಯೂ ಅದರ ಮಹತ್ವ ಇದ್ದೇ ಇರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ವಿದ್ಯುನ್ಮಾನ ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾಗಳ ಅಬ್ಬರದಿಂದಾಗಿ ಪ್ರಸಾರ ಹಾಗೂ ಓದುಗರ ಸಂಖ್ಯೆ ಮೊದಲಿಗಿಂತಲೂ ಈಗ ಕಡಿಮೆಯಾಗಿದ್ದರೂ ಪತ್ರಿಕೆಗಳ ಅಸ್ತಿತ್ವಕ್ಕೆ ಏನೂ ಧಕ್ಕೆಯಾಗುವುದಿಲ್ಲ. ಪತ್ರಿಕೆಗಳಿಗೆ ಎಂದೂ ಸಾವಿಲ್ಲ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಶೇಖರ ಕೂಚಬಾಳ, ಪಿಇಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಪಿ,ಕರ್ಜಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಾಧಕರಿಗೆ ಹಾಗೂ ಪತ್ರಿಕಾ ವಿತರಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪಾಟೀಲ(ಗಣಿಹಾರ), ರಾಜ್ಯ ಸಂಘದ ಕೆ.ಕೆ.ಕುಲಕರ್ಣಿ, ಜಿಲ್ಲಾ ಸಂಘದ ಮೋಹನ ಕುಲಕರ್ಣಿ, ರಾಹುಲ್ ಆಪ್ಟೆ, ಮಲ್ಲು ಕೆಂಭಾವಿ ಸೇರಿದಂತೆ ಮತ್ತಿತರ ಪತ್ರಕರ್ತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಮೃತ ಪತ್ರಕರ್ತ ಮುರುಗೇಶ ಹಿಟ್ಟಿ ನಿಧನದ ಹಿನ್ನಲೆ ಮೌನಾಚರಣೆ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು. ಡಾ ಪ್ರಕಾಶ ರಾಗರಂಜಿನಿ, ಪ್ರಲ್ಹಾದ ಜಿ.ಕೆ ಪ್ರಾರ್ಥಿಸಿ, ನಾಡಗೀತೆ ಹಾಡಿದರು. ಸಂಘದ ಉಪಾಧ್ಯಕ್ಷ ಇಂದೂಶೇಖರ ಮಣೂರ ಪ್ರತಿಜ್ಞಾವಿಧಿ ಬೋಧಿಸಿದರು. ತಾಲೂಕು ಅದ್ಯಕ್ಷ ಆನಂದ ಶಾಬಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುರಾಜ ಮಠ ಸ್ವಾಗತಿಸಿದರು. ಮಹಾಂತೇಶ ನೂಲಾನವರ ನಿರೂಪಿಸಿ ವಂದಿಸಿದರು.