ನೂತನ ಪದಾಧಿಕಾರಿ ಆಯ್ಕೆ
ರಾಣೇಬೆನ್ನೂರು:-26 ಇಲ್ಲಿನ ಏಕಲವ್ಯ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಿಂಗಪ್ಪ ಹನುಮಂತಪ್ಪ ಹಳ್ಳೆಳ್ಳಪ್ಪನವರ ಹಾಗೂ ಉಪಾಧ್ಯಕ್ಷರಾಗಿ ಗೌರಮ್ಮ ಕರೇಹನುಮಪ್ಪ ಕರೇಭರಮಣ್ಣನವರ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಚಿಕ್ಕಪ್ಪ ಶಿವಪ್ಪ ಹುಣಸಿಕಟ್ಟಿ, ಕರಿಯಪ್ಪ ಭೀಮಪ್ಪ ಲೆಂಕಣ್ಣನವರ, ಹನುಮಂತಪ್ಪ ರಾಮಲಿಂಗಪ್ಪ ಅಮರಾವತಿ, ಆನಂದಪ್ಪ ಕೆಂಚಪ್ಪ ಮಾಗೋಡ, ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಹೊನ್ನಪ್ಪ ಮೀನಕಟ್ಟಿ, ಪುಷ್ಪಲತಾ ಆರ್ ದೊಣಗೊಂದಿ, ಮಾಲತೇಶ್ ಚಿಕ್ಕಪ್ಪ ಕಮ್ಮಾರ, ಕುಮಾರ ಹನುಮಂತಪ್ಪ ಸಣ್ಣಬೊಮ್ಮಾಜಿ ಇವರು ನಿರ್ದೇಶಕರೆಂದು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳ ಚುನಾವಣೆಯಲ್ಲಿ ಚುನಾವಣಾಧಿಕಾರಿ ವಿಕ್ರಮ್ ಜಿ ಕುಲಕರ್ಣಿ, ವಾಲ್ಮೀಕಿ ಸಂಘದ ತಾಲೂಕಾಧ್ಯಕ್ಷ ಚಂದ್ರಣ್ಣ ಬೇಡರ್, ಏಕಲವ್ಯ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ ಬ ಕನ್ನಾಯ್ಕನವರ, ಅಶೋಕ ನಾಯಕ್ ಸೇರಿದಂತೆ ಸಿಬ್ಬಂದಿ ವರ್ಗ ಇದ್ದರು.