ಕಾರವಾರ

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿ ತಕ್ಷಣವೇ ಜಾರಿಬೇಡ - ಸಿಪಿಐಎಂ ಒತ್ತಾಯ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿ  ತಕ್ಷಣವೇ ಜಾರಿಬೇಡ - ಸಿಪಿಐಎಂ ಒತ್ತಾಯ.

ಕಾರವಾರ :  ಮಹಿಳೆಯರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಬಡವರಿಗೆ ಶಿಕ್ಷಣವನ್ನು ಮರೀಚಿಕೆಯಾಗಿಸುವ ಅತ್ಯಂತ ಅಪಾಯಕಾರಿಯಾದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು  ಕೂಡಲೇ ಸ್ಥಗಿತಗೊಳಿಸುವಂತೆ ರಾಜ್ಯ ಸರಕಾರವನ್ನು ಸಿಪಿಯ ( ಮಾರ್ಕ್ಸವಾದಿ) ಉತ್ತರ ಕನ್ನಡ ಜಿಲ್ಲಾ ಸಮಿತಿ ಬಲವಾಗಿ ಒತ್ತಾಯಿಸಿದೆ. 

ನೂತನ ಶಿಕ್ಷಣ  ನೀತಿಯು ರಾಜ್ಯದ ಕನ್ನಡ ಹಾಗೂ ಕನ್ನಡಿಗರ ಇತರೇ ಮಾತೃ ಭಾಷೆಗಳಾದ ತುಳು, ಕೊಡವಾ, ತೆಲುಗು, ಉರ್ದು,ಮರಾಠಿ, ಕೊಂಕಣಿ, ಲಂಬಾಣಿ ಮುಂತಾದ ಭಾಷೆಗಳ ಮೇಲೆ ಇಂಗ್ಲೀಷ್ ಹಾಗೂ ಸಂಸ್ಕೃತ, ಹಿಂದಿ ಭಾಷೆಗಳನ್ನು ಹೇರುವ ಹುನ್ನಾರವನ್ನು ಅದು ಹೊಂದಿದೆ. ಇದರಿಂದ ಈ ಭಾಷೆಗಳು ಮತ್ತಷ್ಟು ಅಪಾಯವನ್ನು ಎದುರಿಸಲಿವೆ.  ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ವನ್ನು  ಕಾಪೆರ್Çರೇಟ್ ಕಂಪನಿಗಳ ಹಾಗೂ ಖಾಸಗೀ ಶಿಕ್ಷಣ ಸಂಸ್ಥೆಗಳ ಬೃಹತ್ ಲೂಟಿಗೆ ರಾಜ್ಯವನ್ನು ತೆರೆಯುವ ಮುಂದುವರಿದ ಸಂಚಿನ ಭಾಗವಿದಾಗಿದೆ. ಇದರಿಂದ ಲಕ್ಷಾಂತರ ಅಂಗನವಾಡಿ ಕೇಂದ್ರಗಳು, ಏಕೋಪಾಧ್ಯಾಯ ಹಾಗೂ ವಿದ್ಯಾರ್ಥಿಗಳ ಕೊರತೆ ಎದುರಿಸುವ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಮುಚ್ಚಿ ಹೋಗಲಿವೆ ಎಂದು ಸಿಪಿಐಎಂ ಜಿಲ್ಲಾ ಮುಖಂಡ ಶಾಂತಾರಾಂ ಕಳವಳ ವ್ಯಕ್ತಪಡಿಸಿದ್ದಾರೆ. 

ಬಾಣಂತಿಯರು, ಗರ್ಭಿಣಿ ಮಹಿಳೆಯರು,ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರದ ಯೋಜನೆಯು ಕಣ್ಮರೆಯಾಗಲಿದೆ. ಅಗ್ಗದರದ ಆಧುನಿಕ ನೈಪುಣ್ಯತೆ ಪಡೆದ ಗುಲಾಮರನ್ನು  ಕಾಪೆರ್Çರೇಟ್ ಕಂಪನಿಗಳಿಗೆ ಒದಗಿಸುವ ಮತ್ತು ಮತೀಯ ಭಾವನೆಗಳನ್ನು ಹರಡುವ, ರಾಜ್ಯದ ಸಮಗ್ರತೆ, ಏಕತೆಗೆ ಭಂಗ ಉಂಟುಮಾಡುವ ದುರುದ್ದೇಶವನ್ನು ಅದು ಹೊಂದಿದೆ. ಇದು ಸ್ವಾತಂತ್ರ್ಯ ನಂತರ ದೇಶದಲ್ಲಿ ಶೈಕ್ಷಣಿಕ ಹಾಗೂ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿನ ಸಾಧನೆಗಳ ಮುನ್ನಡೆಗೆ ಮತ್ತು ರಾಜ್ಯದಲ್ಲಿ ಬೆಳೆಯುತ್ತಿರುವ ಜನತೆಯ ವೈಜ್ಞಾನಿಕ ಮನೋಭಾವದ ಮೇಲೆ ಬಲವಾದ ತಡೆಯಾಗಲಿದೆ ಎಂದಿದ್ದಾರೆ. ಇದು ರಾಜ್ಯದಲ್ಲಿ ಶೈಕ್ಷಣಿಕ ಮತ್ತು ಆ ಸಂಬಂಧಿ ಇತರೆ ವಲಯಗಳ ಉದ್ಯೋಗಿಗಳನ್ನು ವ್ಯಾಪಕವಾದ ನಿರುದ್ಯೋಗಕ್ಕೆ ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯೋಗಗಳನ್ನು ಕಡಿತಗೊಳಿಸುವಿಕೆಗೆ ಕಾರಣವಾಗಲಿದೆ. ಅದೇ ರೀತಿ, ದುರ್ಬಲರ ಸಾಮಾಜಿಕ ನ್ಯಾಯದ ಮೀಸಲಾತಿಯ ಹಕ್ಕನ್ನು ಹೊಸಕಿ ಹಾಕಲಿದೆ. ಕಳೆದ ಎರಡು ವರ್ಷಗಳ ಕಾಲ ರಾಜ್ಯದ ಜನತೆ ಕೋವಿಡ್ ಸಂಕಷ್ಠದಲ್ಲಿದ್ದುದ ರಿಂದ ಜನತೆಗೆ ವ್ಯಾಪಕವಾಗಿ ಭಾಗಿಯಾಗಿ, ಈ ವಿಚಾರದಲ್ಲಿ ಅಭಿಪ್ರಾಯ ನೀಡಲು ಸಾಧ್ಯವಾಗಿಲ್ಲ ವೆಂಬುದನ್ನು ತಾವು ಗಮನಿಸಬೇಕು. ದ್ದರಿಂದ, ರಾಜ್ಯದ ವಿಧಾನ ಸಭೆ ಹಾಗೂ ಪರಿಷತ್ತಿನಲ್ಲಿ , ಎಲ್ಲ ರಾಜಕೀಯ ಪಕ್ಷಗಳ ಜೊತೆ ಮತ್ತು ಶೈಕ್ಷಣಿಕ ವಲಯದ ತಜ್ಞರು, ಭಾಷಾ ತಜ್ಞರು, ಅಕಾಡೆಮಿಕ್ ವಲಯ ಗಳು, ಶಿಕ್ಷಕರ, ಅಧ್ಯಾಪಕ, ಪ್ರಾಧ್ಯಾಪಕರು, ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿಶ್ವ ವಿದ್ಯಾನಿಲಯಗಳು ಮುಂತಾದ ಗಣ್ಯ ಸಂಸ್ಥೆಗಳು ಹಾಗೂ ನಾಗರೀಕರ ಜೊತೆ ವ್ಯಾಪಕವಾಗಿ ಚರ್ಚಿಸಲು ಅಗತ್ಯ ಕ್ರಮಗಳನ್ನು ವಹಿಸಬೇಕು ಮತ್ತು ಅದುವರೆಗೆ ಅದನ್ನು ಯಾವುದೇ ಕಾರಣಕ್ಕೆ ಜಾರಿಗೊಳಿಸಬಾರದೆಂದು ಸಿಪಿಐ(ಎಂ)ಜಿಲ್ಲಾ ಸಮಿತಿ ಬಲವಾಗಿ ಒತ್ತಾಯಿಸುತ್ತದೆ ಎಂದು ಶಾಂತಾರಾಂ ನಾಯಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ