ತಲ್ಲೂರ ತೊರಗಲ್ಲಮಠದಲ್ಲಿ ನೂತನ ವರ್ಷಾಚರಣೆ
ಯರಗಟ್ಟಿ 01: ಸಕಲ ಜೀವಾತ್ಮಗಳಿಗೂ ಲೇಸನ್ನು ಬಯಸುವ ವಿಶಾಲ ಮನೋಭಾವನೆಗಳನ್ನು ನಾವು ಬೆಳೆಸಿಕೊಂಡಾಗ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದು ಮುನವಳ್ಳಿ ಸೋಮಶೇಖರಮಠದ ಮುರಘೇಂದ್ರ ಸ್ವಾಮೀಜಿ ಹೇಳಿದರು.
ಸಮೀಪದ ತಲ್ಲೂರ ಗ್ರಾಮದ ತೊರಗಲ್ಲಮಠದಲ್ಲಿ ನೂತನ ವರ್ಷದ ಆಚರಣೆಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಅವರು, ಮನುಷ್ಯನಿಗೆ ಸಂಕಷ್ಟಗಳು ಬರುವುದು ಸಹಜ, ಅದನ್ನು ಧೈರ್ಯದಿಂದ ಎದುರಿಸುವ ಶಕ್ತಿಯನ್ನು ಭಗವಂತ ನಮಗೆ ಕರುಣಿಸಲಿ ಎನ್ನುವ ದೃಢ ಸಂಕಲ್ಪದಲ್ಲಿ ಹೊಸ ವರ್ಷವನ್ನು ಸಂತಸದಿಂದ ಸ್ವಾಗತಿಸುವ ಮೂಲಕ ಮುಂಬರಲಿರುವ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬೇಕೆಂದರು.
ತೊರಗಲ್ಲಮಠದ ದೀಪಕ ಸ್ವಾಮೀಜಿ ಮಾತನಾಡಿ, ಸಂತಸದಿಂದ ನೂತನ ವರ್ಷ ಎಲ್ಲರಿಗೂ ಆಯಸ್ಸು, ನೆಮ್ಮದಿ, ಸುಖ, ಶಾಂತಿ ಜತೆಯಲ್ಲಿ ಉತ್ತಮ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹೇಳಿದರು. ನಂತರ ನೂತನ ವರ್ಷದ ಆಚರಣೆ ಅಂಗವಾಗಿ ಎಲರಿಗೂ ಸಿಹಿ ವಿತರಣೆ ಮಾಡಲಾಯಿತು.
ಮುಖಂಡ ಶಂರಗೌಡ ಪಾಟೀಲ, ಪ್ರಸನ್ನಕುಮಾರ ಹಿರೇಮಠ, ವಿಜಯ ಅಂಗಡಿ, ಆರ್.ಎಸ್.ಕಲ್ಲನ್ನವರ, ಆರ್.ಬಿ.ಅಣ್ಣಿಗೇರಿ, ಮುತ್ತು ಬಡಿಗೇರ, ಉಮೇಶ ಕಾಶಪ್ಪನವರ, ನೀಲಕಂಠ ಹಂಜಿ ಇತರರಿದ್ದರು.