ಸಿಂಧಗಿ

‘ಹೊಸವರ್ಷಾಚರಣೆಯಂದರೆ ಹಳೆಯದು ಮರೆತು ಹೊಸತನ್ನು ಸ್ವೀಕರಿಸುವುದು’

‘ಹೊಸವರ್ಷಾಚರಣೆಯಂದರೆ ಹಳೆಯದು ಮರೆತು ಹೊಸತನ್ನು ಸ್ವೀಕರಿಸುವುದು’

ಸಿಂದಗಿ03:  ಹೊಸವರ್ಷ ಆಚರಣೆಯಂದರೆ ಹಳೆಯ ಸ್ವಭಾವ ಹಳೆಯ ಸಂಸ್ಕಾರವನ್ನು ಬಿಟ್ಟು ಭೂಮಿಗೆ ಶಿವತಂದೆ ಬಂದಿದ್ದಾರೆ ಎಂಬ ಸಂದೇಶವನ್ನು ಪ್ರತಿಯೊಂದು ಆತ್ಮಗಳಿಗೆ ತಿಳಿಸಿಕೊಡಿ ಎಂದು ಸ್ಥಳೀಯ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಪವಿತ್ರಾಜಿ, ಸೀಮಾಜಿ ಅಕ್ಕನವರು ಹೇಳಿದರು. 

ಹೇಗೆ ಅನ್ನದಂತೆ ಮನ ಎನ್ನುತ್ತಾರೆ ಹಾಗೇ ಪರಿಸರವನ್ನು ನಾವು ಶುದ್ಧವಾಗಿ ನೋಡಿಕೊಳ್ಳಬೇಕು ಆಗ ನಮಗೆ ಪರಿಸರವು ನಮಗೆ ಸಹಯೋಗ ನೀಡುತ್ತದೆ ಇದರ ಜೊತೆಗೆ ಮನುಷ್ಯನು ಪ್ರತಿ ದಿನ ತಮ್ಮ ದಿನನಿತ್ಯದ ಕೆಲಸ ಕಾಯಕದೊಂದಿಗೆ ಯೋಗ ಮೆಡಿಟೇಶೆನ್‌ನಂತಹ ಕಾಯಕದಲ್ಲಿ ತೊಡಗಿದರೆ ಭಯ ಚಿಂತೆ ಹಾಗೂ ಮಾನಸಿಕ ಕಿನ್ನತೆ ದೊರವಾಗುತ್ತವೆ ಆಗ ನಾವು ಪ್ರತಿ ಕಾರ್ಯದಲ್ಲಿ ವಿಜಯಶಾಲಿಗಳು ಯಾಗುತ್ತವೆ ಎಂದು ಹೇಳಿದರು. 

ಬಳಿಕ ಬ್ರಹ್ಮಕುಮಾರದ ಬಾಳನಗೌಡ ಪಾಟೀಲ ಅಣ್ಣನವರು ಮಾತನಾಡಿ ನಾವುಗಳು ಸಹೋದರ ಸಹೋದರರಿಯರು ಸೇರಿ ಹಳೆಯ ವರ್ಷನ್ನು ಬಿಟ್ಟು ಹಳೆಯ ಕಹಿಯನನು ಮರೆತು ಹೊಸವರ್ಷವನ್ನು ಸ್ವಾಗತಿಸಿ ಇಡೀ ವಿಶ್ವಕ್ಕೆ ಶಾಂತಿಯ ತರಂಗಗಳನ್ನು ಹರಡಿಸಿ ಶಾಂತಿಯ ಸಂದೇಶವನ್ನು ಸಾರೋಣ ಎಂದು ಮಾತನಾಡಿದರು. ಸೋಮನಾಥ ಬುಳ್ಳಾ, ಕೆ.ಎಸ್‌.ಪತ್ತಾರ, ಬಸವರಾಜ ಕಕ್ಕಳಮೆಲಿ, ನಿರ್ವತ್ ಪ್ರಾಚಾರ್ಯ ಎಸ್‌.ಎಸ್‌.ಪಾಟೀಲ, ಸಿದ್ದಲಿಂಗ ಚೌಧರಿ, ಸಿಎಮ್‌.ಪುಜಾರಿ, ಸಿವನಗೌಡ ಬಿರಾದರ, ಅಶೋಕ ಹುಗಾರ, ತಾನಾಜಿ ಕನಸೆ, ವಿಜಯಕುಮಾರ ತೆಲಿ, ಪತ್ರಕರ್ತರಾದ ವಿಜಯಕುಮಾರ ಪತ್ತಾರ, ಪಂಡಿತ ಯಂಪುರೆ ಅನಂದ ಶಾಬಾದಿ ಬ್ರಹ್ಮಕುಮಾರ ಕುಮಾರಿಯರು ಸೇರಿದಂತೆ ಹಲವರಿದ್ದರು. 


ಸುದ್ದಿ ಓದಿ