ಮಾಸಣಗಿ ಗ್ರಾಪಂಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
ಬ್ಯಾಡಗಿ 29: ತಾಲೂಕಿನ ಮಾಸಣಗಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮಲ್ಲೇಶಪ್ಪ ಬಣಕಾರ ಹಾಗೂ ಉಪಾಧ್ಯಕ್ಷರಾಗಿ ರೇಣುಕವ್ವ ಪಡಿಯಣ್ಣನವರ 7-6 ಮತಗಳನ್ನು ಪಡೆದು ಈರ್ವರೂ ಕೇವಲ ಒಂದೇ ಮತದ ಅಂತರದಿಂದ ಚುನಾಯಿತರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ. ಆರ್. ಇಂಗಳಗೊಂದಿ ಘೋಷಿಸಿದ್ದಾರೆ.ಗುರುವಾರ ನಡೆದ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಪಿಜೆ ಬೆಂಬಲಿತ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಲ್ಲೇಶಪ್ಪ ಬಣಕಾರ ಅವರು ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ನೀಲಗಿರಿಯಪ್ಪ ಕಾಕೋಳ ಅವರನ್ನು 7-6 ಮತಗಳನ್ನು ಪಡೆಯುವ ಮೂಲಕ ಕೇವಲ ಒಂದೇ ಮತದ ಅಂತರದಿಂದ ಸೋಲಿಸಿ ಗೆದ್ದಿದ್ದಾರೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರೇಣುಕವ್ವ ಪಡಿಯಣ್ಣನವರ ಬಿಪಿಜೆ ಬೆಂಬಲಿತ ಅಭ್ಯರ್ಥಿ ನೇತ್ರಾ ಕಳಕನವರ ಅವರನ್ನು 7-6 ಮತಗಳನ್ನು ಪಡೆಯುವ ಮೂಲಕ ಇವರೂ ಸಹ ಒಂದೇ ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ.ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಪಿಡಿಓ ಬಸವರಾಜ ಬಣಕಾರ, ಗ್ರಾ.ಪಂ. ನೂತನ ಸದಸ್ಯರು, ಸಿಬ್ಬಂದಿ ವರ್ಗದವರು ಸೇರಿದಂತೆ ಗ್ರಾಮಸ್ಥರು ಅಭಿನಂದಿಸಿದ್ದಾರೆ.