ಇಂಡಿ

ದೇಶ ಕಂಡ ಅಪ್ರತಿಮ ಸೇನಾನಿ ನೇತಾಜಿ: ಬಸವರಾಜ ಕರಜಗಿ

ದೇಶ ಕಂಡ ಅಪ್ರತಿಮ ಸೇನಾನಿ ನೇತಾಜಿ: ಬಸವರಾಜ ಕರಜಗಿ

ಇಂಡಿ 23: ರಾಷ್ಟ್ರ ನಿರ್ಮಾಣದ ಕನಸು ಹೊತ್ತು ದೂರದೃಷ್ಟಿ ಅಲೋಚನೆಗಳಿಂದ ಭಾರತವನ್ನು ಸ್ವಾತಂತ್ರ್ಯದತ್ತ ಕೊಂಡೊಯ್ದ ನೇತಾಜಿ ಅವರು ಪರಾಕ್ರಮಿ ಸೇನಾನಿಯಾಗಿದ್ದರು ಎಂದು ಕನ್ನಡ ಶಿಕ್ಷಕ ಬಸವರಾಜ ಕರಜಗಿ ಹೇಳಿದರು.         

ಅವರು ತಾಲೂಕಿನ ಹಿರೇರೂಗಿ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೇತಾಜಿ ಜನ್ಮದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.  ದೇಶದ ಯುವಕರಲ್ಲಿ ಧೈರ್ಯ, ಉತ್ಸಾಹ, ಶಕ್ತಿ, ಸ್ಯಾಮರ್ಥ್ಯಗಳನ್ನು ತುಂಬಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡು ನೇತಾಜಿ ಅವರು ಮುಂಚೂಣಿಯ ನಾಯಕರಾಗಿದ್ದರು. ಅವರಲ್ಲಿಯ ದೇಶಪ್ರೇಮ, ತ್ಯಾಗ, ನಂಬಿಕೆ, ಧೈರ್ಯ, ಕ್ರಿಯಾಶೀಲ ಮನೋಭಾವದಂತಹ ಗುಣಗಳು ಇಂದಿನ ಯುವ ಜನಾಂಗಕ್ಕೆ ಆದರ್ಶಪ್ರಾಯವಾಗಿವೆ ಎಂದು ಹೇಳಿದರು.          

ಶಾಲಾ ಮುಖ್ಯ ಶಿಕ್ಷಕ ಎಎಂ ಬೆದ್ರೇಕರ ಅಧ್ಯಕ್ಷತೆ ವಹಿಸಿ,ನೇತಾಜಿ ಅವರಿಂದ ದೇಶಕ್ಕಾಗಿ ದುಡಿಯುವ ಪೃವೃತ್ತಿ ನಾವು ರೂಢಿಸಿಕೊಂಡು,ಸುಭದ್ರ ಭಾರತ ನಿರ್ಮಾಣದತ್ತ ಹೆಜ್ಜೆ ಹಾಕಬೇಕಾಗಿದೆ. ಒಗ್ಗಟ್ಟಿನಿಂದ ಬಾಳುವದು ಶ್ರೇಷ್ಠ ಎಂದು ಹೇಳಿದರು. ಎಸ್‍ಎಚ್ ಮೈದರಗಿ ಸ್ವಾಗತಿಸಿದರು. ಎನ್ ಬಿ ಚೌಧರಿ ನಿರೂಪಿಸಿದರು. ಎಸ್‍ಎಸ್ ಅರಬ ವಂದಿಸಿದರು.

ಸುದ್ದಿ ಓದಿ