ಶಿಗ್ಗಾವ್

ಶಾಸಕ ಬಸನಗೌಡ ಪಾಟೀಲ ಯತ್ನಾಳ ಜೊತೆ ಸಂಧಾನ ಸಭೆ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಜೊತೆ ಸಂಧಾನ ಸಭೆ

ಶಿಗ್ಗಾವಿ 25: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಮಾಜಕ್ಕೆ ಮೀಸಲಾತಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ, ತರಾತುರಿಯಲ್ಲಿ ಮೀಸಲಾತಿ ಘೋಷಣೆ ಮಾಡಲು ಬರುವುದಿಲ್ಲ, ಮೀಸಲಾತಿ ಕೊಡಲು ಕಾನೂನಿನ ಅಡೆತಡೆ ಇದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. 

ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಜೊತೆ ಸಂಧಾನ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಮಿಸಲಾತಿ ಕೊಡಲು ಜಾಗ ಖಾಲಿ ಇಲ್ಲ, ದೇಶದ ಎರಡು ರಾಜ್ಯಗಳಲ್ಲಿ ತರಾತುರಿಯಲ್ಲಿ ಮೀಸಲಾತಿ ಘೋಷಣೆ ಮಾಡಿದ್ದರ ಪರಿಸ್ಥಿತಿ ಏನಾಗಿದೆ ನಿಮಗೆಲ್ಲ ಗೊತ್ತಿದೆ, ಸಿಎಂ ಬೊಮ್ಮಾಯಿಯವರು ಸಮಾಜದ ಪರವಾಗಿದ್ದಾರೆ, ಸಿಎಂ ಮೇಲೆ ಸಂವಿಧಾನಾತ್ಮಕವಾಗಿ ಜವಾಬ್ದಾರಿ ಇದೆ, ಮೀಸಲಾತಿ ಕೊಡುತ್ತಾರೆ, ಹೋರಾಟ ಮಾಡೋದು ಬೇಡ ಅಂತಾ ಸ್ವಾಮೀಜಿಯವರ ಜೊತೆ ಚರ್ಚೆ ಮಾಡಿದ್ದೇನೆ, ಹೋರಾಟ ಕೈ ಬಿಡುವಂತೆ ಸ್ವಾಮೀಜಿಯವರಿಗೆ ಮನವಿ ಮಾಡಿದ್ದೇನೆ, ಸ್ವಾಮೀಜಿಯವರು ಇವತ್ತಿನ ಹೋರಾಟ ಮುಂದೂಡುವುದಾಗಿ ಹೇಳಿದ್ದಾರೆ, ಸಾಂಕೇತಿಕವಾಗಿ ಶಿಗ್ಗಾವಿಯಲ್ಲಿ ಕಿತ್ತೂರು ಚೆನ್ನಮ್ಮಳಿಗೆ ಮಾಲೆ ಹಾಕುತ್ತಾರೆ ಎಂದು ಮಾದ್ಯಮಕ್ಕೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. 

ಈ ಸಂದರ್ಭದಲ್ಲಿ ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ದೇವಣ್ಣಾ ಚಾಕಲಬ್ಬಿ, ಶ್ರೀಕಾಂತ ಬುಳ್ಳಕ್ಕನವರ, ರಮೇಶ ವನಹಳ್ಳಿ, ವಿರೇಶ ಆಜೂರ ಸೇರಿದಂತೆ ಪಂಚಮಸಾಲಿ ಸಮಾಜ ಭಾಂದವರು ಉಪಸ್ಥಿತರಿದ್ದರು. 


ಸುದ್ದಿ ಓದಿ