ಇಂಡಿ

ರೈತ ಸಾಧಕರಿಗೆ ನೇಗಿಲಯೋಗಿ ಪ್ರಶಸ್ತಿ ಪ್ರದಾನ

ರೈತ ಸಾಧಕರಿಗೆ ನೇಗಿಲಯೋಗಿ ಪ್ರಶಸ್ತಿ ಪ್ರದಾನ

ಇಂಡಿ29: ಇತ್ತೀಚೆಗೆ ವಿಜಯಪುರದ ಕಂದಗಲ್ ಹನುಮಂತ ರಂಗಮಂದಿರದಲ್ಲಿ ಕೃಷಿಯಲ್ಲಿ ವಿಶೇಷ ಸಾಧನೆಗೈದ 25 ಜನ ರೈತರಿಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ವಿಜಯಪುರ ಜಿಲ್ಲಾ ಹಸಿರುಸೇನೆ ಸಂಘಟನೆ ವತಿಯಿಂದ ಜಿಲ್ಲಾ ಮಟ್ಟದ ರೈತ ಸಾಧಕರಿಗೆ ನೇಗಿಲಯೋಗಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. 

ಈ ಸಮಾರಂಭದಲ್ಲಿ ಇಂಡಿ ತಾಲೂಕಿನ ಅಹಿರಸಂಗ ಗ್ರಾಮದ ಯುವ ರೈತ ಈರಣ್ಣ ಮಲ್ಲಿಕಾರ್ಜುನ ಕುದರಿ ಅವರು ರೈತರ ಆದಾಯ ದ್ವಿಗುಣಗೊಳಿಸುವ ಮಾದರಿಯಲ್ಲಿ ಕೃಷಿ ಚಟುವಟಿಕೆ ಕೈಗೊಂಡು ಉತ್ತಮ ಆದಾಯ ಪಡೆದಿದ್ದಕ್ಕಾಗಿ ಅವರಿಗೆ ಪ್ರಶಸ್ತಿ ನೀಡಿ ಸತ್ಕರಿಸಿ ಗೌರವಿಸಿ ಅವರಿಂದ ರೈತರಿಗೆ ಕೃಷಿ ಚಟುವಟಿಕೆಗಳ ಬಗ್ಗೆ ವಿಶೇಷ ಮಾಹಿತಿ ತಿಳಿಸಲಾಯಿತು. 

ರೈತ ಮುಖಂಡರಾದ ಸಂಗಮೇಶ ಸಗರ, ಶ್ರೀಶೈಲ ಮುಳಜಿ, ಮತ್ತು ರೈತ ಸಂಘಟನೆಯ ಕಾರ್ಯಕರ್ತರು ಹಾಗೂ ನೂರಾರು ರೈತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ಸುದ್ದಿ ಓದಿ