ಧರ್ಮದಿಂದ ವಿಮುಖರಾಗದೇ ಬದುಕು ಸಾಗಿಸಿ: ನೆಗಳೂರು ಶ್ರೀ
ರಾಣೇಬೆನ್ನೂರು 04: ತಪೋನಿಧಿ ಧರ್ಮದ ಆಚರಣೆ ಮೂಲಕ ನಾಡಿನ ಸಮಸ್ತ ಭಕ್ತರಿಗೆ ತಮ್ಮ ಪವಾಡಗಳನ್ನು ತೋರಿಸಿದ ತಿಪ್ಪಾಯಿಕೊಪ್ಪದ ಮೂಕಪ್ಪ ಮಹಾಸ್ವಾಮಿಗಳವರು ಇಂದು ಭೌತಿಕವಾಗಿ ಅವರು ನಮ್ಮ ಮಧ್ಯೆ ಇಲ್ಲದೆ ಇದ್ದರೂ ಅವರು ನೀಡಿದ ಧರ್ಮದ ಕೊಡುಗೆ ಈ ನಾಡಿಗೆ ಮತ್ತು ಭಕ್ತರ ಉದ್ದಾರಕ್ಕೆ ಸಹಕಾರಿಯಾಗಿದೆ. ಅಂತಹ ಮಹಾತ್ಮರ ಜ್ಯೋತಿ ಅವರ ಜನ್ಮ ತಪೋಭೂಮಿ ಹಳೆ ಹೊನ್ನತ್ತಿ ಗ್ರಾಮದಿಂದಲೇ ಹೊರಟಿರುವುದು ಐತಿಹಾಸಿಕ ಸಾಕ್ಷಿಯಾಗಿ ದಾಖಲೆಯಾಗಲಿದೆ ಎಂದು ನೆಗಳೂರು ಹಿರೇಮಠದ ಷ.ಬ್ರ.ಗುರುಶಾಂತ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ತಾಲೂಕಿನ ಸುಕ್ಷೇತ್ರ ಹಳೆ ಹೊನ್ನತ್ತಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಮಹಾಂತ ದೇವರ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವದ ನಿಮಿತ್ತ ನಡೆದ ಗುರು ಮೂಕಪ್ಪ ಶಿವಯೋಗಿಗಳ ಜೀವನ ದರ್ಶನ , ಪ್ರವಚನ ಮತ್ತು ಜ್ಯೋತಿ ರಥಯಾತ್ರೆ ಧರ್ಮ ಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ತಿಪ್ಪಾಯಿಕೊಪ್ಪದ ಮೂಕಪ್ಪ ಮಹಾಸ್ವಾಮಿಗಳವರ ಮಠವು ಹಿಂದಿನಿಂದಲೂ ಇತಿಹಾಸ ಹೊಂದಿದ್ದು, ನಿರಂಜನಾ ಚರ ಪಟ್ಟಾಧಿಕಾರ ವಹಿಸಿಕೊಳ್ಳಲಿರುವ ಇಂದಿನ ಮಹಾಂತ ದೇವರು ಮೂರನೇಯವರಾಗಿದ್ದಾರೆ. ಎಲ್ಲವೂ ಭಕ್ತರ ಅಭಿಷ್ಟೆ ಮತ್ತು ನಾಡಿನ ಶ್ರೀಗಳವರ ನಿರೀಕ್ಷೆಯಂತೆಯೇ ನಡೆಯುತ್ತಿರುವುದು ನಾಡಿನ ಭಕ್ತ ಸಮುದಾಯಕ್ಕೆ ಸಂತೋಷದ ಸಂಗತಿಯಾಗಿದೆ. ಗ್ರಾಮದ ನಾಗರೀಕರು ಮಹಾನ್ ಜ್ಯೋತಿಯನ್ನು ಕೊಡುಗೆಯಾಗಿ ನೀಡಿದ್ದು, ಮತ್ತು ಇಲ್ಲಿ ಜನ್ಮ ತಾಳಿರುವ ನಾಗರೀಕರು ಅತಿ ಪುಣ್ಯವಂತರು. ಕ್ಷೇತ್ರದಲ್ಲಿ ನಡೆಯುವ ಪಟ್ಟಾಧಿಕಾರ ಮಹೋತ್ಸವದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂದು ವಿವರಣೆ ನೀಡಿದರು.
ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು, ಕೂಡಲದ ಗುರುನಂಜುಂಡೇಶ್ವರ ಸ್ವಾಮೀಜಿ, ರೇವಣ ಸಿದ್ದೇಶ್ವರ ಮಹಾಸ್ವಾಮಿಗಳು, ಅಕ್ಕಿಹಾಲೂರು ಶಿವಬಸವ ಮಹಾಸ್ವಾಮಿಗಳು, ಅನ್ನದಾನ ಶಾಸ್ತ್ರೀಗಳು ಇತರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಹಿರೇಕೆರೂರಿನ ಮಾಜಿ ಶಾಸಕ ಯು.ಬಿ.ಬಣಕಾರ, ಹೇಮಾವತಿ ಸಂತೋಷ ಉಪ್ಪಿನ, ಹೆಚ್.ಬಿ.ಪಟ್ಟಣಶೆಟ್ಟಿ, ನಾಗರಾಜ ಹಿಳಗೇರ, ಭಾರತಿ ಜಂಬಗಿ, ಅಜೇಯ ಮಠದ, ಮಲ್ಲಿಕಾರ್ಜುನ ಪಾಟೀಲ, ಪವನ್ ಮಲ್ಲಾಡದ, ಪ್ರಕಾಶ ಮಣ್ಣಪ್ಪನವರ, ಹನುಮಂತಗೌಡ ಭೈರಮ್ಮನವರ, ವಿಷ್ಣಪ್ಪ ಕಂಬಳಿ, ಲಕ್ಷ್ಮಪ್ಪ ಎಲಿಗಾರ, ಬಿ.ಕೆ.ನಿಂಗಪ್ಪ, ಬಸವರಾಜ ಪಟ್ಟಣಶೆಟ್ಟಿ, ಹನುಮಂತಗೌಡ ಭರಮಣ್ಣನವರ, ತಮ್ಮಣ್ಣ ಬೆಲ್ಲದ, ಕರಬಸಪ್ಪ ನಿಟ್ಟೂರು, ಕರಬಸಪ್ಪ ಬೆನ್ನೂರು, ಮಲ್ಲಿಕಾರ್ಜುನಪ್ಪ ಹುಬ್ಬಳ್ಳಿ, ಮಹಾದೇವಪ್ಪ ಶಿಡಗನಾಳ, ದೇವೆಂದ್ರಪ್ಪ ಹಾವನೂರು, ಪ್ರಕಾಶ ಪಾಟೀಲ, ಬಸವರಾಜ ಮಠದ, ನಿಂಗಪ್ಪ ಚಳಗೇರಿ ಸೇರಿದಂತೆ ಮತ್ತಿತರ ಗಣ್ಯರು ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.
ಗ್ರಾಮದಿಂದ ಅದ್ದೂರಿಯಾಗಿ ಮತ್ತು ಧರ್ಮ ಸಂಸ್ಕೃತಿ ಬಿಂಬಿತವಾಗಿ ಹೊರಟ ಮೂಕಪ್ಪ ಸ್ವಾಮಿಗಳವರ ಜ್ಯೋತಿ ರಥ ಯಾತ್ರೆಯೂ ಗ್ರಾಮದ ನಾಗರೀಕರಲ್ಲಿ ಧರ್ಮ ಜಾಗೃತಿಯ ಸಂದೇಶ ನೀಡುವಲ್ಲಿ ಯಶಸ್ವಿಯಾಯಿತು. ರಥಯಾತ್ರೆಗೆ ನಾಡಿನ ಜನಪದ ಕಲಾ ತಂಡಗಳು, ವಾಧ್ಯಮೇಳಗಳು, ವಿಶೇಷ ಮೆರಗೂ ನೀಡಿದ್ದವು.