ನೇವಿ ಸಪ್ತಾಹ: ದಿನಗೂಲಿಗಳಿಗೆ ಅವಶ್ಯಕ ಸಾಮಾಗ್ರಿ ಹಂಚಿದ ನೇವಿ ವಿವ್ಯೂಸ್ ವೆಲ್ಫೇರ್ ಅಸೋಶಿಯೇಶನ್
ಕಾರವಾರ 10: ನೇವಿ ಸಪ್ತಾಹದ ಅಂಗವಾಗಿ ದಿನಗೂಲಿಗಳಿಗೆ ಅವಶ್ಯಕ ಸಾಮಾಗ್ರಿಗಳನ್ನು, ಶಿಪ್ ರಿಪೇರ್ ಯಾರ್ಡನ ಸಿಬ್ಬಂದಿ, ನೇವಿ ವಿವ್ಯೂಸ್ ವೆಲ್ಫೇರ್ ಅಸೋಶಿಯೇಶನ್ ಸ್ಪಶರ್ಾ ಟೀಂ ಮೂಲಕ ಅವಶ್ಯ ಮೂಲಭೂತ ಸಾಮಾಗ್ರಿಗಳನ್ನು ವಿತರಿಸಲಾಯಿತು. ಶಿಪ್ ರಿಪೇರ್ ಯಾರ್ಡನಲ್ಲಿ ದುಡಿವ ದಿನಗೂಲಿಗಳಿಗೆ ಗುರುವಾರ ಮನೆ ಮನೆಗೆ ತೆರಳಿದ ನೇವಿ ವಿವ್ಯೂಸ್ ವೆಲ್ಫೇರ್ ಅಸೋಶಿಯೇಶನ್ನ ನೇವಿ ಸಿಬ್ಬಂದಿ ಆಹಾರ ಸಾಮಾಗ್ರಿ ಹಂಚಿದರು. ಕೋವಿಡ್ 19 ಸಮಯದಲ್ಲಿ ದಿನಗೂಲಿ ನೌಕರರು ಶಿಪ್ ರಿಪೇರಿಯಾರ್ಡನಲ್ಲಿ ಅವಿರತವಾಗಿ ಕಾರ್ಯನಿರ್ವಹಿಸಿದ್ದರು. ಆಹಾರ ಸಾಮಾಗ್ರಿ ವಿತರಣೆಯ ವೇಳೆ ನೇವಿ ವಿವ್ಯೂಸ್ ವೆಲ್ಫೇರ್ ಅಸೋಶಿಯೇಶನ್ನ ಅಧ್ಯಕ್ಷೆ ಶ್ರೀಮತಿ ಮನಿತಾ ಸಿಂಗ್ ಹಾಗೂ ಅಸೋಶಿಯೇಶನ್ ಪದಾಧಿಕಾರಿಗಳು ಇದ್ದರು.