ನವರಾತ್ರಿ: ಅಂಬಾಭವಾನಿ ದೇವಿಗೆ ವಿಶೇಷ ಅಲಂಕಾರ ಪೂಜೆ
ಘಟಪ್ರಭಾ 21: ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಜಗನ್ಮಾತೆ ರಾಜರಾಜೇಶ್ವರಿ ಅಂಬಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಅಂಬಾಭವಾನಿ ದೇವಿಗೆ ಕಳೆದ ಆರು ದಿನಗಳಿಂದ ಶೈಲ ಪುತ್ರಿ ದೇವಿ, ಬ್ರಹ್ಮಚಾರಿಣಿ ದೇವಿ, ಚಂದ್ರಘಂಟಾ ದೇವಿ, ಕುಷ್ಮಾಂಡ ದೇವಿ, ಸ್ಕಂದಮಾತಾ ದೇವಿ, ಕಾತ್ಯಾಯಿನಿ ದೇವಿ ವಿಶೇಷ ಅಲಂಕಾರ ಪೂಜೆ ಮಾಡಲಾಯಿತು.