ರಾಜ್ಯ ಹ್ಯಾಂಡ್ಬಾಲ್ ತಂಡಕ್ಕೆ ಕ್ರೀಡಾಪಟು ನವೀನಕುಮಾರ ಆಯ್ಕೆ
ತಾಳಿಕೋಟೆ 23: ಪಟ್ಟಣದ ಯುವ ಹ್ಯಾಂಡ್ಬಾಲ್ ಕ್ರೀಡಾಪಟು ನವೀನಕುಮಾರ ಸಂಗಪ್ಪ ಈಜೇರಿ ಕರ್ನಾಟಕ ರಾಜ್ಯ ಹ್ಯಾಂಡ್ ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾನೆ.
ಇತ್ತೀಚಿಗೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿ ಉತ್ತಮ ಆಟ ಪ್ರದರ್ಶನ ನೀಡುವ ಮೂಲಕ ಹ್ಯಾಂಡ್ಬಾಲ್ ತಂಡಕ್ಕೆ ಆಯ್ಕೆಯಾಗಿ ಉತ್ತರ್ರದೇಶದ ಲಕ್ನೋದ ಕೆ.ಡಿ. ಸಿಂಗ್ ಸ್ಡೇಡಿಯಂನಲ್ಲಿ ರಾಷ್ರಮಟ್ಟದ ಹ್ಯಾಂಡ ಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾನೆ.
ಪಟ್ಟಣದ ಎಸ್.ಕೆ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ ನವೀನಕುಮಾರ ಪದವಿಯಲ್ಲಿ ಅಭ್ಯಾಸ ಮಾಡುವಾಗ ಎರಡು ಬಾರಿ ಬೆಳಗಾವಿಯ ರಾಣಿಿ ಚನ್ನಮ್ಮ ವಿಶ್ವವಿದ್ಯಾಲಯ(ಯುನಿವರ್ಸಿಟಿ ಬ್ಲೂ) ತಂಡಕ್ಕೆ ಆಯ್ಕೆಯಾಗಿದ್ದನು. ರಾಜ್ಯ ತಂಡಕ್ಕೆ ಆಯ್ಕೆಯಾಗುವ ಮೂಲಕ ಪಟ್ಟಣದ ಎಸ್.ಕೆ.ಪದವಿ ಮಹಾವಿದ್ಯಾಲಯದ ಕಿರ್ತಿ ಹೆಚಿಸಿದ್ದಾನೆ. ವಿದ್ಯಾರ್ಥಿಯ ಈ ಸಾಧನೆಗೆ ಮಹಾವಿದ್ಯಾಲಯದ ಚೇರಮನ್ ವ್ಹಿ.ಸಿ.ಹೀರೆಮಠ, ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ವ್ಹಿ.ಜಾಲವಾದಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ದಯಾನಂದ ಮುಗಡ್ಲಿಮಠ ಹಾಗೂ ಎಲ್ಲ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.