ನವೀನ ಸವಣೂರ ಗೌರವಧನದ ಚೆಕ್ ವಿತರಣೆ
ಶಿಗ್ಗಾವಿ 26: ರಾಜ್ಯದ ವಿವಿಧೆಡೆ 75 ದಿನಗಳ ಕಾಲ ನಡೆಯಲಿರುವ ಕೆಪಿಎಲ್ ಮಾದರಿಯ ಘನ್ ಬಲೂನ್ಸ್ ಹೆಸರಿನ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ತಾಲೂಕಿನ ಗ್ರಾಮೀಣ ಭಾಗದ ಕ್ರೀಡಾಪಟುಗಳ ತಂಡಕ್ಕೆ ಇಬ್ರಾಹಿಂಪೂರ ಗ್ರಾಮದಲ್ಲಿ ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದ ವತಿಯಿಂದ ಸಮಾಜ ಸೇವಕ ನವೀನ ಸವಣೂರ ಗೌರವಧನದ ಚೆಕ್ ವಿತರಿಸಿದರು.
ತಾಲೂಕಿನ ಇಬ್ರಾಹಿಂಪೂರ ಗ್ರಾಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಸೂಕ್ತ ವೇದಿಕೆಯ ಅವಶ್ಯಕತೆಇದೆ. ಇಂತಹ ಅವಕಾಶವನ್ನು ಫನ್ ಬಲೂನ ಒದಗಿಸಿಕೊಟ್ಟಿದೆ. ಕ್ರೀಡಾಪಟುಗಳು ಇದರ ಸದೂಪಯೋಗ ಪಡೆದುಕೊಂಡು ಶಿಗ್ಗಾಂವಿ ತಾಲೂಕನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದರು.
ಸಪ್ಟೆಂಬರನಲ್ಲಿ ಆರಂಭಗೊಳ್ಳಲಿರುವ ಕಬಡ್ಡಿ ಪಂದ್ಯಾವಳಿ ಪ್ರಥಮ ಬಹುಮಾನ 25ಲಕ್ಷ, ದ್ವೀತಿಯ ಬಹುಮಾನ 10ಲಕ್ಷ, ತೃತೀಯ ಬಹುಮಾನ 5ಲಕ್ಷರೂ.ಬಹುಮಾನ ಹೊಂದಿದೆ.
ಈ ಸಂದರ್ಭದಲ್ಲಿ ವಿರೇಶಆಜೂರ, ನಾಗನಗೌಡ ಪಾಟೀಲ, ಯಲ್ಲಪ್ಪ ನರಗುಂದ, ಪ್ರಕಾಶಕುರಗೋಡಿ, ಸಚಿನಗಾಜಿಪುರ, ವಿಶ್ವನಾಥ ನೇಕಾರ, ಪ್ರವೀಣ ಕಲಿವಾಳ, ಅರುಣಚಂದ್ರಗೀರಿ, ರಮೇಶ ಬನ್ನನ್ನವರ, ಶರಣಪ್ಪ ಮಾಸನಕಟ್ಟಿ, ಉಮೇಶ ಬಾವಿ, ಹನುಮಂತ ಹಳ್ಯಾಳ, ಉಮೇಶ ಹೊನ್ನನ್ನವರ, ಶರಣಪ್ಪ ಹೊನ್ನನ್ನವರ, ಬಸವಣ್ಣೆಪ್ಪ ಶೆಟ್ಟರ, ನಾಗಪ್ಪ ಹೊನ್ನನ್ನವರ ಮತ್ತಿತತರರು ಉಪಸ್ಥಿತರಿದ್ದರು.