ರಾಣೆಬೆನ್ನೂರ

ರಾಷ್ಟ್ರ ಮಟ್ಟದ ಕರಾಟೆ ಟೋರ್ನಿ:ರಾಣೀಬೆನ್ನೂರು ಪಟುಗಳ ಸಾಧನೆ

ರಾಷ್ಟ್ರ ಮಟ್ಟದ ಕರಾಟೆ ಟೋರ್ನಿ:ರಾಣೀಬೆನ್ನೂರು ಪಟುಗಳ ಸಾಧನೆ

ರಾಣೀಬೆನ್ನೂರು 01:  ಹಾಸನ್ ನಗರದ ಅಂಬೇಡ್ಕರ ಭವನದಲ್ಲಿ ಹಾಸನ್ ಜಿಲ್ಲಾ ಕರಾಟೆ ಅಸೋಸಿಯೇಷನ್ ಹಾಗೂ ಮೌಲೆ ಶೂಟೋಖಾನ್ ಸಹಯೋಗದಲ್ಲಿ 2021ರ ಹಾಸನ್ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಫ್ ಪಂದ್ಯಾವಳಿಗಳು ಇತ್ತೀಚೆಗೆ ನಡೆಯಿತು. 

ನಗರದ ಸಿಟಿ ಕರಾಟೆ ಸಂಸ್ಥೆಯ ಸದರಿ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ ಸಮಗ್ರ ಪ್ರಶಸ್ತಿ ಪಡೆದುಕೊಂಡು ಸಿಟಿ ಕರಾಟೆ ಸಂಸ್ಥೆ ಮತ್ತು ಜಿಲ್ಲೆಗೆ ಕೀರ್ತಿ ತಂದು ಸಾಧನೆ ಮೆರೆದಿದ್ದಾರೆ. ಸ್ಪರ್ಧಾ ಪಟುಗಳು ಕಥಾ ವಿಭಾಗದಲ್ಲಿ 5 ಚಿನ್ನ 4 ಬೆಳ್ಳಿ 4 ಬ್ರೌನ್ ಮೆಡಲ್ಸ್ ಪ್ರಥಮ, ದ್ವಿತೀಯ ಮತ್ತು ತೃತೀಯ ಕುಮತೆ ವಿಭಾಗವದಲ್ಲಿ ಟ್ರೋಫಿ ಮತ್ತು ಪ್ರಮಾಣ ಪತ್ರ ಗಳಿಸಿದ್ದಾರೆ. ಪ್ರಥಮ ಕಥಾ, ಕುಮಥೆ ಸುಕೃತಿ ಎಂ.ಎಸ್., ವಿನೋಧ ಎ.ಜಿ., ಗೌತಮ್ ಲಮಾಣಿ, ಆರ್.ಶ್ರೀನಿವಾಸ, ಸಂಪತ್ ವರವಜ್ಜಿ, ರಾಜು ಸಿ.ಜಿ., ಸಿದ್ಧಲಿಂಗೇಶ ಕೆ.ಎಸ್ ಹಾಗೂ ದಾದಾಪೀರ ಝಡ್. ವೈ. ಮತ್ತು ದ್ವಿತೀಯ-ತೃತೀಯ ಶೀತಲ್ ಎಂ., ಸೋಮಲಿಂಗಪ್ಪ ಯು. ನಲವಾಗಲ, ನಂದೀಶ ಹೊನ್ನಾಳಿ, ಹಿದಾಯತ್ ಆರ್.ಎನ್., ಹರ್ಷಾ ಹೊನ್ನಾಳಿ ಸಾಧನೆ ಮೆರೆದು ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಮುಖ್ಯ ತರಬೇತುದಾರ ದಿಲೀಪ್ ವಿ.ಅಂಬಿಗೇರ ಮತ್ತು ಸಹ ತರಬೇತುದಾರರು ಹಾರ್ಧಿಕವಾಗಿ ಅಭಿನಂದಿಸಿದ್ದಾರೆ.  

ಸುದ್ದಿ ಓದಿ