ಹೂವಿನ ಹಡಗಲಿ

ರಾಷ್ಟ್ರ ಮಟ್ಟದ ಕಂಚಿನ ಪದಕ ಗಳಿಸಿದ ಗ್ರಾಮೀಣ ಪ್ರತಿಭೆ

ರಾಷ್ಟ್ರ ಮಟ್ಟದ ಕಂಚಿನ ಪದಕ ಗಳಿಸಿದ ಗ್ರಾಮೀಣ ಪ್ರತಿಭೆ

ಲೋಕದರ್ಶನ ವರದಿ 

ಹೂವಿನಹಡಗಲಿ 01:  ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಗಂಗಾವತಿಬಾಗ್ಯಮ್ಮ ಗ್ರಾಮೀಣ ಮಹಾವಿದ್ಯಾಲಯದ ಬಿ.ಎ.ಪ್ರಥಮವರ್ಷ ವಿದ್ಯಾರ್ಥಿ ರಾಥೋಡ್ ಲೋಕೇಶ್ ದಾಮು ರಾಷ್ಟ್ರ ಮಟ್ಟದ ಕಂಚಿನ ಪದಕ ಗಳಿಸಿದ್ದಾನೆ. 

ಛತ್ತೀಸ್‌ಗಡ್ ರಾಜ್ಯದ ಬಿಲಾಸ್‌ಪುರದಲ್ಲಿ ಅ.29 ರಿಂದ ಮೂರು ದಿನಗಳಕಾಲ ನಡೆಯುತ್ತಿರುವ 2ನೇ ರಾಷ್ಟ್ರೀಯ ಯು-23 ವರ್ಷ ವಯೋಮಾನದ ಅತ್ಲೇಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಡೆಕಾಥ್ಲಾನ್ ಕ್ರೀಡೆಯಲ್ಲಿ 6069 ಅಂಕಗಳನ್ನು ಗಳಿಸುವ ಮೂಲಕ ಕಂಚಿನ ಪದಕವನ್ನು ಪಡೆದಿದ್ದಾನೆ.  ಈ ವಿದ್ಯಾರ್ಥಿಗೆ ಕಾಳೇಜಿನ ದೈಹಿಕಉಪನ್ಯಾಸಕ ಬಡೇಸಾಬನಾಯಕ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಗೆ ಬಳ್ಳಾರಿ ವೀರಶೈವವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್‌.ಎಂ.ಗುರುಸಿದ್ದಸ್ವಾಮಿ, ಉಪಾಧ್ಯಕ್ಷ ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ.ಬಸವರಾಜ್ ಹಾಗೂ ಕಾಲೇಜಿನ ಆಡಳಿ ಮಂಡಳಿಯ ಅಧ್ಯಕ್ಷ ಅಕ್ಕಿ ಶಿವಕುಮಾರ್, ಪ್ರಾಚಾರ್ಯ ಎಸ್‌.ಎಸ್‌.ಪಾಟೀಲ್ ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ