ಶಿಗ್ಗಾವ್

ರಾಷ್ಟ್ರೀಯ ಯುವ ದಿನ ಆಚರಣೆ ..,,

ರಾಷ್ಟ್ರೀಯ ಯುವ ದಿನ ಆಚರಣೆ  ..,,

ಲೋಕದರ್ಶನ ವರದಿ 


ಶಿಗ್ಗಾವಿ : ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹಿರೇಬೆಂಡಿಗೇರಿಯಲ್ಲಿ ಜೆಸಿಐ  ಶಿಗ್ಗಾಂವ ಘಟಕದಿಂದ  ವಿಶ್ವ ಕಂಡ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಯುವ ದಿನ ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಜೆಸಿ ಗುರುರಾಜ ಎ ಹೆಚ್ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮನವರಿಕೆ ಮಾಡಿದರು.   

ಪ್ರೌಢಶಾಲೆಯ ಹಿರಿಯ ಶಿಕ್ಷಕ ಜೆ ಎಸ್ ಫರ್ನಾಂಡಿಸ್ ವಹಿಸಿದ್ದರು. ಜೆಸಿಐ ಭಾರತದ ವಲಯ 24ರ ವಲಯ ಉಪಾಧ್ಯಕ್ಷರು ಹಾಗೂ ವಲಯ ತರಬೇತುದಾರ  ಜೆಸಿ ಪ್ರವೀಣ ದೇಶಪಾಂಡೆ ವಿದ್ಯಾರ್ಥಿಗಳಿಗೆ ಓದುವ, ಬರೆಯುವ ಕೌಶಲ್ಯದ ಜೊತೆಗೆ ನಾಯಕತ್ವ ಗುಣಗಳನ್ನು ಹೇಗೆ ಅಭಿವೃದ್ಧಿಪಡಿಸಿಕೊಳ್ಳ ಬೇಕೆಂಬುದನ್ನು ಕುರಿತು ತರಬೇತಿ ನೀಡಿದರು.  

 ಕಾರ್ಯಕ್ರಮದ ಅಧ್ಯಕ್ಷತೆವಹಸಿದ್ದ ಜೆಸಿಐ ಶಿಗ್ಗಾಂವ   ಅಧ್ಯಕ್ಷ ಜೆಸಿ ಡಿ ಆರ್ ತೋಟಿಗೇರ ನಾವು ಮಾಡುವ ಕೆಲಸ ಸಾಧನೆಯಾಗಬೇಕಾದರೆ ಪ್ರಥಮವಾಗಿ ಅಥವಾ ವೇಗವಾಗಿ ಅಥವಾ ವಿಭಿನ್ನವಾಗಿ ಮಾಡಬೇಕೆಂದು ಹೇಳುತ್ತಾ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ತಿಳಿಸಿದರು.   

 ಎಸ್ ಎ ದುದಾಳಕರ ಗಣ್ಯರನ್ನು ವೇದಿಕೆಗೆ ಕರೆತಂದರು, ವ್ಹಿ ಎಮ್ ಬಡಿಗೇರ ಜೆಸಿ ವಾಣಿ, ಧ್ಯೇಯ ಹೇಳಿದರು, ನಾಗೇಂದ್ರ​‍್ಪ ಡಿ ಸ್ವಾಗತಿಸಿದರು. ಜೆಸಿಐ ಶಿಗ್ಗಾಂವನ ಕಾರ್ಯದರ್ಶಿ ಜೆಸಿ ಬಿ ಎಸ್ ಬಸರಿಕಟ್ಟಿ ಅತಿಥಿಗಳನ್ನು ಪರಿಚಯಿಸಿದರು ಹಾಗೂ ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಜೆಸಿಐ ಶಿಗ್ಗಾಂವ ಪೂರ್ವಾಧ್ಯಕ್ಷರು ಹಾಗೂ ಪೂರ್ವ ವಲಯಾಧಿಕಾರಿಗಳಾದ ಜೆಸಿ ರಾಘವೇಂದ್ರ ದೇಶಪಾಂಡೆ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸ್ವಾಮಿ ವಿವೇಕಾನಂದರ ಜೀವನಾದರ್ಶನದ ಪುಸ್ತಕಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ  ಶಾಹಿನಾ ನದಾಫ್ ಹಾಗೂ  ನಾಗಪ್ಪ ಪರಸಾಪೂರ ಉಪಸ್ಥಿತರಿದ್ದರು. 


ಸುದ್ದಿ ಓದಿ