ರಾಷ್ಟ್ರೀಯ ಮಹಿಳಾ ದಿನಾಚರಣೆ
ಲೋಕದರ್ಶನ ವರದಿ
ಯರಗಟ್ಟಿ 27: ಪಟ್ಟಣದ ಮಹಾಂತ ದುರದುಂಡೇಶ್ವರ ಮಠದ ಆವರಣದಲ್ಲಿ ಯರಗಟ್ಟಿ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಭಿನಂದನಾ ಸಮಾರಂಭ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ದಿ. 28 ಮಂಗಳವಾರ ಸಂಜೆ 5ಗಂಟೆಗೆ ಆಯೋಜಿಸಲಾಗಿದೆ.
ಉದ್ಘಾಟಕರಾಗಿ ಪ. ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಉಪನ್ಯಾಸಕರಾಗಿ ಬೈಲಹೊಂಗಲ ಕಸಾಪ ಅಧ್ಯಕ್ಷ ಎನ್. ಆರ್. ಠಕ್ಕಾಯಿ, ಅಧ್ಯಕ್ಷತೆ ತಮ್ಮಣ್ಣಾ ಕಾಮಣ್ಣವರ, ಮುಖ್ಯ ಅತಿಥಿಗಳಾಗಿ ಮಾಜಿ ತಾ. ಪಂ. ಅಧ್ಯಕ್ಷ ಪರ್ವಗೌಡ ಪಾಟೀಲ, ಪಿ.ಕೆಪಿ.ಎಸ್. ಅಧ್ಯಕ್ಷ ಮಹಾಂತೇಶ ಗೋಡಿ, ಗ್ರಾ. ಪಂ. ಅಧ್ಯಕ್ಷ ಗೌಡಪ್ಪ ಸವದತ್ತಿ, ಪ. ಪಂ. ಸದಸ್ಯ ಮಹಾಂತೇಶ
ಜಕಾತಿ, ಶರಣೆ ಉಮಾತಾಯಿ ಪೂರ್ವಿಮಠ, ಪ್ರಭಾವತಿ ವಾಲಿ, ಜ್ಯೋತಿ ದೇವರಡ್ಡಿ ಸೇರಿದಂತೆ ಅನೇಕ ಗಣ್ಯಮಾನ್ಯರು ಹಾಗೂ ತಾಲೂಕಿನ ಎಲ್ಲಾ ಮಹಿಳಾ ಮಂಡಳಗಳ ಪದಾಧಿಕಾರಿಗಳು ಆಗಮಿಸಲ್ಲಿದ್ದಾರೆ ಎಂದು ಕಸಾಪ ಪ್ರಧಾನ ಕಾರ್ಯದರ್ಶಿ ಕುಮಾರ ಜಕಾತಿ ಪ್ರಕಟನೆಗೆ ತಿಳಿಸಿದ್ದಾರೆ.