ರಾಣೆಬೆನ್ನೂರ

ಕೆಎಲ್‌ಇ ಶಿಕ್ಷಣ ಸಂಸ್ಥೆ : ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಕೆಎಲ್‌ಇ ಶಿಕ್ಷಣ ಸಂಸ್ಥೆ : ರಾಷ್ಟ್ರೀಯ ಕ್ರೀಡಾ ದಿನಾಚರಣೆ

ರಾಣೆಬೆನ್ನೂರು 14:  ಮಾನಸಿಕ ದೈಹಿಕ ಬೌದ್ಧಿಕ ಬೆಳವಣಿಗೆಗೆ ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ  ಯಾವುದೇ ರಾಷ್ಟ್ರೀಯ ಕ್ರೀಡೆಗಳು ಅತ್ಯಂತ ಸಹಕಾರಿಯಾಗಿದೆ ಎಂದು ರಾಣೆಬೆನ್ನೂರು ಸಂಚಾರಿ ಪಿಎಸ್‌ಐ ಮಹಾದೇವಿ ಪಳೂಟಿ ಹೇಳಿದರು. ಅವರು ಇಲ್ಲಿನ ಕೆಎಲ್‌ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭಾರತೀಯರು ಆಶಾ ಜೀವಿಗಳು, ನಿರಾಸೆ ಎಂಬುದು ಇರಬಾರದು, ಇದ್ದರೆ ಸಾಧನೆ ಸಾಧ್ಯವಿಲ್ಲ. ಎಂದ ಅವರು ಹಿಂದಿನ ಶಿಕ್ಷಣಕ್ಕೂ ಇಂದಿನ ಆಧುನಿಕ ಶಿಕ್ಷಣಕ್ಕೂ ಸಾಕಷ್ಟು ಬದಲಾವಣೆಯಾಗಿದೆ, ಮಹಿಳೆಯರು ಸರ್ವ ಸ್ವತಂತ್ರರಾಗಿದ್ದಾರೆ, ಸಾಧನೆ ಮಾಡಲು  ಸಾಕಷ್ಟು ಅವಕಾಶಗಳಿವೆ. ನಿರಂತರ ಪ್ರಯತ್ನ, ಸತತ ಪರಿಶ್ರಮ ಇಂದಿನ ಬಹು ಅಗತ್ಯವಿದೆ ಎಂದರು. ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಧ್ಯಕ್ಷ ವಿ ಪಿ. ಲಿಂಗನಗೌಡ್ರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ಸದಸ್ಯರಾದ ಬಿ.ಎಸ. ಪಟ್ಟಣಶೆಟ್ಟಿ, ವೀರಣ್ಣ ಅಂಗಡಿ, ಕಾಲೇಜು ಪ್ರಾಚಾರ್ಯ ಪ್ರೊ.ನಾರಾಯಣ ನಾಯಕ ಎ, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷೆ ಡಾ ಕವಿತಾ ಗಡ್ಡದ ಗೂಳಿ, ಸೇರಿದಂತೆ ಮತ್ತಿತರ ಗಣ್ಯರು, ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ  ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ ಮಂಜಪ್ಪ ಸಣ್ಣ ಬಸಪ್ಪನವರ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಾಲಕ್ಷ್ಮಿ ದಲಬಂಜನ್ ಸಂಗಡಿಗರು ಪ್ರಾರ್ಥಿಸಿದರು. ಮಮತಾ ಪೂರಾ ಪುರ್, ಸ್ವಾಗತಿಸಿದರು. ಮೇಘ ಧುಳೆಹೊಳೆ ನಿರೂಪಿಸಿ, ಪೂಜಾ ಪಾಟೀಲ್, ವಂದಿಸಿದರು. 


ಸುದ್ದಿ ಓದಿ