ಯರಗಟ್ಟಿ

ರಾಷ್ಟ್ರೀಯ ಪೋಷಣ ಮಾಸಾಚರಣೆ: ಪೌಷ್ಟಿಕ ಆಹಾರದ ಪ್ರಾತ್ಯಕ್ಷಿಕೆ

ರಾಷ್ಟ್ರೀಯ ಪೋಷಣ ಮಾಸಾಚರಣೆ: ಪೌಷ್ಟಿಕ ಆಹಾರದ ಪ್ರಾತ್ಯಕ್ಷಿಕೆ

ಯರಗಟ್ಟಿ 18: ಗರ್ಭದಿಂದ ಗೋರಿಯವರೆಗೆ ಆರೋಗ್ಯ ಇಲಾಖೆಯ ಸೇವೆಗಳಿವೆ. ಗರ್ಭಿಣಿಯರು ಕನಿಷ್ಟ ಪಕ್ಷ 3 ಸಲ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸುವದು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವದು ಹಾಗೂ ಮಗುವಿನ ಆರೋಗ್ಯ ತಪಾಸಣೆ, ಲಸಿಕೆ ಹಾಕಿಸುವದು, ಹುಟ್ಟಿದ ಅರ್ಧಗಂಟೆಯೊಳಗೆ ಎದೆ ಹಾಲು ಕುಡಿಸುವದು, ಮಕ್ಕಳ ನಡುವೆ ಅಂತರ ಇಡುವದರಿಂದ ತಾಯಂದಿರ ಮರಣ ಮತ್ತು ಶಿಶುಮರಣ ತಪ್ಪಿಸಬಹುದು ಎಂದು ಯರಗಟ್ಟಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್ ಗಂಜಿ ಅಭಿಪ್ರಾಯಪಟ್ಟರು.  

ಅವರು ಯರಗಟ್ಟಿ ತಾಲೂಕಿನ ಲಕ್ಷ್ಮಿ ಮಂದಿರದಲ್ಲಿ ದಿ.16ರಂದು ಏರಿ​‍್ಡಸಲಾಗಿದ್ದ ರಾಷ್ಟ್ರೀಯ ಪೊಷಣ ಮಾಸಾಚರಣೆ ಅಂಗವಾಗಿ ಪೌಷ್ಟಿಕ ಆಹಾರದ ಪ್ರಾತ್ಯಕ್ಷಿಕೆ, ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನಪ್ರಾಶನ ಕಾರ‌್ಯಕ್ರಮದಲ್ಲಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಗರ್ಭಿಣಿಯರು, ಬಾಣಂತಿಯರು, ಹಾಗೂ ಮಕ್ಕಳಿಗೆ ಅಪೌಷ್ಟಿಕತೆ ಆಗುವ ಸಾಧ್ಯತೆ ಇರುವದು. ಇದಕ್ಕೆ ಬಡತನ, ಅನಕ್ಷರತೆ, ನಿರುದ್ಯೋಗ, ಮೂಢನಂಬಿಕೆ, ಸಂಪ್ರದಾಯ ಮತ್ತು ಜನಸಂಖ್ಯಾ ಹೆಚ್ಚಳ ಕಾರಣಗಳಾಗಿವೆ. ಆದ್ದರಿಂದ ಇವರು ಸ್ಥಳಿಯವಾಗಿ ಸಿಗುವ ಹಸಿರು ತರಕಾರಿ ಹಾಗೂ ಆಹಾರ ಪದಾರ್ಥಗಳನ್ನು ಬಳಸುವದು ವೈದ್ಯರಿಂದ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸುವದಾಗಿದೆ ಎಂದು ಗಂಜಿ ಅವರು ಹೇಳಿದರು.  

             ಅಧ್ಯಕ್ಷತೆಯನ್ನು ಎಸಿಡಿಪಿಓ ಸವದತ್ತಿ ರೇಣುಕಾ ಕರಿಮೂಡಿ ಇವರು ಕಾರ‌್ಯಕ್ರಮ ಉದ್ಘಾಟಿಸಿ ಮತನಾಡಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಕೊರತೆ ಹೆಣ್ಣು ಮಕ್ಕಳಿಗೆ ಬೇಗ ಮದುವೆ ಮಾಡುವದರಿಂದ ಅಪೌಷ್ಟಿಕತೆಗೆ ಕಾರಣವಾಗಿದೆ. ಇದು ಹೆಚ್ಚಾಗಿ ಮಕ್ಕಳು, ಗರ್ಭಿಣಿ, ಬಾಣಂತಿಯರಲ್ಲಿ ಕಂಡುಬರುತ್ತಿದೆ. 6 ವರ್ಷದೊಳಗಿನ ಮಕ್ಕಳಲ್ಲಿ, ಗರ್ಭಿಣಿ, ಹಾಲುಣಿಸುವ ತಾಯಂದಿರಲ್ಲಿ ಹದಿಹರೆಯದವರಲ್ಲಿ ಅಪೌಷ್ಟಿಕತೆಯಲ್ಲಿ ಬದಲಾವಣೆ ತರುವದು ಸದರಿ ಕಾರ‌್ಯಕ್ರಮದ ಗುರಿಯಾಗಿದೆ. ಆದ್ದರಿಂದ ಈ ತಿಂಗಳದ ದಿವಸಗಳಲ್ಲಿ ಪ್ರತ್ಯೇಕವಾದ ಕಾರ‌್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದನ್ನು ಎಲ್ಲ ಇಲಾಖೆಗಳ ಸಹಯೊಗದೊಂದಿಗೆ ಅನುಷ್ಠಾನಗೊಳಿಸುವದಾಗಿದೆ ಎಂದು ಹೇಳಿದರು. 

             ನವಜಾತ ಶಿಶುಗಳು ಹೆರಿಗೆಯಾದ ಒಂದು ಗಂಟೆಯೊಳಗೆ ತಾಯಿಯ ಎದೆ ಹಾಲು ಕುಡಿಸುವದು. 2 ವರ್ಷದಿಂದ ತಾಯಿಯ ಎದೆ ಹಾಲನ್ನು ಮುಂದುವರೆಸಿ ಮೆದುವಾದ ಪೌಷ್ಠಿಕ ಪೂರಕ ಆಹಾರವನ್ನು ಕೊಡುವದು. ಹದಿಹರೆಯದವರಿಗೆ ಹೆಚ್ಚಿನ ಆಹಾರದ ಅವಶ್ಯಕತೆ ಇದ್ದು ಸಮತೋಲನ ಆಹಾರವನ್ನು ಸೇವಿಸುವದಾಗಿದೆ. ಗರ್ಭಿಣಿಯರು, ಬಾಣಂತಿಯರು ಅಧಿಕ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸಿದಾಗ ಮಗುವಿಗೆ ಸಾಕಷ್ಠು ತಾಯಿಯ ಹಾಲು ಸಿಗುವದು ಎಂದು ಹೇಳಿದರು.  

            ಮಕ್ಕಳ ಆರೋಗ್ಯ ಕಾಪಾಡಲು ಗರ್ಭಪೂರ್ವ ತಯಾರಿ ಕಾಂಗರೂ ಕೇರ್ ವಿಧಾನ, ಮನೆ ಮಟ್ಟದಲ್ಲಿ ಮಕ್ಕಳ ಆರೈಕೆ ಓಆರ್‌ಎಸ್ ಮತ್ತು ಜಿಂಕ ಮಾತ್ರೆಯ  ಬಳಕೆ ಅತೀ ಅವಶ್ಯಕವಾಗಿದೆ ಎಂದು  ಸಮುದಾಯ ಆರೋಗ್ಯ ಅಧಿಕಾರಿಯಾದ ಮಂಜುಳಾ ಈರಗಾರ ಹೇಳಿದರು.  

      ನಂತರ ಪೋಷಣ ಮಾಸಾಚರಣೆ ಅಂಗವಾಗಿ ಮಕ್ಕಳಿಗೆ ಅನ್ನಪ್ರಾಶನ, ಗರ್ಭಿಣಿಯರಿಗೆ ಸೀಮಂತ ಕಾರ‌್ಯಕರಮವನ್ನು ಅಂಗನವಾಡಿ ಮೆಲ್ವಿಚಾರಕಿಯಾದ ಮಾಯವ್ವಾ ಮುಗಳಿಹಾಳ ಹಾಗೂ ಎನ್ ಎಂ ಹಾರೂಗೊಪ್ಪ ನೆರವೇರಿಸಿಕೊಟ್ಟರು.  

ಅತಿಥಿಗಳಾಗಿ ಐ, ಆರ್ ಗಂಜಿ, ಕಸ್ತೂರಿ ಕಡೆಮನಿ, ಮಂಜುಳಾ ಈರಗಾರ, ನಿರ‌್ಮಲಾ ಹಾರೂಗೊಪ್ಪ, ಅಡಿವೆಪ್ಪ ಈಟಗೌಡರ ಕೆ ಎಫ್ ನದಾಫ ಆಗಮಿಸಿದ್ದರು. ಕಾರ‌್ಯಕ್ರಮದಲ್ಲಿ, ಅಂಗನವಾಡಿ ಕಾರ‌್ಯಕರ್ತೆಯರು,  ತಾಯಿಂದಿರು ಆಶಾ ಕಾರ‌್ಯಕರ್ತೆಯರು, ಪಟ್ಟಣ ಪಂಚಾಯತ ಸಿಬ್ಬಂದಿಯವರು,  ಸಾರ್ವಜನಿಕರು ಹಾಜರಿದ್ದರು.    

ಮಾಯವ್ವಾ ಮುಗಳಿಹಾಳ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. 


ಸುದ್ದಿ ಓದಿ