ಗರ್ಭಿಣಿಸ್ತ್ರೀಯರಿಗೆ ಉಡಿತುಂಬುವ ಕಾರ್ಯಕ್ರಮ
ಹಗರಿಬೊಮ್ಮನಹಳ್ಳಿ 03: ಅಮ್ಮ ಸಂಸ್ಥೆಯು ಅಶಕ್ತ ಹಾಗೂ ನೊಂದ ಮನಸ್ಸುಗಳಿಗೆ ಸಾಂತ್ವಾನ ಹೇಳುವ ಕೆಲಸವನ್ನು ತಾಯಿ ಸ್ಥಾನದಲ್ಲಿ ನಿಂತು ಸದಾ ಸೇವೆ ಮಾಡುತ್ತಲೇ ಇರುತ್ತದೆ ಎಂದು ಅಮ್ಮ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕರಾದ ಸಾಯಿರಾಬಾನು ಹೇಳಿದರು.
ಪಟ್ಟಣದ ಸೋನಿಯಾನಗರದಲ್ಲಿ ಅಮ್ಮ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯು ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯ ಅಂಗವಾಗಿ ಗರ್ಭಿಣಿ ಸ್ತ್ರೀಯರಿಗಾಗಿ ಆಯೋಜಿಸಿದ್ದ ಉಡಿತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗರ್ಭಿಣಿಸ್ತ್ರೀಯರಿಗೆ ಉಡಿತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಮಹಿಳೆಯರಿಗೆ ಗೌರವ ಸಮರ್ಪಣೆ ಮಾಡುತ್ತಿದ್ದೇವೆ. ಅನಾದಿಕಾಲದಿಂದಲೂ ಸಮಾಜ ಹೆಣ್ಣನ್ನು ತುಳಿತಕ್ಕೊಳಪಡಿಸುತ್ತಲೇ ಇದೆ. ಆದರೆ ಈ ಶತಮಾನದ ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ತಾವೇನೆಂಬುದನ್ನು ಸಾಬೀತುಮಾಡುವ ಮೂಲಕ ಸಾಧನೆ ಮಾಡಿದ್ದಾರೆ ಎಂದರು.\
ಶುಶ್ರೂಷಕಿ ಮಂಜುಳ, ಸಮಾಜಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವೀರೇಶ್ ಹಿರಲಿಂಗಪ್ಪನವರ್ ಮಾತನಾಡಿದರು.
ಇದೇ ವೇಳೆ ಸಿಂಧು, ರಜಿಯಾ, ಜ್ಯೋತಿ, ಪವಿತ್ರ, ಶವಿಮ್, ಲಕ್ಷ್ಮಿ, ಮಾಬುನ್ನಿ, ಭಾರತಿ, ಸುಜಾತ, ಮಂಜುಳ ಈ ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಉಡಿತುಂಬು ಕಾರ್ಯಕ್ರಮ ನಡೆಯಿತು.
ಪುರಸಭೆ ಸದಸ್ಯೆ ರಜಿಯಾಬೇಗಂ, ತಾಲೂಕು ಕಾಂಗ್ರೆಸ್ ಮಹಿಳಾಘಟಕ ಅಧ್ಯಕ್ಷೆ ಯಶೋಧ ಮಂಜುನಾಥ, ಹಿರಿಯ ಮುಖಂಡರಾದ ಪದ್ದಮ್ಮ, ಹೊನ್ನಮ್ಮ, ಬಿ.ಬಾನಮ್ಮ, ಸಫರಾ ಬಾಬುವಲಿ, ಮಾಜಿ ಗ್ರಾ.ಪಂ ಸದಸ್ಯೆ ಬಾಳಮ್ಮ, ಸೀಗೆನಹಳ್ಳಿ ಗ್ರಾ.ಪಂ ಸದಸ್ಯರು ರಜಿಯಾಬೇಗಂ ಮತ್ತಿತರರು ಇದ್ದರು.
ಅಂಗನವಾಡಿ ಕಾರ್ಯಕರ್ತೆಯರಾದ ಮಾರೆಕ್ಕ, ಶೈಲಶ್ರೀ ಪ್ರಾರ್ಥಿಸಿದರು, ತೇಜಸ್ವಿನಿ ಸ್ವಾಗತಿಸಿದರು, ರೇಷ್ಮ ಮತ್ತು ನಜ್ಮಾ ವಂದಿಸಿದರು, ಆಶಾಬೇಗಂ ನಿರೂಪಿಸಿದರು.