ಕಲೆ ಸಂಸ್ಕೃತಿ ಉಳಿಸಿ ಬೆಳೆಸಲು ನಮ್ಮೂರ ನಾಟಕೋತ್ಸವ
ಸಿರುಗುಪ್ಪ16: ಆಂಧ್ರ ಗಡಿಭಾಗ ಪ್ರದೇಶಗಳಲ್ಲಿ ಕನ್ನಡ ರಂಗಭೂಮಿ ಕಲಾವಿದರು ಎಲೆಮರಿ ಕಾಯಿ ಎಂತೆ ಇದ್ದಾರೆ ಗಡಿನಾಡು ಕನ್ನಡ ಭಾಷಾಭಿಮಾನಿಗಳಿಗೆ ಸರ್ಕಾರ ಪ್ರೋತ್ಸಾಹಿಸಿದರೆ ಹೆಚ್ಚು ಪ್ರಚಾರವಾಗಲು ಸಾಧ್ಯ ಎಂದು ರಂಗ ನಿರ್ದೇಶಕ ನಾಟಕಕಾರ ವಿ ರಾಮಲಿಂಗಪ್ಪ ಹೇಳಿದರು.
ತಾಲೂಕಿನ ಬೈರಾಗಂ ದಿನ್ನಿ ಗ್ರಾಮದಲ್ಲಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಕಾರಂತ ರಂಗಾಲೋಕ ಕಲಾತ್ಮಕ ಮನಸ್ಸುಗಳ ತಾಣ ಸಹಭಾಗಿತ್ವದಲ್ಲಿ ನಡೆದ ನಮ್ಮೂರ ನಾಟಕೋತ್ಸವ ದಲ್ಲಿ ಅವರು ಮಾತನಾಡುತ್ತಿದ್ದರು ಗಡಿನಾಡಿನ ಹಾಸ್ಯ ರಂಗ ಕಲಾವಿದ ಜಂಬನ ಗೌಡ ನದಿಚಾಗಿ ಅವರು ಮಾತನಾಡಿ ಗಡಿಭಾಗದಲ್ಲಿ ಕಲೆ ಸಂಸ್ಕೃತಿ ಉಳಿಸಿ ಬೆಳೆಸಬೇಕೆಂದರು ಕೆ ಸಂತೋಷ ತಂಡದವರಿಂದ ಅಕ್ಕ ನಾಗಲಾಂಬಿಕೆ ನಾಟಕ ಪ್ರದರ್ಶಿಸಿದರು. ಕೆ ಪುರುಷೋತ್ತಮ ತಂಡದವರು ಕಿತ್ತೂರು ಕ್ರಾಂತಿ ನಾಟಕ ಮತ್ತು ವೈ ಮಂಜುನಾಥ್ ನೇತೃತ್ವದಲ್ಲಿ ಮಕ್ಕಳ ಸಾಮುಹಿಕ ನೃತ್ಯಗಳು ವೈಭವಿಕರಿಸಿದವು ಭಜನಾ ಕಲಾವಿದ ಬಿ ಮುದುಕಪ್ಪ , ರಂಗ ಕಲಾವಿದರಾದ ಮಂಜು ಸಿರಿಗೇರಿ, ತಿರುಮಲ ವೆಂಕಟೇಶ್, ಸಂಸ್ಥ ಕಾರ್ಯದರ್ಶಿ ಆರ್ ಪಿ ಮಂಜುನಾಥ, ಮುಖಂಡರಾದ ಪುರುಷೋತ್ತಮ, ಸತ್ಯನಾರಾಯಣ ರೆಡ್ಡಿ, ನಾಗನಗೌಡ, ಮಲ್ಲನಗೌಡ, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ಮತ್ತಿತರರ ಗಣ್ಯರು ಗ್ರಾಮಸ್ಥರು ಪಾಲ್ಗೊಂಡಿದ್ದರು.