ತಾಳಿಕೋಟಿ

ಬಡವರ ಪಾಲಿಗೆ ಬೆಳಕಾದ ನಡಹಳ್ಳಿ ಕುಟುಂಬ

ಬಡವರ ಪಾಲಿಗೆ ಬೆಳಕಾದ ನಡಹಳ್ಳಿ ಕುಟುಂಬ

ತಾಳಿಕೋಟಿ21:  ನಮ್ಮ ಸಮಾಜದಲ್ಲಿ ಇಂದು ಶ್ರಿಮಂತರ ಕೊರತೆಇಲ್ಲ ಹೃದಯವಂತರ ಕೊರತೆ ಇದೆ, ಹೃದಯ ಶ್ರೀಮಂತಿಕೆಯನ್ನು ಹೊಂದಿರುವ ಮುದ್ದೇಬಿಹಾಳ ಜನಪ್ರೀಯ ಶಾಸಕ ನಡಹಳ್ಳಿ ಹಾಗೂ ಅವರ ಕುಟುಂಬದವರ ಸೇವಾ ಕಾರ್ಯಗಳು ಮತಕ್ಷೇತ್ರದ ಜನರ ಮೆಚ್ಚುಗೆಗೆ ಪಾತ್ರವಾಗಿವೆ.  

ರಾಜಕೀಯ ರಂಗಕ್ಕೆ ಬರುವ ಪೂರ್ವದಲ್ಲಿಯೆ ಶಾಸಕ ನಡಹಳ್ಳಿ ಹಾಗೂ ಅವರ ಕುಟುಂಬದ ಸದಸ್ಯರು ಸಮಾಜಸೇವಾ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಅವರ ಕುಟುಂಬದ ಪರಿಚಯ ಜನರಿಗೆ ಆಗಿದ್ದೆ ಅವರ ಸಮಾಜ ಸೇವಾ ಕಾರ್ಯಗಳಿಂದ ಮೂಲಃತ ಕಡು ಬಡವ ರೈತ ಕುಟುಂಬದಲ್ಲಿ ಜನಿಸಿದ ನಡಹಳ್ಳಿಯವರು ಬೆಳೆದು ಬಂದಿರುವುದು ಶ್ರೀ ಸಿದ್ಧಗಂಗಾ ಮಠದ ಶ್ರೀಗಳ ದಾಸೋಹದ ಆಶಿರ್ವಾದದಿಂದ ಬಡತನದ ನೋವನ್ನು ಅನುಭವಿಸಿ ಬೆಳೆದಿರುವುದರಿಂದಲೆ, ಅವರಿಗೆ ಬಡವರ ಕುರಿತು ಅಪಾರ ಕಾಳಜಿ ಇದ್ದು ಅವರಿಗಾಗಿ ಸದಾ ಏನಾದರು ಮಾಡುತ್ತಲೆ ಇರುತ್ತಾರೆ. 

ಬಡವರ ವಿವಾಹಗಳಿಗೆ ಆರ್ಥಿಕ ನೆರವು ಅವರಿಗೆ ಉಚಿತ ವೈದ್ಯಕೀಯ ಸಹಾಯ, ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ಧನ ಸಹಾಯ, ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ, ಅಪಘಾತಗಳಲ್ಲಿ ಮೃತರಾದ ಬಡವರಿಗೆ ನೆರವು, ಹೀಗೆ ಅವರ ಸೇವಾ ಕಾರ್ಯಗಳ ಪಟ್ಟಿ ಬೆಳೆಯುತ್ತಲೆ ಹೊಗುತ್ತದೆ. ಕೊವಿಡ್ ಸಂಧರ್ಭದಲ್ಲಿ ಅವರ ಇಡೀ ಕುಟುಂಬ ಮಾಡಿದ ಸೇವೆಯನ್ನು ಕ್ಷೇತ್ರದ ಜನ ಎಂದಿಗೂ ಮರೆಯುವುದಿಲ್ಲ ಬಡವರಿಗಾಗಿ ನನ್ನ ದಾಸೋಹ ನಿಲಯ ಸದಾ ತೆರೆದಿದೆ ಎಂದು ಶಾಸಕ ನಡಹಳ್ಳಿ ತಿಳಿಸುತ್ತಾರೆ. ತಮ್ಮ ಈ ಎಲ್ಲಾ ಸೇವಾಕಾರ್ಯಗಳಲ್ಲಿ ಅವರೆಂದು ಜಾತಿ ಭೇಧ ಮಾಡಿದವರಲ್ಲ. ಮತಕ್ಷೇತ್ರದ ಯಾವುದೆ ಸಮಾಜದ ವಿವಾಹ ಹಾಗೂ ಅಂತ್ಯಕ್ರಿಯೆ ಕಾರ್ಯಕ್ರಮವಿರಲಿ ಅವುಗಳಲ್ಲಿ ತಕ್ಷಣ ಸ್ಪಂಧಿಸುವ ಅವರ ಈ ಜಾತ್ಯಾತೀತ ಮನೋಭಾವವೆ ಅವರನ್ನು ಇಂದು ಎಲ್ಲ ಸಮಾಜದವರು ಪ್ರೀತಿಸುವಂತೆ ಮಾಡಿದೆ.  

ಶಾಸಕ ನಡಹಳ್ಳಿ ಇವರು ಮಾಡುತ್ತೀರುವ ಈ ಎಲ್ಲಾ ಸೇವಾ ಕಾರ್ಯಗಳಲ್ಲಿ  ಅವರ ಧರ್ಮ ಪತ್ನಿ ಹಾಗೂ ಅವರ ಇಬ್ಬರು ಪುತ್ರರು ಅವರಿಗೆ ಸಂಪೂರ್ಣವಾಗಿ ಸಾಥ ಕೊಡುತ್ತೀದ್ದಾರೆ ಅವರ ರಾಜಕೀಯ ವಿರೋಧಿಗಳು ಅವರನ್ನು ಎಷ್ಟೇ ವಿರೋಧಿಸಿದರು ಕ್ಷೇತ್ರದ ಜನರು ಮಾತ್ರ ಅವರ ಈ ಸೇವಾ ಕಾರ್ಯಗಳಿಂದ ಫುಲ್ ಖುಷ್ ಆಗಿದ್ದಾರೆ. ನಿಜವಾಗಿಯು ನಡಹಳ್ಳಿ ಕುಟುಂಬ ಬಡವರ ಪಾಲಿಗೆ ಬೆಳಕಾಗಿದೆ. 


ಸುದ್ದಿ ಓದಿ