ರಾಷ್ಟ್ರೀಯ

ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ ರಾಷ್ಟ್ರಪತಿ - ಪ್ರಧಾನಿ

ಜನತೆಗೆ   ಹೊಸ ವರ್ಷದ ಶುಭಾಶಯ ಕೋರಿದ ರಾಷ್ಟ್ರಪತಿ - ಪ್ರಧಾನಿ

ನವದೆಹಲಿ, ಜ 1 :ರಾಷ್ಟ್ರಪತಿ ರಾಮನಾಥ್ ಕೋವಿಂದ್  ಹಾಗೂ  ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರು ದೇಶವಾಸಿಗಳಿಗೆಗೆ ಟ್ವೀಟ್ ಮೂಲಕ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಹೊಸ ಭರವಸೆ, ಹೊಸ ಹುರುಪಿನೊಂದಿಗೆ ಹೊಸ ವರ್ಷವನ್ನು ಸರಳವಾಗಿ ಸ್ವಾಗತಿಸಿರುವ ಭಾರತೀಯರನ್ನು ಅವರು ಮನಸಾರೆ ಅಭಿನಂದಿಸಿದ್ದಾರೆ. ದೇಶದ ಜನತೆಗೆ ಟ್ವೀಟ್ ಮಾಡಿರುವ ಅವರು 'ಎಲ್ಲರಿಗೂ 2021 ರ ಶುಭಾಶಯಗಳು! ಈ ವರ್ಷ ಉತ್ತಮ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಭರವಸೆ ಮತ್ತು ಸ್ವಾಸ್ಥ್ಯದ ಮನೋಭಾವ ಗೆಲುವು ಸಾಧಿಸಲಿ  ಎಂದೂ ಅವರು ಸಂದೇಶದಲ್ಲಿ  ಹೇಳಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದು, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು! ಹೊಸ ವರ್ಷವು  ಸಾಮೂಹಿಕ ಅಭಿವೃದ್ಧಿಗೆ ಅವಕಾಶ ಒದಗಿಸುತ್ತದೆ. ಕೊರೋನ  ಪರಿಸ್ಥಿತಿಯಿಂದ ಉಂಟಾಗಿರುವ  ಸವಾಲುಗಳು  ಒಗ್ಗಟ್ಟಿನಿಂದ ಎದುರಿಸೋಣ ಎಂದು ಭರವಸೆ ನೀಡಿದ್ದಾರೆ. 

ಸುದ್ದಿ ಓದಿ