ಎಸ್ಜೆಎಂವಿ ಮಹಿಳಾ ಮಹಾವಿದ್ಯಾಲಯಕ್ಕೆ ನ್ಯಾಕ್ ಸಮಿತಿ ಭೇಟಿ
ರಾಣಿಬೆನ್ನೂರ15: ಸ್ಥಳೀಯ ಎಸ್ಜೆಎಂವಿ ಮಹಿಳಾ ಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿಯು ಭೇಟಿ ನೀಡಿ ಪರಿಶೀಲನೆ ನಡೆಸಿತು.
ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಮಿತಿಯ ತಂಡದ ಚೇರಮನ ಡಾ. ಸಸ್ಮಿತ ಸಾಮಂತ, ಪ್ರೊ. ಚಾನ್ಸಲರ್, ಕೆ.ಐ.ಟಿ.ಭುವನೆಶ್ವರ, ಸಮನ್ವಯ ಅಧಿಕಾರಿ ವಶಿಷ್ಠ ನಾರಾಯಣ ತ್ರಿಪಾಠಿ, ಸದಸ್ಸಿಣಿ ಡಾ. ವಿಜಯಲಕ್ಷ್ಮಿ ಟಿ, ಮಲ್ಲೇಶ ಸಿದ್ದಾರ್ಥ ಇವರನ್ನೊಳಗೊಂಡ ಪರಿಶೀಲನಾ ಸಮಿತಿ ಪರಿಶೀಲನೆ ನಡೆಸಿತು.
ಮಹಿಳಾ ಮಹಾವಿದ್ಯಾಲಯದ ಪಠ್ಯಕ್ರಮ, ಬೋಧನಾ ಮತ್ತು ಕಲಿಕಾ ವಿಧಾನ, ಸಂಶೋಧನಾ ಮತ್ತು ವಿಸ್ತರಣಾ ಚಟುವಟಿಕೆ, ವಿದ್ಯಾರ್ಥಿಗಳ ಉನ್ನತೀಕರಣ, ಕಲಿಕಾ ಸಂಪನ್ಮೂಲ ಹಾಗೂ ಆಡಳಿತ, ಕಾಲೇಜಿನ ಉತ್ತಮ ನಡುವಳಿಕೆ ಈ ಎಲ್ಲ ಅಂಶಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿದರು.
ಉನ್ನತ ಶಿಕ್ಷಣದ ಪಾಲುದಾರರಾದ ವಿದ್ಯಾರ್ಥಿನಿಯರು, ಆಡಳಿತ ಮಂಡಳಿ, ಪೋಷಕರು ಮಹಾವಿದ್ಯಾಲಯದ ಕಾರ್ಯಚಟುವಟಿಕೆಗಳಲ್ಲಿ ಉತ್ತಮ ಪಾಲ್ಗೊಳ್ಳುವಿಕೆಯ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿ ಕಾಲೇಜಿನ ಉತ್ತಮ ಅಂಶಗಳ ಬಗ್ಗೆ ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಗ್ರ ವರದಿಯನ್ನು ಪ್ರಾಚಾರ್ಯ ಡಾ.ಜಿ.ಇ.ವಿಜಯಕುಮಾರ ಹಾಗೂ ನ್ಯಾಕ್ ಕೋಆರ್ಡಿನೇಟ ಪ್ರೊ.ಜಿ.ವ್ಹಿ. ಕೋರಿಯವರಿಗೆ ನೀಡಿದರು.
ಪ್ರಾಚಾರ್ಯ ಡಾ. ಜಿ.ಇ.ವಿಜಯಕುಮಾರ, ನ್ಯಾಕ್ ಕೋ ಆರ್ಡಿನೇಟರ್ï ಪ್ರೊ.ಜಿ.ವ್ಹಿ. ಕೋರಿ, ವಿದ್ಯಾಪೀಠದ ನಿರ್ದೇಶಕ ಬಿ.ಎನ್. ಪಾಟೀಲ ಹಾಗೂ ಕಾಲೇಜಿನ ಸಿಬ್ಬಂಧಿ ವರ್ಗದವರು ಇದ್ದರು.