ರಾಣೆಬೆನ್ನೂರ

ಆರ್‍ಟಿಇಎಸ್ ಕಾಲೇಜಿಗೆ ನ್ಯಾಕ್ ಸಮಿತಿ ಭೇಟಿ

ಆರ್‍ಟಿಇಎಸ್ ಕಾಲೇಜಿಗೆ ನ್ಯಾಕ್ ಸಮಿತಿ ಭೇಟಿ

ರಾಣಿಬೆನ್ನೂರ 05: ಸ್ಥಳೀಯ ಆರ್‍ಟಿಇಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ತೃತೀಯ ನ್ಯಾಕ್ ಪರಿವೀಕ್ಷಣಾ ಪ್ರಕ್ರಿಯೆಯು ಶುಕ್ರವಾರ ಪೂರ್ಣಗೊಂಡಿತು. ನ್ಯಾಕ್‍ನಿಂದ ನೇಮಕಗೊಂಡ ಮೂರು ಜನರ ಪರಿವೀಕ್ಷಣಾ ಸಮೀತಿಯ ತಂಡವು ಮಹಾವಿದ್ಯಾಲಯದ ಶೈಕ್ಷಣಿಕ, ಆಡಳಿತಾತ್ಮಕ, ಸಾಂಸ್ಕೃತಿಕ ಮತ್ತು ಸಂಶೋಧನಾತ್ಮಕ ಪ್ರಕ್ರಿಯೆಯನ್ನು ಅಮೂಲಾಗ್ರವಾಗಿ ಪರಿಶೀಲಿಸಿತು.

ಈ ನಾಕ್ ಸಮೀತಿಯಲ್ಲಿ ಮುಂಬೈ ಎಸ್‍ಎನ್‍ಡಿಟಿ ಮಹಿಳಾ ವಿಶ್ವವಿದ್ಯಾಲಯದ ಡಾ. ವಿಷ್ಣು ಮಗಾರೆ ಅವರು ಅಧ್ಯಕ್ಷರಾಗಿ, ಉತ್ತರಪ್ರದೇಶದ ಪೂರ್ವಾಂಚಲ ವಿಶ್ವವಿದ್ಯಾಲಯದ ವ್ಯಾವಹಾರಿಕ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರೂ, ಐಕ್ಯೂಎಸಿ ಮತ್ತು ರೂಸಾ ಸಂಯೋಜಕ ಡಾ. ಮಾನಸ ಪಾಂಡೆ ಅವರು ನ್ಯಾಕ್ ಸಮಿತಿಯ ಸಂಯೋಜಕ ಸದಸ್ಯರಾಗಿ, ಗುಜರಾತಿನ ವಾಪಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಹೇಮಾಲಿ ದೇಸಾಯಿ ಸದಸ್ಯರಾಗಿ ಈ ಪರಿವೀಕ್ಷಣಾ ಸಮೀತಿಯಲ್ಲಿ ಭಾಗವಹಿಸಿದ್ದರು.

ಮಹಾವಿದ್ಯಾಲಯದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಸಮೀತಿ ಪರಿಶೀಲಿಸಿತು. ಇದು ಮಹಾವಿದ್ಯಾಲಯದ ಕಳೆದ ಐದು ವರ್ಷಗಳ ಸರ್ವಾಂಗೀಣ ಪ್ರಗತಿಯ ಪರಿಶೀಲಿಸಿ ಬೆಂಗಳೂರಿನ ನ್ಯಾಕ್ ಕೇಂದ್ರಕ್ಕೆ ವರದಿಯನ್ನು ಮಾಡುವುದರ ಜೊತೆಗೆ ಮಹಾವಿದ್ಯಾಲಯದ ಪ್ರಾಂಶುಪಾಲ ಎಫ್.ಎಚ್.ಮಾಚೇನಹಳ್ಳಿ ಯವರಿಗೆ ಗೌಪ್ಯ ವರದಿಯನ್ನು ನೀಡಿದರು.  

ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಸುಭಾಷ್ ಸಾವುಕಾರ,  ಪ್ರಾಚಾರ್ಯ ಎಫ್.ಎಚ್.ಮಾಚೇನಹಳ್ಳಿ, ಐಕ್ಯೂಎಸಿ ಸಂಯೋಜಕ ಸಿ.ಎ.ಹರಿಹರ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿದ್ದರು.


ಸುದ್ದಿ ಓದಿ