ಮೃತ್ಯುಂಜಯ ನರ್ಸಿಂಗ ಹೋಮ ಎಬಿಎಆರ್ಕೆ ಪ್ರಶಸ್ತಿಗೆ ಆಯ್ಕೆ
ಶಿಗ್ಗಾವಿ 14: ಜಿಲ್ಲೆಯಲ್ಲಿ ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಹೆಚ್ಚಿನ ಸಂಖೈಯಲ್ಲಿ ರೋಗಿಗಳ ನೊಂದಣಿ, ಚಿಕಿತ್ಸೆ, ಆರೈಕೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಜಿಲ್ಲೆಯಲ್ಲಿ ಏಕೈಕ ಆಸ್ಪತ್ರೆ ಮೃತ್ಯುಂಜಯ ನರ್ಸಿಂಗ ಹೋಮ ಶಿಗ್ಗಾವಿ ಪ್ರಶಸ್ತಿಗೆ ಆಯ್ಕೆಯಾಗಿದ್ದು ಸಂತಸ ತಂದಿದೆ ಎಂದು ಡಾ. ಎಂ.ಎಂ.ತಿರ್ಲಾಪೂರ ಹೇಳಿದರು.
ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಯೋಜನೆಯ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ನವದೆಹಲಿ ಉದ್ದೇಶಿಸಿರುತ್ತದೆ. ಈ ಹಿನ್ನಲೆಯಲ್ಲಿ ಈ ಯೋಜನೆಯ ಸದುಯೋಗವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿರುವ ಆಧಾರದ ಮೇಲೆ ಸಾರ್ವಜನಿಕ ಹಾಗೂ ನೊಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ಪ್ರಮಾಣ ಪತ್ರಗಳನ್ನು ನೀಡಲು ಉದ್ದೇಶಿಸಿದ್ದು, ಸದರಿ ಪ್ರಮಾಣ ಪತ್ರಗಳನ್ನು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿತರಿಸಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ನವದೆಹಲಿ ಹಾಗೂ ಕಾರ್ಯಕಾರಿ ನಿರ್ದೇಶಕರು ಸುವರ್ಣ ಆರೋಗ್ಯ ಟ್ರಸ್ಟ ( ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ) ಬೆಂಗಳೂರ ಇವರಿಂದ ನಿರ್ದೇಶಿಸಲ್ಪಟ್ಟಿದೆ ಎಂದರು.
ಜಿಲ್ಲೆಯಲ್ಲಿ ಈ ಕೆಳಕಾಣಿಸಿದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಾದ ಸಾರ್ವಜನಿಕ ಆಸ್ಪತ್ರೆ ಹಾನಗಲ್, ಸಮುದಾಯ ಆರೋಗ್ಯ ಕೇಂದ್ರ ಅಕ್ಕಿಆಲೂರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಳ್ಳೂರು, ಮೃತ್ಯುಂಜಯ ನರ್ಸಿಂಗ್ ಹೋಮ ಶಿಗ್ಗಾವಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಪ್ರಶಸ್ತಿಗೆ ಭಾಜನರಾಗಿದ್ದು ಸದರಿ ಆಸ್ಪತ್ರೆಗಳಿಗೆ ಅಭಿನಂದನೆ ಸಲ್ಲಿಸಲು ಮಾನ್ಯ ಜಿಲ್ಲಾಧಿಕಾರಿಗಳ ಅನುಮೋದನೆಯಂತೆ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಪ್ರಮಾಣ ಪತ್ರ ವಿತರಿಸಲಾಗುವುದು ಆದ್ದರಿಂದ ಆಯಾ ಆಸ್ಪತ್ರೆಗಳ ಮುಖ್ಯಸ್ಥರು ಹಾಜರಿರಬೇಕು ಎಂದು ಕೋರಿದೆ.
ಡಾ. ರಾಣಿ ತಿರ್ಲಾಪೂರ ಮಾತನಾಡಿ ನಮ್ಮ ಈ ಆಸ್ಪತ್ರೆ ಪ್ರಾರಂಭವಾದಾಗಿನಿಂದ ತಾಲೂಕಿನ ಜನತೆಗೆ ಉತ್ತಮ ಚಿಕಿತ್ಸೆ ನೀಡುತ್ತಾ ಬಂದಿದ್ದು ಅದರ ಶ್ರೇಯಸ್ಸು ಇಂದು ನಮಗೆ ಪ್ರಶಸ್ತಿ ಪ್ರಮಾಣ ಪತ್ರ ಪಡೆಯಲು ಕಾರಣವಾಗಿದೆ ಎಂದರು.
ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಪ್ರಶಸ್ತಿಗೆ ಭಾಜನರಾಗಲು ಸಹಕರಿಸಿದ ತಾಲೂಕಿನ ಎಲ್ಲ ತಜ್ಞ ವೈದ್ಯರಿಗೂ, ಹಾಗೂ ಎಲ್ಲ ಸಿಬ್ಬಂದಿ ವರ್ಗದವರಿಗೂ ಮತ್ರು ತಾಲೂಕಿನ ಹಾಗೂ ಜಿಲ್ಲೆಯ ಸಮಸ್ತ ಜನತೆಗೆ ಹೃದಯ ಪೂರ್ವಕ ಅಭಿನಂದನೆಗಳು.
ಡಾ. ಎಂ.ಎಂ.ತಿರ್ಲಾಪೂರ
ಮುಖ್ಯಸ್ಥರು, ಮೃತ್ಯುಂಜಯ ನರ್ಸಿಂಗ ಹೋಮ ಶಿಗ್ಗಾವಿ.