ಶಿಗ್ಗಾವ್

ಮೈಲಾರಲಿಂಗೇಶ್ವರ ಛಟ್ಟಿ ಭಂಡಾರ ಪೂಜಾ ಹಾಗೂ ಪುರಾಣ ಪ್ರವಚನ ಕಾರ್ಯಕ್ರಮ

ಮೈಲಾರಲಿಂಗೇಶ್ವರ ಛಟ್ಟಿ ಭಂಡಾರ ಪೂಜಾ ಹಾಗೂ ಪುರಾಣ ಪ್ರವಚನ ಕಾರ್ಯಕ್ರಮ


ಲೋಕದರ್ಶನ ವರದಿ 

ಶಿಗ್ಗಾವಿ 05: ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿಯ ಛಟ್ಟಿ ಭಂಡಾರ ಪೂಜಾ ಕಾರ್ಯಕ್ರಮ ಹಾಗೂ 9 ದಿನಗಳ ಕಾಲ ಮೈಲಾರಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದ ಮೊದಲನೇ ದಿನದಲ್ಲಿ ಮೈಲಾರಲಿಂಗೇಶ್ವರ ಸಧ್ಭಕ್ತ ಮಂಡಳಿಯ ನೂತನ ಕಮೀಟಿಯ ಉಧ್ಘಾಟನೆ ಕಾರ್ಯಕ್ರಮ ಜರುಗಿತು ಕಾರ್ಯಕ್ರಮದ ಉಧ್ಘಾಟನೆ ಮಾಡಿ ಮಾತನಾಡಿದ ಮಾಜಿ ಸಂಸಧ  ಮಂಜುನಾಥ ಕುನ್ನೂರ ಅವರು ಶ್ಯಾಡಂಬಿ ಗ್ರಾಮವು ಧಾರ್ಮಿಕವಾಗಿ ಸಾಂಸ್ರ್ಕತಿಕವಾಗಿ ಹೆಸರುವಾಸಿಯಾಗಿರುವ ಗ್ರಾಮವಾಗಿದ್ದು ಸಣ್ಣ ಗ್ರಾಮವಾಗಿದ್ದರು ಪ್ರತಿ ವರ್ಷ ಇಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು ಏರಿ​‍್ಡಸುವುದರ ಮೂಲಕ ಧಾರ್ಮಿಕ ದೈವ ಜಾಗ್ರತಿ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.  

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತ ಫಕ್ಕಿರೇಶ ಕೊಂಡಾಯಿ ಅವರನ್ನು ಕಮೀಟಿಯ ವತಿಯಿಂದ ಸನ್ಮಾನಿಸಲಾಯಿತು ಮುಖ್ಯ ಅತಿಥಿಗಳಾಗಿದ್ದ ಕೆ.ಪಿ.ಸಿ.ಸಿ ಸದಸ್ಯರಾದ ಎಸ್‌.ಎಸ್‌.ಶಿವಳ್ಳಿ, ಬಿ.ಜೆ.ಪಿ ತಾಲೂಕಾಧ್ಯಕ್ಷ  ಶಿವಾನಂದ ಮ್ಯಾಗೇರಿ, ಮಾಜಿ ತಾ.ಪಂ.ಸದಸ್ಯ ಎಸ್‌.ಎಸ್‌.ಬಿಂಗಾಪುರ, ಗಂಗಪ್ಪ ಹುಲ್ಲೂರ ಬಸನಗೌಡ ರಾಮನಗೌಡ್ರ ಮಾತನಾಡಿದರು ಕಾರ್ಯಕ್ರಮದಲ್ಲಿ ಜಯದೇವ ಅಗಡಿ, ಹೇಮಂತ ಮೋದಿ, ಗ್ರಾಂ.ಪಂ ಸದಸ್ಯರಾದ  ಬಸನಗೌಡ ಪಾಟೀಲ. ನಾಗರಾಜ ಸಿಂಧೆ,  ಮೈಲಾರಲಿಂಗೇಶ್ವರ ಸದ್ಭಕ್ತ ಮಂಡಳಿಯ ಗೌರವಾಧ್ಯಕ್ಷ ಪರಶುರಾಮ ಕಾಳಿ, ಅಧ್ಯಕ್ಷ ಧರ್ಮಣ್ಣ ಕಿವಡನವರ, ನೀಲಪ್ಪ ಮಾಕಪ್ಪನವರ ಹಾಗೂ ರುದ್ರ​‍್ಪ ಕಾಳಿ, ಮಲ್ಲಿಕಾರ್ಜುನ ಅಗಸರ, ಜಿನ್ನಪ್ಪ ವರೂರ ಕಮೀಟಿಯ ಸದಸ್ಯರು ಭಾಗವಹಿಸಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷ ರುದ್ರಗೌಡ ಪಾಟೀಲ ವಹಿಸಿದ್ದರು ದೇವರಗುಡ್ಡದ ನಾಗಪ್ಪಜ್ಜನವರು ಹಾಗೂ ವೇ.ಮೂ.ಸೋಮಯ್ಯನವರ ಹಿರೇಮಠ ಸಾನಿಧ್ಯ ವಹಿಸಿದ್ದರು ವೇ.ಮೂ?ಸದಾಶಿವ ಶಾಸ್ತ್ರೀ ಹಿರೇಮಠ ಸಾ.ಹಾಲಗಿ ಪುರಾಣ ಪ್ರವಚನ ನಡೆಸಿಕೊಟ್ಟರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ರ್ಕತ ಕಲಾವಿದರಾದ  ವೀರೇಶ ಕಿತ್ತೂರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು, ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ