ನನ್ನ ನೆಚ್ಚಿನ ಪುಸ್ತಕ ಸ್ಪಧರ್ೆ ಕಾರ್ಯಕ್ರಮ

ನನ್ನ ನೆಚ್ಚಿನ ಪುಸ್ತಕ ಸ್ಪಧರ್ೆ ಕಾರ್ಯಕ್ರಮ

ಲೋಕದರ್ಶನ ವರದಿ

ಬಳ್ಳಾರಿ03: ವಿದ್ಯಾಥಿಗಳು ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪುಸ್ತಕ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ತೆಕ್ಕಲಕೋಟೆ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಾನಕರಿ ಶ್ರೀನಿವಾಸಾಚಾರ್ಯರು ತಿಳಿಸಿದರು. 

       ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸ್ಮಾರಕ ಸಕರ್ಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಜಾಣ ಜಾಣೆಯರ ಬಳಗವು ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ "ಪುಸ್ತಕ ಸಂಸ್ಕೃತಿ- ನನ್ನ ನೆಚ್ಚಿನ ಪುಸ್ತಕ" ವಿದ್ಯಾಥರ್ಿಗಳ ಅಭಿಪ್ರಾಯ ಮಂಡನೆ ಸ್ಪಧರ್ೆ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಪುಸ್ತಕ ಸಂಸ್ಕೃತಿಯ ಬಗ್ಗೆ ಮಾತಾನಾಡುತ್ತಾ  ವಿದ್ಯಾಥರ್ಿಗಳಿಗೆ ಸಾಹಿತ್ಯಾಭಿ ರುಚಿಯ ಮಹತ್ವವನ್ನು ತಿಳಿಸಿದರು. 

ಕಾರ್ಯಕ್ರಮದಲ್ಲಿ ಮುನಿಸಿಪಲ್ ಕಾಲೇಜಿನ ಉಪನ್ಯಾಸಕ ಕೆ. ಸುಂಕಪ್ಪ, ಬಳ್ಳಾರಿ ನಗರದ ಸಕರ್ಾರಿ ಮಹಿಳಾ ಪ್ರಥಮ ದಜರ್ೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಸಿ. ಕೊಟ್ರೇಶ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ. ರಾಧಾಕೃಷ್ಣ ವಹಿಸಿಕೊಂಡಿದ್ದರು. ಜಾಣ ಜಾಣೆಯರ ಬಳಗದ ಸಂಚಾಲಕರು ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಎಂ. ಸೋಮಶೇಖರ, ವಿದ್ಯಾಥರ್ಿ ಪ್ರತಿನಿಧಿಯಾದ ಪವನ್ಕುಮಾರ ಎ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಲಾ ವಿಭಾಗ ವಿದ್ಯಾಥರ್ಿಗಳಾದ ಶರಣಪ್ಪ, ಸುನೀತ ಕಾರ್ಯಕ್ರಮ ನಿರ್ವಹಣೆ ಮಾಡಿದರು. ತಿಪ್ಪೇಸ್ವಾಮಿ ನಾಯ್ಕ ಸ್ವಾಗತಿಸಿದರು. ಹೇಮಲತಾ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಬೋಧಕರು, ಬೋಧಕೇತರ ಸಿಬ್ಬಂದಿಗಳೂ, ವಿದ್ಯಾಥರ್ಿಗಳು ಹಾಜರಿದ್ದರು. 

 

ಸುದ್ದಿ ಓದಿ